Advertisement

ಗುಜರಾತ್‌ ಶಾಂತಿಯುತ ಮತದಾನ; ಸೂರತ್‌ನಲ್ಲಿ ಕೆಟ್ಟುಹೋದ ಇವಿಎಂ

11:03 AM Dec 09, 2017 | Team Udayavani |

ಅಹ್ಮದಾಬಾದ್‌ : ಗುಜರಾತ್‌ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ಶನಿವಾರ (ಡಿ.9) ಬೆಳಗ್ಗೆ 8 ಗಂಟೆಗೆ ಶಾಂತಿಯುತವಾಗಿ ಆರಂಭವಾಗಿ ಬಿರುಸಿನಿಂದ ಸಾಗುತ್ತಿದೆ. 

Advertisement

ಮೊದಲ ಹಂತದ ಚುನಾವಣೆಯಲ್ಲಿ ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್‌ ಪ್ರಾಂತ್ಯಗಳಿಗೆ ಒಳಪಟ್ಟ 89 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಬೆಳಗ್ಗೆ 8 ಗಂಟೆಗೆ ಸರಿಯಾಗಿ ಮತದಾನ ಆರಂಭವಾಯಿತು.

ಮೊದಲ ಹಂತದ ಚುನಾವಣಾ ಕಣದಲ್ಲಿ ಒಟ್ಟು 977 ಅಭ್ಯರ್ಥಿಗಳು ಇದ್ದಾರೆ. ಸುಮಾರು 2.12 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ.

ಆಳುವ ಬಿಜೆಪಿ ಐದನೇ ಬಾರಿಗೆ ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ. ಕಾಂಗ್ರೆಸ್‌ ತನ್ನ ಚುನಾವಣಾ ಭವಿಷ್ಯವನ್ನು ಉಜ್ವಲಗೊಳಿಸುವ ನಿರೀಕ್ಷೆ ಹೊಂದಿದೆ. 

ಡಿ.14ರಂದು ನಡೆಯುವ ಎರಡನೇ ಹಂತದ ಮತದಾನದಲ್ಲಿ 93 ಸೀಟುಗಳು ನಿರ್ಧರಿಸಲ್ಪಡಲಿವೆ. ಗುಜರಾತ್‌ನಲ್ಲಿ ಒಟ್ಟು ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 182. ಮತ ಎಣಿಕೆ ಕಾರ್ಯ ಡಿ.18ರಂದು ನಡೆಯಲಿದೆ. 

Advertisement

ಭರೂಚ್‌ ಅಂಕ್ಲೇಶ್ವರ ಕ್ಷೇತ್ರದಲ್ಲಿ ಮತದಾನ ಮಾಡಿರುವ ಹಿರಿಯ ಕಾಂಗ್ರೆಸ್‌ ನಾಯಕ ಅಹ್ಮದ್‌ ಪಟೇಲ್‌ “ಕಾಂಗ್ರೆಸ್‌ ಈ ಚುನಾವಣೆಯಲ್ಲಿ ನೂರಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ’ ಎಂದು ಹೇಳಿದ್ದಾರೆ.

ಈ ನಡುವೆ ಕೆಲವೆಡೆಗಳಲ್ಲಿ ಇಲೆಕ್ಟ್ರಾನಿಕ್‌ ಓಟಿಂಗ್‌ ಮಶೀನ್‌ (ಇವಿಎಂ) ಗಳು ದೋಷಯುಕ್ತವಾಗಿರುವುದು ಕಂಡು ಬಂದಿದೆ. ಸೂರತ್‌ನ ವರಚ್ಚಾದ ಸರ್ದಾರ್‌ ಪಟೇಲ್‌ ವಿದ್ಯಾಲಯದ ಬೂತ್‌ನಲ್ಲಿ ಕೆಟ್ಟು ಹೋದ ಇವಿಎಂ ಅನ್ನು ಬದಲಾಯಿಸಲಾಗಿದೆ. 

ವಜ್ರ ನಗರಿ ಎಂದೇ ಖ್ಯಾತವಾಗಿರುವ ಸೂರತ್‌ ಒಟ್ಟು 12 ಸೀಟುಗಳನ್ನು ಹೊಂದಿದ್ದು ಇದು ಬಿಜೆಪಿಯ ಭದ್ರಕೋಟೆ ಎನಿಸಿದೆ. ಇಲ್ಲಿನ ಫ‌ಲಿತಾಂಶವನ್ನು ಪಿಎಂ ಮೋದಿ ಅವರ ನೋಟ್‌ ಬ್ಯಾನ್‌ ಮತ್ತು ಜಿಎಸ್‌ಟಿ ಕುರಿತ ಜನಾಭಿಪ್ರಾಯವೆಂದು ತಿಳಿಯಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next