ಅಹಮದಾಬಾದ್: ಗುಜರಾತ್ ಕಳ್ಳಭಟ್ಟಿ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ಗುಜರಾತ್ ನ ಬೊಟಾಡ್ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ಈ ದುರಂತ ಬೆಳಕಿಗೆ ಬಂದಿತ್ತು.
ಈ ಮದ್ಯವನ್ನು ಅತ್ಯಂತ ವಿಷಕಾರಿ ಮೀಥೈಲ್ ಆಲ್ಕೋಹಾಲ್ ನಿಂದ ತಯಾರಿಸಲಾಗಿದೆ ಎಂದು ಗುಜರಾತ್ ಪೊಲೀಸ್ ಮಹಾನಿರ್ದೇಶಕ ಆಶಿಶ್ ಭಾಟಿಯಾ ಗಾಂಧಿನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಘಟನೆಗೆ ಸಂಬಂಧಿಸಿದಂತೆ 14 ಮಂದಿಯ ವಿರುದ್ಧ ಎಫ್ ಐಆರ್ ದಾಖಲಾಗಿದ್ದು, ಕೊಲೆ ಮತ್ತು ಇತರ ಪ್ರಕರಣಗಳನ್ನು ದಾಖಲಿಸಲಾಗಿದೆ. ಇವರಲ್ಲಿ ಹೆಚ್ಚಿನವರನ್ನು ಬಂಧಿಸಲಾಗಿದೆ ಎಂದು ಆಶಿಶ್ ಭಾಟಿಯಾ ಹೇಳಿದರು.
ಸೋಮವಾರ ಮುಂಜಾನೆ ಬೊಟಾಡ್‌ನ ರೋಜಿಡ್ ಗ್ರಾಮದಲ್ಲಿ ವಾಸಿಸುತ್ತಿದ್ದ ಕೆಲವರ ಆರೋಗ್ಯ ಸ್ಥಿತಿ ಹದಗೆಟ್ಟು ಬರ್ವಾಲಾ ಮತ್ತು ಬೊಟಾಡ್ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾದಾಗ ಈ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಸೋನಿಯಾ ಗಾಂಧಿ ಇಡಿ ವಿಚಾರಣೆ : ಗೋವಾದಲ್ಲಿ ಕಾಂಗ್ರೇಸ್ ಪ್ರತಿಭಟನೆ
ನಕಲಿ ಮದ್ಯ ಸೇವಿಸಿ ಇದುವರೆಗೆ 28 ಮಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ 22 ಮಂದಿ ಬೊಟಾಡ್ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಸೇರಿದವರಾಗಿದ್ದರೆ. ಉಳಿದ ಆರು ಮಂದಿ ನೆರೆಯ ಅಹಮದಾಬಾದ್ ಜಿಲ್ಲೆಯವರು.