Advertisement

137 ಅಭ್ಯರ್ಥಿಗಳಿಗೆ ಅಪರಾಧ ಹಿನ್ನೆಲೆ! 

06:30 AM Dec 02, 2017 | |

ಅಹಮದಾಬಾದ್‌: ಈ ಬಾರಿಯ ಗುಜರಾತ್‌ ವಿಧಾನಸಭಾ ಚುನಾವಣೆಯ ಮೊದಲ ಹಂತದ ಚುನಾವಣೆಗೆ ಕಣಕ್ಕಿಳಿದಿರುವ ಎಲ್ಲಾ ಪಕ್ಷಗಳ ಅಭ್ಯರ್ಥಿಗಳಲ್ಲಿ ಶೇ.15 ಮಂದಿ ಕ್ರಿಮಿನಲ್‌ ವಿಚಾರಣೆ ಎದುರಿಸುತ್ತಿದ್ದಾರೆ ಎಂದು ಡೆಮಾಕ್ರಾಟಿಕ್‌ ರಿಫಾಮ್ಸ್‌ì(ಎಡಿಆರ್‌) ಹಾಗೂ ಗುಜರಾತ್‌ ಎಲೆಕ್ಷನ್‌ ವಾಚ್‌ ಎಂಬ ಸರ್ಕಾರೇತರ ಸಂಸ್ಥೆಗಳು ಹೊರಗೆಡಹಿವೆ. 

Advertisement

977 ಅಭ್ಯರ್ಥಿಗಳು ಸಲ್ಲಿಸುವ ಅಫಿಡವಿಟ್‌ಗಳಲ್ಲಿ 923 ಅನ್ನು ಈ ಎರಡೂ ಸಂಸ್ಥೆಗಳು ಪರಿಶೀಲಿಸಿದ್ದು ಇವುಗಳಲ್ಲಿ 137 ಮಂದಿಗೆ ಅಪರಾಧ ಹಿನ್ನೆಲೆ ಇದ್ದು, 78 ಅಭ್ಯರ್ಥಿಗಳು ಕೊಲೆ, ಅಪಹರಣ, ಅತ್ಯಾಚಾರಗಳಂಥ ಗಂಭೀರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆಂದು ಹೇಳಿವೆ. ಇನ್ನು, ಪಕ್ಷವಾರು ಹೇಳುವುದಾದರೆ, ಬಿಜೆಪಿಯ 89 ಅಭ್ಯರ್ಥಿಗಳಲ್ಲಿ 10, ಕಾಂಗ್ರೆಸ್‌ನ 20, ಬಿಎಸ್‌ಪಿಯ 8, ಎನ್‌ಸಿಪಿಯ 3 ಹಾಗೂ ಆಪ್‌ನ ಒಬ್ಬ ಅಭ್ಯರ್ಥಿ ಕ್ರಿಮಿನಲ್‌ ವಿಚಾರಣೆ ಎದುರಿಸುತ್ತಿದ್ದಾರೆ.

ಹಾರ್ದಿಕ್‌ ವಿರುದ್ಧ ದೂರು: ಅನುಮತಿ ನಿರಾಕರಿಸಿದ್ದರೂ ರಾಜ್‌ಕೋಟ್‌ನಲ್ಲಿ ನ. 29ರಂದು ಬೃಹತ್‌ ರ್ಯಾಲಿ ನಡೆಸಿದ್ದಾರೆಂದು ಆರೋಪಿಸಿ ಪಟೇಲ್‌ ಮೀಸಲು ಹೋರಾಟಗಾರ ಹಾರ್ದಿಕ್‌ ಪಟೇಲ್‌ ವಿರುದ್ಧ ರಾಜ್‌ಕೋಟ್‌ನ ಮಾಳವೀಯ ನಗರ್‌ ಪೊಲೀಸ್‌ ಠಾಣೆಯಲ್ಲಿ ರಾಜ್‌ಕೋಟ್‌ನ ಪಶ್ಚಿಮ ವಿಭಾಗದ ಚುನಾವಣಾ ಅಧಿಕಾರಿ ಪಿ.ಆರ್‌. ಜಾನಿ ದೂರು ದಾಖಲಿಸಿದ್ದಾರೆ. 

ರಾಹುಲ್‌ ಗಾಂಧಿ, ದಿಲ್ಲಿಯ ತಮ್ಮ ನಿವಾಸದ ಬಳಿಯಿರುವ ದೇಗುಲಕ್ಕೆ ಹೋಗಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಗುಜರಾತ್‌ನಲ್ಲಿ ಹೀಗೆ ಮಂದಿರಗಳನ್ನು ಅಲೆಯುತ್ತಿ ರುವುದು ಅವರ ಢೋಂಗಿ ಹಿಂದುತ್ವವನ್ನು ತೋರಿಸಿದೆ. 
– ಜಿತೇಂದ್ರ ಸಿಂಗ್‌, 
ಕೇಂದ್ರ ಸಚಿವ

ರಾಹುಲ್‌ “ವಿದ್ಯುತ್‌’ ಪ್ರಶ್ನೆ 
ಮೋದಿ ವಿರುದ್ಧ “ದಿನಕ್ಕೊಂದು ಪ್ರಶ್ನೆ’ ಅಭಿಯಾನ ಆರಂಭಿಸಿರುವ ರಾಹುಲ್‌ ಗಾಂಧಿ, ಗುಜರಾತ್‌ ಸರ್ಕಾರ 2002ರಿಂದ 2016ರವರೆಗೆ 4 ಖಾಸಗಿ ವಿದ್ಯುತ್‌ ಕಂಪೆನಿಗಳಿಂದ ದುಬಾರಿ ಹಣ ನೀಡಿ ವಿದ್ಯುತ್‌ ಪಡೆಯುವ ಮೂಲಕ 62,549 ಕೋಟಿ ರೂ.ಗಳನ್ನು ಖಾಸಗಿ ಕಂಪೆನಿಗಳ ಬೊಕ್ಕಸಕ್ಕೆ ಹರಿಸಿದ್ದು ಏಕೆಂದು ಪ್ರಶ್ನಿಸಿದ್ದಾರೆ. ಪ್ರತಿ ಯೂನಿಟ್‌ಗೆ 3 ರೂ. ಇದ್ದರೂ 24 ರೂ. ನೀಡಿ ವಿದ್ಯುತ್‌ ಖರೀದಿಸುವ ಅಗತ್ಯವೇನಿತ್ತು ಎಂದೂ ಕೇಳಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next