Advertisement

ಗುಜರಾತ್‌ ಚುನಾವಣೆ: 28 ಅಭ್ಯರ್ಥಿಗಳ ಬಿಜೆಪಿ 3ನೇ ಪಟ್ಟಿ ಬಿಡುಗಡೆ

04:05 PM Nov 20, 2017 | Team Udayavani |

ಅಹ್ಮದಾಬಾದ್‌ : ಮುಂಬರುವ 2017ರ ಗುಜರಾತ್‌ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ 28 ಅಭ್ಯರ್ಥಿಗಳ ತನ್ನ ಮೂರನೇ ಪಟ್ಟಿಯನ್ನು ಇಂದು ಸೋಮವಾರ ಬಿಡುಗಡೆ ಮಾಡಿದೆ.

Advertisement

ಬಿಜೆಪಿ ಈಗಾಗಲೇ 70 ಹಾಗೂ 36 ಅಭ್ಯರ್ಥಿಗಳನ್ನು ಒಳಗೊಂಡ ತನ್ನ ಮೊದಲನೇ ಮತ್ತು ಎರಡನೇ ಪಟ್ಟಿಯನ್ನು ಅನುಕ್ರಮವಾಗಿ ಬಿಡುಗಡೆ ಮಾಡಿದೆ. 

182 ಸದಸ್ಯ ಬಲದ ಗುಜರಾತ್‌ ವಿಧಾನಸಭೆಗೆ ಮುಂದಿನ ಡಿ.9 ಮತ್ತು 14ರಂದು ಎರಡು ಹಂತಗಳಲ್ಲಿ ನಡೆಯಲಿರುವ ಚುನಾವಣೆಗೆ ಬಿಜೆಪಿ ಈ ವರೆಗೆ ಒಟ್ಟು 134 ಅಭ್ಯರ್ಥಿಗಳನ್ನು ಪ್ರಕಟಿಸಿದಂತಾಗಿದೆ. 

ಇಂದು ಬಿಡುಗಡೆ ಮಾಡಲಾಗಿರುವ 3ನೇ ಹೊಸಪಟ್ಟಿಯಲ್ಲಿ ಸೇರಿರುವ ಪ್ರಮುಖರೆಂದರೆ ಹಾಲಿ ಶಾಸಕ ಮತ್ತು ಅಸೆಂಬ್ಲಿ ಸ್ಪೀಕರ್‌ ರಮಣ್‌ ವೋರಾ (ದಸಾಡಾದ ಎಸ್‌ಸಿ ಸೀಟು), ಮತ್ತು ಹಾಲಿ ಶಾಸಕ ಹಾಗೂ ಮಾಜಿ ಕ್ಯಾಬಿನೆಟ್‌ ಸಚಿವ ಸೌರಭ್‌ ಪಟೇಲ್‌ (ಬೋತಾಡ್‌ ಕ್ಷೇತ್ರ). ಈ ಹಿಂದೆ ಬೋತಾಡ್‌ ಕ್ಷೇತ್ರವನ್ನು  ಪ್ರತಿನಿಧಿಸಿದ್ದ ಪಟೇಲ್‌ ಅವರು ಪ್ರಕೃತ ಅಕೋಟಾ ಕ್ಷೇತ್ರದ ಹಾಲಿ ಶಾಸಕ.

ಹಿರಿಯ ನಾಯಕ ಮತ್ತು ಪಕ್ಷದ ವಕ್ತಾರ ಐ ಕೆ ಜಡೇಜ ಅವರಿಗೆ ಧೃಂಗಾದ್ರ ಕ್ಷೇತ್ರದಿಂದ ಸ್ಪರ್ಧಿಸಲು ಸೀಟು ಕೊಟ್ಟಿಲ್ಲ. ಈ ಸೀಟಿನಲ್ಲಿ ಜಯರಾಮ್‌ ಭಾಯ್‌ ಧನಜೀಭಾಯ್‌ ಸೋಂಗರಾ ಸ್ಪರ್ಧಿಸಲಿದ್ದಾರೆ. 

Advertisement

ಇನ್ನೊಬ್ಬ ಮಾಜಿ ಸಚಿವ ಗೋವಿಂದ ಭಾಯ್‌ ಪಟೇಲ್‌ ತಮ್ಮ ಹಾಲಿ ರಾಜಕೋಟ್‌ (ದಕ್ಷಿಣ) ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ. ಕೋಡಿನಾರ್‌ ಎಸ್‌ಸಿ ಸೀಟಿನಲ್ಲಿ ರಾಮಭಾಯ್‌ ವಧೇರ್‌ ಸ್ಪರ್ಧಿಸಲಿದ್ದಾರೆ. ಇವರು ಹಾಲಿ ಶಾಸಕ ಜೇಟಾಭಾಯ್‌ ಸೋಳಂಕಿ ಅವರ ಬದಲಿಗೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಜೇಠಾಭಾಯ್‌ ಅವರ ಕಳೆದ ಶನಿವಾರವಷ್ಟೇ ಬಿಜೆಪಿಗೆ ರಾಜೀನಾಮೆ ನೀಡಿದ್ದರು. 

ಮುಖ್ಯಮಂತ್ರಿ ವಿಜಯ್‌ಭಾಯ್‌ ರೂಪಾಣಿ ರಾಜ್‌ಕೋಟ್‌ ಪಶ್ಚಿಮದಿಂದ ಸ್ಪರ್ಧಿಸಲಿದ್ದಾರೆ. ಉಪಮುಖ್ಯಮಂತ್ರಿ ನಿತಿನ್‌ ಭಾಯ್‌ ಪಟೇಲ್‌ ಮೆಹಸಾನಾ ದಿಂದ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಜಿತುಭಾಯ್‌ ವಘಾನಿ ಭಾವನಗರ ಪಶ್ಚಿಮದಿಂದ ಸ್ಪರ್ಧಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next