Advertisement

ಪ್ರಧಾನಿಯಿಂದ ಎರಡೇ ದಿನದಲ್ಲಿ 8 ಸಮಾವೇಶ​​​​​​​

06:15 AM Nov 24, 2017 | |

ಅಹ್ಮದಾಬಾದ್‌: ವಿಧಾನಸಭಾ ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆ ಗುಜರಾತ್‌ನೆಲ್ಲೆಡೆ ಅದರಲ್ಲೂ ವಿಶೇಷವಾಗಿ ದಕ್ಷಿಣ ಗುಜರಾತ್‌, ಸೌರಾಷ್ಟ್ರ ಭಾಗದಲ್ಲಿ ಚುನಾವಣಾ ಬಿಸಿ ತಾರಕಕ್ಕೇರಿದೆ. 

Advertisement

ಈ ಪ್ರಾಂತ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು, ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಬಿಜೆಪಿ ಪರವಾಗಿ ಭಾರೀ ಪ್ರಮಾಣದ ರ್ಯಾಲಿಗಳನ್ನು ನಡೆಸಲಿದ್ದಾರೆ. ಇದೇ ವೇಳೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ, ಹಿರಿಯ ಕಾಂಗ್ರೆಸ್‌ ಧುರೀಣರೂ ತಮ್ಮ ರ್ಯಾಲಿಗಳನ್ನು ಆಯೋಜಿಸಿರುವುದು ಈ ಎರಡೂ ಪ್ರಾಂತ್ಯಗಳಲ್ಲಿನ ಚುನಾವಣಾ ಕಾವನ್ನು ಗಣನೀಯವಾಗಿ ಹೆಚ್ಚಿಸಿದೆ.

ದಕ್ಷಿಣ ಗುಜರಾತ್‌ ಹಾಗೂ ಸೌರಾಷ್ಟ್ರ ಪ್ರಾಂತ್ಯಗಳ 89 ವಿಧಾನಸಭೆಗಳಿಗೆ ಡಿ. 9ರಂದು ಚುನಾವಣೆ ನಡೆಯಲಿರುವುದರಿಂದ ನ. 27, 29ರಂದು ಪ್ರಧಾನಿ ಮೋದಿ ಈ ಭಾಗದಲ್ಲಿ ಎಂಟು ರ್ಯಾಲಿಗಳನ್ನು ನಡೆಸಲಿದ್ದಾರೆ. 27ರಂದು ಕಛ… ಜಿಲ್ಲೆಯ ಬುಜ್‌ನಲ್ಲಿ ಬೃಹತ್‌ ಸಮಾವೇಶ ನಡೆಸಲಿರುವ ಮೋದಿ, ಅದೇ ದಿನ ರಾಜ್‌ಕೋಟ್‌ನ ಜಾಸªನ್‌, ಅಮ್ರೇಲಿಯ ಧಾರಿ, ಸೂರತ್‌  ಜಿಲ್ಲೆಯ ಕಾಮ್ರೇಜ್‌ಗಳಲ್ಲಿ ರ್ಯಾಲಿ ನಡೆಸಲಿದ್ದಾರೆ. 29ರಂದು ಸೋಮನಾಥ ಪುರದ ಮೊರ್ಬಿ, ಪ್ರಾಚಿ ಹಳ್ಳಿಗಳಲ್ಲಿ, ಭಾವನಗರದ ಪಾಲಿಟಾನಾದಲ್ಲಿ ಹಾಗೂ ನವಾÕರಿಯಲ್ಲಿನ ಸಮಾವೇಶಗಳಲ್ಲಿ ಭಾಗವಹಿಸಲಿದ್ದಾರೆ. 

ಕಾಂಗ್ರೆಸ್‌ಗೆ “ಚಹಾ’ ಟಾಂಗ್‌: ಪ್ರಧಾನಿಯನ್ನು “ಚಾಯ್‌ ವಾಲಾ’ (ಚಹಾ ಮಾರುವವ) ಎಂದು ಟೀಕಿಸಿದ್ದ ಕಾಂಗ್ರೆಸ್‌ಗೆ ಶಾಂತಿಯುತವಾಗಿ ಎದಿರೇಟು ನೀಡಲು ನಿರ್ಧರಿಸಿರುವ ಗುಜರಾತ್‌ ಬಿಜೆಪಿ, ನ. 26ರಂದು ಆಕಾಶವಾಣಿಯಲ್ಲಿ ಪ್ರಸಾರವಾಗುವ ಮೋದಿಯವರ “ಮನ್‌ ಕಿ ಬಾತ್‌’ ಕಾರ್ಯಕ್ರಮವನ್ನು ಗುಜರಾತ್‌ ಜನತೆಯ ಜತೆ ಚಹಾ ಸವಿಯುತ್ತಾ ಆಲಿಸಲು ನಿರ್ಧರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next