Advertisement

Gujarat: 5000 ಕೋಟಿ ಮೌಲ್ಯದ ಕೊಕೇನ್‌ ವಶಕ್ಕೆ

01:53 AM Oct 14, 2024 | Team Udayavani |

ಹೊಸದಿಲ್ಲಿ: ಇತ್ತೀಚೆಗೆ ಹೊಸದಿಲ್ಲಿಯಲ್ಲಿ 5,000 ಕೋಟಿ ರೂ. ಮೌಲ್ಯದ 516 ಕೆ.ಜಿ. ಕೊಕೇನ್‌ ವಶಪಡಿಸಿಕೊಂಡ ಘಟನೆ ಬೆನ್ನಲ್ಲೇ ಗುಜರಾತ್‌ನಲ್ಲೂ 5,000 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಪತ್ತೆ ಹಚ್ಚಲಾಗಿದೆ. ದಿಲ್ಲಿಯಲ್ಲಿ ಪತ್ತೆಯಾಗಿದ್ದ ಕೊಕೇನ್‌ನ ತನಿಖೆಯ ಭಾಗವಾಗಿ ದಿಲ್ಲಿ ಮತ್ತು ಗುಜರಾತ್‌ನ ಪೊಲೀಸರು ಈ ಕಾರ್ಯಾಚರಣೆ ನಡೆಸಿ 518 ಕೆ.ಜಿ. ಕೊಕೇನ್‌ ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.

Advertisement

2 ವಾರಗಳ ಅವಧಿಯಲ್ಲಿ 2 ರಾಜ್ಯಗಳ ಪೊಲೀಸರು ನಡೆಸಿದ ಕಾರ್ಯಾಚರ­ಣೆಯಲ್ಲಿ ಒಟ್ಟು 1289 ಕೆ.ಜಿ. ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮಾರುಕಟ್ಟೆಯಲ್ಲಿ ಅದರ ಮೌಲ್ಯ 13,000 ಕೋಟಿ ರೂ. ಎನ್ನಲಾಗಿದೆ. ಅಂಕಲೇಶ್ವರದ ಔಷಧ ಉತ್ಪಾದನ ಕಂಪೆನಿ ಆವರಣದಲ್ಲಿ ಶೋಧ ಕಾರ್ಯ ನಡೆಸಿದ ವೇಳೆ ಡ್ರಗ್ಸ್‌ ಪತ್ತೆಯಾಗಿದೆ.
ಅ.1ರಂದು ದಿಲ್ಲಿ ಪೊಲೀಸರು 5,000 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶಪಡಿಸಿಕೊಂಡ ಬಳಿಕ 40 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದರು. ಅನಂತರದ ತನಿಖೆಯಲ್ಲಿ 208 ಕೆ.ಜಿ. ಕೊಕೇನ್‌ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣದ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸಿ ರವಿವಾರ ಗುಜರಾತ್‌ನಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next