Advertisement

ನವೀಕರಣಗೊಂಡ ನಾಲ್ಕೇ ದಿನಕ್ಕೆ ಕುಸಿದು ಬಿದ್ದ ಸೇತುವೆ :132 ಮಂದಿ ಸಾವು, 177 ಮಂದಿಯ ರಕ್ಷಣೆ

08:17 AM Oct 31, 2022 | Team Udayavani |

ಗುಜರಾತ್ : ಗುಜರಾತ್‌ನ ಮೊರ್ಬಿಯಲ್ಲಿ ಬ್ರಿಟಿಷರ ಕಾಲದ ಸೇತುವೆಯೊಂದು ಭಾನುವಾರ ಸಂಜೆ ಕುಸಿದು ಬಿದ್ದು ಸುಮಾರು 132 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೆ 177 ಮಂದಿಯನ್ನು ರಕ್ಷಿಸಲಾಗಿದ್ದು, ಹಲವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

Advertisement

ರಾಜ್ಯದ ರಾಜಧಾನಿ ಅಹಮದಾಬಾದ್‌ನಿಂದ ಸುಮಾರು 300 ಕಿಮೀ ದೂರದಲ್ಲಿರುವ ತೂಗು ಸೇತುವೆಯು ಭಾನುವಾರ ಸಂಜೆ 6.42 ಕ್ಕೆ ಕುಸಿದು ಬಿದ್ದಿದೆ, ಸುಮಾರು 500 ಜನರು ಛತ್ ಪೂಜೆಯ ಕೆಲವು ಆಚರಣೆಗಳನ್ನು ಮಾಡಲು ಸೇತುವೆಯ ಮೇಲೆ ಜಮಾಯಿಸಿದರು ಎನ್ನಲಾಗಿದೆ.

ಜನರ ಭಾರ ಹೆಚ್ಚಾಗಿ ಸೇತುವೆ ಕುಸಿದು ಬಿದ್ದಿದೆ ಎನ್ನಲಾಗಿದ್ದು ಸೇತುವೆ ಕುಸಿತದ ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು, ಎನ್‌ಡಿಆರ್‌ಎಫ್‌ನ ಐದು ತಂಡಗಳು ಸ್ಥಳಕ್ಕೆ ತಲುಪಿವೆ. ನಂತರ, ಸೇನೆ, ನೌಕಾಪಡೆ ಮತ್ತು ವಾಯುಸೇನೆಯಿಂದಲೂ ಕೂಡ ಕಾರ್ಯಾಚರಣೆ ನಡೆಸುತ್ತಿದೆ.

ಸುಮಾರು 19 ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ದೋಣಿಗಳನ್ನು ಬಳಸಿ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 150 ವರ್ಷಗಳಷ್ಟು ಹಳೆಯದಾದ ಸೇತುವೆಯಾಗಿದ್ದರಿಂದ ಸೇತುವೆಯ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾವಣೆಗೊಂಡಿದ್ದೆ ಸೇತುವೆ ಕುಸಿದು ಬೀಳಲು ಕಾರಣ ಎಂದು ಅಲ್ಲಿನ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

Advertisement

ಕೇವಲ ನಾಲ್ಕು ದಿನಗಳ ಹಿಂದಷ್ಟೇ ಬ್ರಿಟೀಷರ ಕಾಲದಲ್ಲಿ ನಿರ್ಮಿಸಲಾಗಿದ್ದ ಕೇಬಲ್‌ ಬ್ರಿಡ್ಜ್ ಅನ್ನು ದುರಸ್ತಿಗೊಳಿಸಿ ಸಾರ್ವಜನಿಕರ ಬಳಕೆಗಾಗಿ ಮುಕ್ತಗೊಳಿಸಲಾಗಿತ್ತು. “ಕಳೆದ ವಾರವಷ್ಟೇ ಅದನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿತ್ತು. ಅದು ಕುಸಿದು ಬಿದ್ದಿರುವುದರಿಂದ ಆಘಾತ ಉಂಟಾಗಿದೆ. ಅದರ ಸಂಪೂರ್ಣ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಲಿದೆ’ ಗುಜರಾತ್‌ನ ಉದ್ಯೋಗ ಮತ್ತು ಕಾರ್ಮಿಕ ಸಚಿವ ಬೃಜೇಶ್‌ ಮೆರ್ಜಾ ಹೇಳಿದ್ದಾರೆ.

ಇದನ್ನೂ ಓದಿ : ಆಸ್ತಿ ವರ್ಗಾವಣೆ ವಿಚಾರದಲ್ಲಿ ತಕರಾರು: ಮಗನ ಮೇಲೆಯೇ ತಂದೆಯಿಂದ ಮಾರಣಾಂತಿಕ ಹಲ್ಲೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next