ಅಹಮದಾಬಾದ್: ವಿಧಾನಸಭಾ ಚುನಾವಣೆ ಎದುರಲ್ಲೇ ಬಿಜೆಪಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ 24 ಪ್ರಮುಖ ಮುಖಂಡರನ್ನು ಶುಕ್ರವಾರ ಪಕ್ಷದಿಂದಲೇ ಉಚ್ಛಾಟನೆ ಮಾಡಿದೆ.
ವಜಾಗೊಂಡವರಲ್ಲಿ ಮಾಜಿ ಸಂಸದರಾದ ಭೂಪೇಂದ್ರ ಸಿನ್ಹಾ, ಪ್ರಭಾತ್ ಸಿನ್ಹಾ ಸೋಲಂಕಿ, ಕನ್ಯೆ ಪಟೇಲ್ , ಬಿಮಲ್ ಶಾ ಪ್ರಮುಖರಾಗಿದ್ದಾರೆ.
ಎಲ್ಲಾ ರಾಜಕೀಯ ಲೆಕ್ಕಾಚಾರಗಳನ್ನು ಹಾಕಿ ಬಿಜೆಪಿ ಈ ನಾಯಕರುಗಳನ್ನು ಉಚ್ಛಾಟಿಸಿದೆ ಎಂದು ತಿಳಿದು ಬಂದಿದೆ.
ನವಸಾರಿ ಕ್ಷೇತ್ರದಲ್ಲಿ ನಾಲ್ವರು ಮುಖಂಡರಾದ ಧನಂಜಯ್ ಭಾಯ್, ಅರ್ಜುನ್ ಭಾಯ್, ಸುಶೀಲ್ ಕುಮಾರ್ ಮತ್ತು ಕಾಂಜಿ ಭಾಯ್ ಪಟೇಲ್ ಅವರನ್ನು ವಜಾ ಮಾಡಲಾಗಿದೆ.
ಗುಜರಾತ್ನಲ್ಲಿ 2 ಹಂತದಲ್ಲಿ ವಿಧಾನಸನಾ ಚುನಾವಣೆ ನಡೆಯುತ್ತಿದ್ದು ಮೊದಲ ಹಂತದಲ್ಲಿ ಡಿಸೆಂಬರ್ 9 ರಂದು, 2 ನೇ ಹಂತದ ಚುನಾವಣೆ ಡಿಸೆಂಬರ್ 14 ರಂದು ನಡೆಯಲಿದೆ.