ರಾಜ್‌ಕೋಟ್ /ಭಾವನಗರ್: ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಗುಜರಾತ್ ಎಟಿಎಸ್ ಪೊಲೀಸರು ಕಾರ್ಯಾಚರಣೆ ನಡೆಸಿ ವಿಧ್ವಂಸಕ ಕೃತ್ಯಕ್ಕೆ ಸಂಚು ಹೂಡಿದ್ದ ಇಬ್ಬರು ಐಸಿಸ್ ಉಗ್ರರನ್ನು ಭಾನುವಾರ ವಶಕ್ಕೆ ಪಡೆದಿದ್ದಾರೆ.
Advertisement
ಐಸಿಸ್ ಉಗ್ರ ಸಂಘಟನೆಯ ನಂಟು ಹೊಂದಿದ್ದ ಇಬ್ಬರು ಸಹೋದರರನ್ನು ಭಾವ್‌ನಗರ್ ಮತ್ತು ರಾಜ್‌ಕೋಟ್‌ನಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.
ಬಂಧಿತರು ವಾಸೀಮ್ ಮತ್ತು ನಾತಿನ್ ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಇಬ್ಬರೂ ರಾಜ್‌ಕೋಟ್ ಬಳಿ ಇರುವ ಚೋಟಿಲಾ ಚಾಮುಂಡಾ ಮಂದಿರದ ಮೇಲೆ ಬಾಂಬ್ ದಾಳಿ ನಡೆಸಲಉ ಸಂಚು ಹೂಡಿರುವ ಬಗ್ಗೆ ತಿಳಿದು ಬಂದಿದೆ.