Advertisement

24 ವರ್ಷ ಬಳಿಕ ದಾವೂಬ್‌ ಬಂಟ ಅಬ್ದುಲ್‌ ಮಜೀದ್‌ ಕುಟ್ಟಿ ಅಂದರ್‌

11:12 PM Dec 27, 2020 | sudhir |

ಅಹಮದಾಬಾದ್‌: ಗುಜರಾತ್‌ನ ಎಟಿಎಸ್‌ ಅಧಿಕಾರಿಗಳು ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ ಬಂಟ ಅಬ್ದುಲ್‌ ಮಜೀದ್‌ ಕುಟ್ಟಿ ಎಂಬಾತನನ್ನು 24 ವರ್ಷಗಳ ಬಳಿಕ ಜಾರ್ಖಂಡ್‌ನ‌ ಜೆಮ್ಶೆಡ್ಪುರದಲ್ಲಿ ಬಂಧಿಸಿದ್ದಾರೆ.

Advertisement

ಈತ 1996ರಲ್ಲಿ ಗುಜರಾತ್‌ ಮತ್ತು ಮಹಾರಾಷ್ಟ್ರಗಳಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಮತ್ತು ಅದಕ್ಕಾಗಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸಾಗಿಸಿದ್ದ. ಈ ಘಟನೆ ಬಳಿಕ ಆತ ಮಲೇಷ್ಯಾಕ್ಕೆ ಪರಾರಿಯಾಗಿದ್ದ ಎಂದು ಸಂಶಯಿಸಲಾಗಿತ್ತು.

ವಿಚಾರಣೆ ವೇಳೆ 1996ರಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಬಗ್ಗೆ ಒಪ್ಪಿಕೊಂಡಿದ್ದಾನೆ. ಮೊಹಮ್ಮದ್‌ ಕಮಾಲ್‌ ಎಂಬ ತನ್ನ ಹೆಸರನ್ನು ಅಬ್ದುಲ್‌ ಮಜೀದ್‌ ಕುಟ್ಟಿ ಎಂದು ಬದಲಿಸಿದ್ದ.

ಇದನ್ನೂ ಓದಿ:ರಾಡಿನಿಂದ ತಲೆಗೆ ಬಡಿದು ದರೋಡೆ ಪ್ರಕರಣ: ರಿಕ್ಷಾ ಚಾಲಕ ಸೇರಿ ಇಬ್ಬರು ವಶಕ್ಕೆ

Advertisement

Udayavani is now on Telegram. Click here to join our channel and stay updated with the latest news.

Next