ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಕಣ್ಣಲ್ಲಿ ಕಣ್ಣಿಟ್ಟು ಪ್ರಚಾರ ನಡೆಸುತ್ತಿವೆ. ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿಯೇ ಎರಡೂ ಪ್ರಮುಖ ಪಕ್ಷಗಳು ಬಳಸಿಕೊಳ್ಳುತ್ತಿವೆ.
ವಿಶೇಷವಾಗಿ ಗುಜರಾತಿ ಭಾಷೆಯಲ್ಲಿ ವಿಡಂಬನಾತ್ಮಕ ಜೋಕ್‌ಗಳು ಹರಿದಾಡುತ್ತಿವೆ. ಎರಡೂ ಪಕ್ಷಗಳ ನಾಯಕರ ಪರ-ವಿರೋಧದ ಜೋಕ್‌ಗಳು ಜಾಲ ತಾಣಗಳಲ್ಲಿ ಹರಿದಾಡುತ್ತಿವೆ. ಜನಪ್ರಿಯ ಟಿವಿ ಕಾರ್ಯಕ್ರಮ ಆಧರಿಸಿ ಕ್ವಿಜ್ ಕಾರ್ಯಕ್ರಮಗಳನ್ನು ಕೂಡ ನಡೆಸಲಾಗುತ್ತಿದೆ. ಪದೇ ಪದೆ ಕೇಳಿ ಬರುತ್ತಿರುವ ಪದ ಮತ್ತು ಅದನ್ನು ನೋಡಲು ಸಾಧ್ಯವಿಲ್ಲ. ಅಂಥ ಪದ ಯಾವುದು ಎಂಬ ಪ್ರಶ್ನೆಗೆ “ವಿಕಾಸ’ ಅಥವಾ ಅಭಿವೃದ್ಧಿ ಎಂಬ ಉತ್ತರ ಇರುವ ವಾಟ್ಸ್‌ಆ್ಯಪ್ ಸಂದೇಶ ಗುಜರಾತ್‌ನಾದ್ಯಂತ ಹರಿದಾಡುತ್ತಿದೆ.
ಬಿಜೆಪಿಯ ಸಾಮಾಜಿಕ ಮಾಧ್ಯಮ ಕೇಂದ್ರ ನವದೆಹಲಿಯಲ್ಲಿದ್ದು, ಫೇಸ್‌ಬುಕ್, ವಾಟ್ಸ್‌ಆ್ಯಪ್ ಸಂದೇಶಗಳನ್ನು ಅಲ್ಲಿಂದಲೇ ಅಪ್‌ಲೋಡ್ ಮಾಡಲಾಗುತ್ತಿದೆ. ಬಿಜೆಪಿಯ ಫೇಸ್‌ಬುಕ್ ಪೇಜ್‌ನಲ್ಲಿ ನ.1ರಂದು ಪೋಸ್ಟ್ ಮಾಡಲಾಗಿರುವ ವಿಡಿಯೋವನ್ನು ಆರು ಗಂಟೆಗಳ ಅವಧಿಯಲ್ಲಿ 16 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಆರು ತಿಂಗಳ ಹಿಂದೆಯೇ ಸಾಮಾಜಿಕ ಜಾಲತಾಣದ ಮೂಲಕ ಪ್ರಚಾರ ನಡೆಸುವುದಕ್ಕೆ ಸಿದ್ಧತೆ ನಡೆಸಿತ್ತು.
ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಘಟಕ “ಅಭಿವೃದ್ಧಿ ನಾಗಾಲೋಟದಿಂದ ಸಾಗುತ್ತಿದೆ’ ಎಂದು ಗುಜರಾತಿ ಭಾಷೆಯಲ್ಲಿನ ಜೋಕ್ ಜನಪ್ರಿಯ ಗೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧದ ಜೋಕ್‌ಗಳನ್ನು ಹರಿಯ ಬಿಟ್ಟಿದೆ. ಅದಕ್ಕಾಗಿಯೇ ಅಹಮದಾ ಬಾದ್ ಮತ್ತು ನವದೆಹಲಿಯಲ್ಲಿ ಸುಸಜ್ಜಿತ ಸಾಮಾಜಿಕ ಮಾಧ್ಯಮ ತಂಡವನ್ನು ಹೊಂದಿದೆ.
ಇದೇ ವೇಳೆ, ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮುಂದಿನ ವಾರ ಬಿಡುಗಡೆ ಮಾಡಲಿದೆ ಎಂದು ಮೂಲಗಳು ಹೇಳಿವೆ.