Advertisement

Heavy Rain, Lightning Strikes:ಮಳೆಯಿಂದ ಗುಜರಾತ್‌ನಲ್ಲಿ ಎಂಟು ಮಂದಿ ಸಾವು

01:16 AM Nov 27, 2023 | Team Udayavani |

ಅಹ್ಮದಾಬಾದ್‌/ಮುಂಬಯಿ: ಗುಜರಾತ್‌ನ ವಿವಿಧ ಸ್ಥಳಗಳಲ್ಲಿ ರವಿವಾರ ಗುಡುಗು-ಸಿಡಿಲು ಸಹಿತ ಮಳೆಯಾಗಿದೆ. ಮಳೆ ಸಂಬಂಧಿ ದುರಂತಗಳಲ್ಲಿ ಎಂಟು ಮಂದಿ ಅಸುನೀಗಿದ್ದಾರೆ. ರಾಜ್‌ಕೋಟ್‌, ಮೊರ್ಬಿ, ಅಹ್ಮದಾಬಾದ್‌ ನಗರಗಳಲ್ಲಿ ಮಳೆಯಾಗಿದೆ.

Advertisement

ರಾಜ್‌ಕೋಟ್‌ನಲ್ಲಿ ಆಲಿಕಲ್ಲು ಮಳೆಯಾಗಿದೆ. ಸೌರಾಷ್ಟ್ರ ಪ್ರದೇಶದಲ್ಲಿ ಮಳೆಯಾದ್ದರಿಂದ ಕೈಗಾರಿಕಾ ಘಟಕಗಳು ತಾತ್ಕಾಲಿಕವಾಗಿ ಮುಚ್ಚಬೇಕಾಯಿತು.

ಮಹಾರಾಷ್ಟ್ರ ರಾಜಧಾನಿ ಮುಂಬಯಿ ಸಹಿತ ವಿವಿಧ ಸ್ಥಳಗಳಲ್ಲಿಯೂ ರವಿವಾರ ಮಳೆಯಾಗಿದೆ. ಥಾಣೆ ಜಿಲ್ಲೆಯ ಭಿವಾಂಡಿಯಲ್ಲಿ ಕಟ್ಟಡವೊಂದಕ್ಕೆ ಸಿಡಿಲು ಬಡಿದು ಬೆಂಕಿ ಹತ್ತಿಕೊಂಡಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಯಿತು. ಮಧ್ಯಪ್ರದೇಶದ ನೈಋತ್ಯ ಭಾಗದ ಕೆಲವು ಭಾಗಗಳಲ್ಲಿ ಬಿರುಸಿನ ಮಳೆಯಾಗಿದೆ. ಪ್ರಸಕ್ತ ಸಾಲಿನ ಚಳಿಗಾಲದಲ್ಲಿ ಮಧ್ಯಪ್ರದೇಶಕ್ಕೆ ಇದು ಮೊದಲ ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next