Advertisement

Guinness World Records; ಏಕಕಾಲದಲ್ಲಿ 13,944 ಜನರಿಂದ ರಾಷ್ಟ್ರಗೀತೆ

01:03 AM Aug 11, 2024 | Team Udayavani |

ಭುವನೇಶ್ವರ: ಖ್ಯಾತ ಸಂಗೀತ ಸಂಯೋಜಕ ರಿಕಿ ಕೇಜ್‌, ಒಡಿಶಾದ ಕಳಿಂಗ ಇನ್‌ಸ್ಟಿಟ್ಯೂಟ್‌ ಆಫ್ ಸೋಶಿಯಲ್‌ ಸೈನ್ಸಸ್‌ ಸಹಭಾಗಿತ್ವದೊಂದಿಗೆ ಜಗತ್ತಿನ ಅತೀದೊಡ್ಡ ಸಂಗೀತ ಕಲಿಕಾ ಕಾರ್ಯಕ್ರಮ ನಡೆಸುವ ಮೂಲಕ ಗಿನ್ನೆಸ್‌ ದಾಖಲೆ ನಿರ್ಮಿಸಿದ್ದಾರೆ. ಬುಡಕಟ್ಟು ವಿದ್ಯಾರ್ಥಿಗಳು ಸೇರಿ 13,944 ಜನರು ಏಕಕಾಲದಲ್ಲಿ ರಾಷ್ಟ್ರಗೀತೆ ಕಲಿತು ಹಾಡಿದ್ದಾರೆ. ಈ ಮೂಲಕ ಅಮೆರಿಕದ ನಾಶ್ವಿ‌ಲ್‌ನ “ಸ್ವೀಟ್‌ ಅಡೆಲೈನ್ಸ್‌ ಇಂಟರ್‌ನ್ಯಾಶನಲ್‌’ನಲ್ಲಿ 6,651 ಜನರ ಸಂಗೀತಾ ಕಲಿಕಾ ಕಾರ್ಯಕ್ರಮದ ದಾಖಲೆಯನ್ನು ಮುರಿದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next