ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದರು. ನಗರದ ರಾಣಿಪೇಟೆಯ ಮಂತ್ರಾಲಯ ಶಾಖಾಮಠ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಆವರಣದಲ್ಲಿ ಚಾತುರ್ಮಾಸ ನಿಮಿತ್ತ ಸಾರ್ವಜನಿಕರಿಗೆ ತಪ್ತಮುದ್ರಾಧಾರಣೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು. ಕಲಿಯುಗದ ಕಲ್ಪತರು ರಾಘವೇಂದ್ರ ಸ್ವಾಮಿಗಳ ಆರಾಧನೆ ಆ. 8, 9, 10ರಂದು ನಡೆಯಲಿದೆ.
Advertisement
ಈ ನಿಮಿತ್ತ ಮಂತ್ರಾಲಯದಲ್ಲಿ ಹಲವು ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಂತ್ರಾಲಯ ದಾಸಸಾಹಿತ್ಯ ಪ್ರಾಜೆಕ್ಟ್ನಿಂದ ಜು.30ರಂದು ಹರಿಕಥಾಮೃತಸಾರ 32 ಸಂಧಿಗಳನ್ನು ಕಂಠಸ್ಥ ಒಪ್ಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆ. 28ರಂದು ಮಂತ್ರಾಲಯ ರಾಯರ ಸನ್ನಿಧಿಯಲ್ಲಿ 1000 ಸಾವಿರಕ್ಕೂ ಹೆಚ್ಚು ಮಹಿಳೆಯರಿಂದ ಸಾಮೂಹಿಕವಾಗಿ ಶ್ರೀ ವಾದಿರಾಜ ತೀರ್ಥರು ರಚಿಸಿರುವ ಲಕ್ಷ್ಮೀ ಶೋಭಾನ ಪಠಣ ಆಯೋಜಿಸಲಾಗಿದೆ ಎಂದು ಹೇಳಿದರು.