Advertisement

ಪಾರಂಪರಿಕ ನಗರಿಗೆ ಗೈಡ್‌ ಕೊರತೆ!

12:53 PM Jan 23, 2018 | |

ಬೀದರ: ಚಾರಿತ್ರಿಕ ಕೋಟೆ ಕೊತ್ತಲುಗಳು, ಪಾರಂಪರಿಕ ಸ್ಮಾರಕಗಳನ್ನು ಹೊದ್ದು ಮಲಗಿರುವ ಬೀದರ ಐತಿಹಾಸಿಕ ಪ್ರವಾಸಿ ನಗರ. ದೇಶ ಮಾತ್ರವಲ್ಲದೇ ವಿದೇಶಗರು ಭೇಟಿ ನೀಡಿ ಕಣ್ತುಂಬಿಕೊಳ್ಳುತ್ತಾರೆ. ಆದರೆ, ಗೈಡ್‌ಗಳ ಕೊರತೆಯಿಂದ ಸೂಕ್ತ ಮಾಹಿತಿ ಸಿಗದಿರುವುದು ಪ್ರವಾಸಿಗರಿಗೆ ನಿರಾಯನ್ನುಂಟು ಮಾಡುತ್ತಿದೆ.

Advertisement

ಗಡಿನಾಡು ಬೀದರ ಎಂದಾಕ್ಷಣ ಅದ್ಭುತ ಪ್ರವಾಸಿ ತಾಣ ಎಂದು ನೆನಪಾಗುತ್ತದೆ. ನಗರದ ನಾಲ್ಕು ದಿಕ್ಕುಗಳಲ್ಲಿಯೂ ಒಂದಿಲ್ಲೊಂದು ಸ್ಮಾರಕಗಳು, ಅಳಿದುಳಿದ ಪಳೆಯುಳಿಕೆಗಳು ಇಂದಿಗೂ ಪುರಾತನ ಇತಿಹಾಸ ಮತ್ತು ರಾಜ ಮಹಾರಾಜರ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿವೆ. ಪ್ರತಿ ತಾಣಗಳು ತನ್ನದೆಯಾದ ಕಥೆ ಹೊಂದಿದೆ. ಇದನ್ನು ಅರಿತುಕೊಳ್ಳಲು ದೇಶ- ವಿದೇಶಗಳ ಸಂಶೋಧನಾ ವಿದ್ಯಾರ್ಥಿಗಳು, ತಜ್ಞರು ಮತ್ತು ಪ್ರವಾಸಿಗರು ನಿತ್ಯ ನೂರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದರೆ, ಅವರಿಗೆ ಮಹತ್ವ, ಹಿನ್ನೆಲೆ ತಿಳಿಸುವವರು ಯಾರೂ ಇಲ್ಲದಂತಾಗಿದೆ.

ಕೇಂದ್ರ ಪುರಾತತ್ವ ಇಲಾಖೆ ಅಧೀನದ ರಾಷ್ಟ್ರೀಯ ಸಂರಕ್ಷಿತ ಸ್ಮಾರಕವಾಗಿರುವ ಬೀದರನ ಬಹುಮನಿ ಕೋಟೆ ದಕ್ಷಿಣ ಭಾರತದಲ್ಲೇ ಸುಭದ್ರ ಹಾಗೂ ಭವ್ಯವಾದ ಕೋಟೆಯಾಗಿದೆ. ಜಗತ್ತಿನಾದ್ಯಂತ ತಮ್ಮ ಹಿರಿಮೆ ಹೊಂದಿದೆ. ಅದ್ಭುತ ಉದ್ಯಾನ ಕೋಟೆ ಒಳಾಂಗಣದಲ್ಲಿ ಹಸಿರು ಹೊದಿಸಿದಂತಾಗಿ ಮತ್ತಷ್ಟು ಮೆರಗು ಹೆಚ್ಚಿಸಿದೆ ಆದರ್ಶ ಸ್ಮಾರಕ ಪಟ್ಟಿ ಹಾಗೂ ವರ್ಲ್ಡ್ ಮಾನ್ಯುಮೆಂಟ್‌ ಫಂಡ್‌ಗೆ ಆಯ್ಕೆಯಾಗಿರುವ ಬಹುಮನಿ ಕೋಟೆ ಹಲವು ಸ್ಮಾರಕಗಳನ್ನು ತನ್ನ ತೆಕ್ಕೆಯಲ್ಲಿ ಹಿಡಿದಿಟ್ಟುಕೊಂಡಿದೆ. 

ಅಷ್ಟೇ ಅಲ್ಲ ಮಹಮೂದ್‌ ಗವಾನ್‌ ಮದರಸಾ, ಬರೀದಶಾಹಿ ಗುಂಬಜ್‌ಗಳು, ಚೌಬಾರಾ, ಚೌಕಂಡಿ, ಅಷ್ಟೂರಿನ ಪಾಳು ಬಿದ್ದ ಗುಂಬಜ್‌ಗಳು, ಜಲಸಂಗಿ, ಉಮಾಪುರ ಮತ್ತು ನಾರಾಯಣಪುರದ ದೇವಸ್ಥಾನ ಸೇರಿದಂತೆ ಅನೇಕ ತಾಣಗಳು ತನ್ನದೆಯಾದ ಪರಂಪರೆ ಹೊಂದಿದೆ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿವೆ. ಇವುಗಳನ್ನು ಹುಡುಕಿಕೊಂಡು ಬರುವ ಹೊರ ರಾಜ್ಯ- ದೇಶದ ಪ್ರವಾಸಿಗರು ವೀಕ್ಷಣೆಗಾಗಿ ಹರಸಾಹಸ ಪಡುವಂತಾಗಿದೆ.
 
ಹೈದ್ರಾಬಾದ್‌ ಸಮೀಪದಲ್ಲಿರುವುದರಿಂದ ಅಲ್ಲಿನ ಮತ್ತು ಅಲ್ಲಿಗೆ ಬರುವ ವಿದೇಶಿಗರು ಬೀದರಗೆ ಭೇಟಿ ನೀಡುತ್ತಾರೆ. ಅಮೆರಿಕ, ಫ್ರಾನ್ಸ್‌, ಬೆಲ್ಜಿಯಂ, ಶ್ರೀಲಂಕಾ ಸೇರಿ ಹಲವು ದೇಶದ ಪ್ರವಾಸಿಗರ ತಂಡ ಬರುತ್ತದೆ. ಕೈಯಲ್ಲೊಂದು ಮಾಹಿತಿ ಪುಸ್ತಕ, ಕೊರಳಲ್ಲಿ ಕ್ಯಾಮೆರಾ ಹಾಕಿಕೊಂಡು ನಗರದಲ್ಲಿ ಸುತ್ತಾಡುವ ಪ್ರವಾಸಿಗರಿಗೆ ಮಾಹಿತಿ ಕೊಡಬಲ್ಲ ಗೈಡ್‌ಗಳು ಇಲ್ಲದ ಕಾರಣ ಏನು ನೋಡಬೇಕು ಎಂಬ ಗೊಂದಲದಿಂದ ಪರದಾಡಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

 ಕೆಲವೊಮ್ಮೆ ಹೈದರಾಬಾದ ನಿಂದ ಗೈಡ್‌ಗಳನ್ನು ಜತೆಯಲ್ಲಿ ಕರೆದುಕೊಂಡು ಬಂದರೂ ತಪ್ಪು ಮಾಹಿತಿ ನೀಡುತ್ತಿರುವ ಮಾತುಗಳು ಕೇಳಿಬಂದಿವೆ. ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಡಾ| ಪಿ.ಸಿ. ಜಾಫರ್‌ ಅವರು ಗೈಡ್‌ಗಳ ಕೊರತೆ ನೀಗಿಸಲು
ಮುಂದಾಗಿದ್ದರು. ಪರಿಶಿಷ್ಟ ಜಾತಿ- ಪಂಗಡದ 50 ಜನ ಯುವಕರಿಗೆ ಗೈಡ್‌ಗಳ ತರಬೇತಿ ಕಲ್ಪಿಸಿಕೊಟ್ಟು, ಆ ಮೂಲಕ ಸ್ವಾವಲಂಬಿ ಜೀವನ ನಡೆಸಲು ಅವಕಾಶ ಮಾಡಿಕೊಟ್ಟಿದ್ದರು. ಆದರೆ, ತರಬೇತಿ ಪಡೆದ ಯುವಕರಲ್ಲಿ ಯಾರು ಸಹ ಗೈಡ್‌ಗಳಾಗಿ ವೃತ್ತಿ ನಡೆಸಲು ಆಸಕ್ತಿ ತೋರಲೇ ಇಲ್ಲ. ನಂತರ ಜಿಲ್ಲಾಡಳಿತವಾಗಲಿ, ಪುರಾತತ್ವ ಇಲಾಖೆ ಆಗಿಲಿ
ಇಂಥ ಯಾವುದೇ ಪ್ರಯತ್ನಕ್ಕೆ ಮುಂದಾಗಲಿಲ್ಲ. ಹಾಗಾಗಿ ಗೈಡ್‌ಗಳ ಕೊರತೆ ಹಾಗೆಯೇ ಮುಂದುವರಿದಿದೆ. ಪ್ರವಾಸೋದ್ಯಮ ಬೆಳವಣಿಗೆಗೆ ವಿಫುಲ ಅವಕಾಶ ಹೊಂದಿರುವ ಬೀದರನಲ್ಲಿ ಗೈಡ್‌ಗಳ ಕೊರತೆಯೂ ತೊಡಕಾಡುತ್ತಿದೆ.

Advertisement

ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೀದರ ಕುರಿತು ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆಯೂ ಇದೆ. ಈಗಾಗಲೇ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ. ರಾಜ್ಯದ ಇತರ ಪಾರಂಪರಿಕ ತಾಣಗಳಂತೆ ಬೀದರನಲ್ಲಿಯೂ ಗೈಡ್‌ಗಳನ್ನು ನೇಮಿಸಬೇಕಿದೆ ಎಂಬುದು ಪ್ರವಾಸಿಗರ ಅನಿಸಿಕೆಯಾಗಿ¨

ಐತಿಹಾಸಿಕ ಪಾರಂಪರಿಕ ನಗರವಾಗಿರುವ ಬೀದರನಲ್ಲಿ ಗೈಡ್‌ಗಳ ಕೊರತೆ ಇರುವುದು ನಿಜ. ಈ ಹಿಂದೆ ಜಿಲ್ಲಾಡಳಿತದಿಂದ 50 ಜನರಿಗೆ ತರಬೇತಿ ನೀಡಲಾಗಿತ್ತು. ಆದರೆ, ಯಾರು ಸಹ ಆಸಕ್ತಿ ತೋರಿಲ್ಲ. ಹೊರ ರಾಜ್ಯ,
ದೇಶದಗಳ ಪ್ರವಾಸಿಗರು ಬಂದು ಇಲಾಖೆಗೆ ಸಂಪರ್ಕಿಸಿದರೆ ಮಾಹಿತಿ ಕೊಡಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಗೈಡ್‌ಗಳ ನೇಮಕ ಕುರಿತು ಜಿಲ್ಲಾಧಿ ಕಾರಿಗಳ ಜತೆಗೆ ಚರ್ಚಿಸುತ್ತೇನೆ.  ಕಿಶೋರ್‌ ಜೋಶಿ, ಸಹಾಯಕ ನಿರ್ದೇಶಕ ಪ್ರವಾಸೋದ್ಯಮ ಇಲಾಖೆ. 

„ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next