ಬಳ್ಳಾರಿ: ನಗರದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳ ಪ್ರಾಜೆಕ್ಟ್ಗಳಿಗೆ ರಾಜ್ಯ ಸರ್ಕಾರದ ಮಾಹಿತಿ, ಜೈವಿಕ ಮತ್ತು ವಿಜ್ಞಾನ ತಂತ್ರಜ್ಞಾನ ವಿದ್ಯಾನ್ಮಾನ ಇಲಾಖೆಯು ಕರ್ನಾಟಕ ಇನ್ನೋವೇಷನ್ ಆ್ಯಂಡ್ ಟೆಕ್ನಾಲಜಿ ಸೊಸೈಟಿ (ಕೆಐಟಿಎಸ್-ಕಿಟ್ಸ್) ಮೂಲಕ ಅನುದಾನ ನೀಡಿದೆ.
ಈ ಕುರಿತು ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಜೆ.ಎಸ್. ಬಸವರಾಜ ಮಾತನಾಡಿ, ಇಂದಿನ ಯುವ ವಿದ್ಯಾರ್ಥಿ ವೃಂದದವರಲ್ಲಿ, ಪ್ರತಿ ಒಬ್ಬರು ಕನಿಷ್ಟ ಒಂದು ಹೊಸ ಆವಿಷ್ಕಾರ ಮಾಡಬಲ್ಲರು. ಸಾವಿರಾರು ಹೊಸ ಉದ್ಯಮಗಳನ್ನು ವಿವಿಧ ಕ್ಷೇತ್ರಗಳಲ್ಲಿ ಭಾರತ ದೇಶಕ್ಕೆ ನೀಡಬಲ್ಲರು. ಉದ್ಯೋಗಾರ್ಥಿ ಆಗಬೇಡಿ, ದೇಶದ ಜನತೆಗೆ ಉದಯ ಸೂರ್ಯನಂತೆ ಹಲವಾರು ವಿಧವಾದ ಉದ್ಯೋಗ ಕಿರಣ ನೀಡುವಂತಾಗಿರಿ ಎಂದು ಸಲಹೆ ನೀಡಿದರು.
ರಾಜ್ಯ ಸರ್ಕಾರ ಮಾಹಿತಿ, ಜೈವಿಕ, ಮತ್ತು ವಿಜ್ಞಾನ ತಂತ್ರಜ್ಞಾನ ಇಲಾಖೆಯ ಕರ್ನಾಟಕ ಇನ್ನೋವೇಷನ್‌ಆ್ಯಂಡ್ ಟೆಕ್ನಾಲಜಿ ಸೊಸೈಟಿ (ಕೆಐಟಿಎಸ್-ಕಿಟ್ಸ್ ) ಮೂಲಕ ಡಾ. ಸಂಧ್ಯಾ ಅವಣೇಕರ್, ಮೋಹನ್ ಮಾತನಾಡಿ, ಭಾರತ ದೇಶವು ಮುಂದಿನ ದಶಕಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹಲವಾರು ಹೊಸ ಯೋಜನೆ ರೂಪಿಸಲು ಮುಂದಾಗಿದೆ.ಆ ಅವಕಾಶ ಬಳಸಿಕೊಳ್ಳಬೇಕು ಎಂದರು.
ಕಾಲೇಜಿನ ಸಿವಿಲ್, ಮೆಕ್ಯಾನಿಕಲ್, ಇಲೆಕ್ಟ್ರಿಕಲ್, ಕಂಪ್ಯೂಟರ್ ಸೈನ್ಸ್, ಇಂಜಿನಿಯರಿಂಗ್ ವಿಭಾಗಗಳ ವಿದ್ಯಾರ್ಥಿ ವೃಂದದವರಿಗೆ ರಾಜ್ಯ ಸರ್ಕಾರ ಒಟ್ಟು 19,46,500 ರೂ. ಅನುದಾನ ಬಿಡುಗಡೆಗೊಳಿಸಿದೆ. ಈ ಕುರಿತು ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಸಂಧ್ಯಾ ಅವಣೇಕರ್, ಮೋಹನ್,ಪ್ರಾಚಾರ್ಯ ಡಾ. ಕುಪ್ಪಗಲ್ ವೀರೇಶ್, ಉಪ ಪ್ರಾಚಾರ್ಯ ಡಾ. ಟಿ.ಹನುಮಂತರೆಡ್ಡಿ, ಡಾ. ಸವಿತಾ ಸೊನೋಳಿ, ಅಕಾಡೆಮಿಕ್ ಡೀನ್ ಡಾ. ಎಚ್.ಗಿರೀಶ್, ಪರೀûಾ ವಿಭಾಗದ ಡೀನ್ ಡಾ. ಬಿ.ಶ್ರೀಪತಿ, ಆರ್‌ವೈಎಂಇಸಿ, ಕೆಐಟಿಎಸ್-ಕಿಟ್ಸ್ ನ ಸಂಯೋಜಕ ಡಾ. ಎನ್.ಕೊಟ್ರೋಶ್, ಕೆ.ಎಸ್.ವಿನಯ್ ಕುಮಾರ್, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಶಿಕ್ಷಕರು ಭಾಗವಹಿಸಿದ್ದರು. ಪ್ರಾಂಶುಪಾಲ ಡಾ.ಕುಪ್ಪಗಲ್ ವೀರೇಶ್ ಸ್ವಾಗತಿಸಿದರು.