Advertisement
ಮುಖ್ಯಮಂತ್ರಿಯವರಿಗೆ ಬದ್ಧತೆ, ಕಾಳಜಿ, ಜವಾಬ್ದಾರಿ ಇದ್ದರೆ ಕೂಡಲೇ ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ನಮ್ಮನ್ನು ಮಾತುಕತೆಗೆ ಆಹ್ವಾನಿಸಿ ಸಮಸ್ಯೆ ನಿವಾರಿಸಬೇಕು. ಇಲ್ಲದಿದ್ದರೆ ಮೌಲ್ಯಮಾಪನ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ವರ್ಷದ ಮಾಸಿಕ ವೇತನ ಇನ್ನೂ ಬಿಡುಗಡೆ ಮಾಡಿಲ್ಲ. ಉನ್ನತ ಶಿಕ್ಷಣ ಸಚಿವ ಸ್ಥಾನದಲ್ಲಿ ಮುಂದುವರಿಯಲು ಅನರ್ಹರಾಗಿದ್ದಾರೆ. ತಕ್ಷಣವೇ ಸಭೆ ಕರೆದು ಸೇವಾ ಹಿರಿತನ, ವಯೋಮಿತಿ ಆಧಾರಪರಿಗಣಿಸಿ ಸೇವಾ ಭದ್ರತೆ ಕಲ್ಪಿಸಿ ಎಂದು ಒತ್ತಾಯಿಸಿದರು.