Advertisement

ಗುಡಗೇರಿ ಗ್ರಾಮಸ್ಥರು ವಿರೋಧಿಸಿದ್ರೂ ಮದ್ಯದಂಗಡಿ ಆರಂಭ

01:37 PM May 07, 2020 | Suhan S |

ಕುಂದಗೋಳ: ತಾಲೂಕಿನ ಗುಡಗೇರಿ ಗ್ರಾಮದಲ್ಲಿ ಬುಧವಾರ ಪ್ರತಿಭಟನಾಕಾರರೊಂದಿಗೆ ತಾಲೂಕಾಡಳಿತ ಸಭೆ ನಡೆಸಿತು. ಎಲ್ಲರ ಮನವೊಲಿಸಿದ ನಂತರ ತಾತ್ಕಾಲಿಕ ಬಂದ್‌ ಮಾಡಲಾಗಿದ್ದ ಎರಡು ಮದ್ಯದ ಅಂಗಡಿಗಳನ್ನು ಪುನಃ ಆರಂಭಿಸಲಾಯಿತು.

Advertisement

ಗುಡಗೇರಿ ಪೊಲೀಸ್‌ ಠಾಣೆ ಆವರಣದಲ್ಲಿ ಧಾರವಾಡ ಗ್ರಾಮೀಣ ಡಿವೈಎಸ್‌ಪಿ ರವಿ ನಾಯಕ್‌ ಹಾಗೂ ತಹಶೀಲ್ದಾರ್‌ ಬಸವರಾಜ ಮೇಳವಂಕಿ ಅವರ ನೇತೃತ್ವದಲ್ಲಿ ಗ್ರಾಮಸ್ಥರೊಂದಿಗೆ ಸಭೆ ನಡೆಯಿತು. ಈ ವೇಳೆ ಡಿವೈಎಸ್‌ಪಿ ರವಿ ನಾಯಕ್‌ ಮಾತನಾಡಿ, ಲೈಸೆನ್ಸ್‌ ಹೊಂದಿರುವ ಅಂಗಡಿಗಳನ್ನು ತಕ್ಷಣದಿಂದಲೇ ಬಂದ್‌ ಮಾಡಲು ಆಗುವುದಿಲ್ಲ. ಲಾಕ್‌ಡೌನ್‌ ತೆರವುಗೊಂಡ ನಂತರ ನಿಮ್ಮ ಮುಂದಿನ ನಿಲುವು ಕೈಗೊಳ್ಳಬಹುದು. ಈಗ ಯಾವುದೇ ಶಾಂತಿಭಂಗ ಆಗದಂತೆ ತಾವೆಲ್ಲರೂ ಸಹಕರಿಸಬೇಕು ಎಂದರು. ಮೇ 17ರ ನಂತ ರ ಆದರೂ ಸಹ ಮದ್ಯ ಬಂದ್‌ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಗ್ರಾಪಂ ಅಧ್ಯಕ್ಷ ಚನ್ನಬಸನಗೌಡ ಚಿಕ್ಕಗೌಡ್ರ, ಬಸನಗೌಡ ಕರೆಹೊಳಲಪ್ಪಗೌಡ್ರ, ವಿ.ಡಿ .ಹಿರೇಗೌಡ್ರ, ಗಂಗಾಧರ ಧರೆಣ್ಣವರ, ಮಲ್ಲನಗೌಡ ಯತ್ನಳ್ಳಿ, ನಾಗರಾಜ ಬೂದಿಹಾಳ, ಸಂಪತ್‌ ತಿಮ್ಮನಗೌಡ್ರ, ಹನಮಂತಗೌಡ ಭಮ್ಮನಗೌಡ್ರ ಹಾಗೂ ಸಿಪಿಐ ಬಸವರಾಜ ಕಲ್ಲಮ್ಮನವರ, ಪಿಎಸ್‌ಐ ನವೀನ್‌ ಜಕ್ಕಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next