ವಿಜಯಪುರ: ಕರ್ನಾಟಕಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರ ರಾಜ್ಯದ ಗಡಿಯಲ್ಲಿರುವ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಗುಡ್ಡಾಪುರ ಗ್ರಾಮದ ದಾನಮ್ಮದೇವಿ ಜಾತ್ರೆ ಈ ಬಾರಿ ರದ್ದುಗೊಳಿಸಲಾಗಿದೆ. ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರ ಸಮಕಾಲೀನ ಶರಣೆಯ ಕ್ಷೇತ್ರವಾಗಿದ್ದು, ಅಂತಾರಾಜ್ಯ ಮಟ್ಟದಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿರುವ ಶರಣೆ ಗುಡ್ಡಾಪುರ ದಾನಮ್ಮದೇವಿ ಜಾತ್ರೆ ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ರದ್ದಾಗಿದೆ.
ಪ್ರತಿವರ್ಷ ಕಾರ್ತಿಕ ಮಾಸದ ಸಂದರ್ಭದಲ್ಲಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶದ ರಾಜ್ಯಗಳಿಂದ ಲಕ್ಷಾಂತರ ಭಕ್ತರು ದಾನಮ್ಮದೇವಿ ಜಾತ್ರೆಗಾಗಿ ಪಾದಯಾತ್ರೆ ಮೂಲಕ ಗುಡ್ಡಾಪುರ ಗ್ರಾಮಕ್ಕೆ ತೆರಳುತ್ತಾರೆ.
ಇದನ್ನೂ ಓದಿ:ಕುಕ್ಕೆ ಕ್ಷೇತ್ರದಲ್ಲಿ ಜನಸಾಗರ: ಸೇವಾ ರಶೀದಿಗಾಗಿ ಪರದಾಟ, ಸಿಬ್ಬಂದಿ ಜೊತೆ ವಾಗ್ವಾದ
ಆದರೆ ಈ ಬಾರಿ ಡಿಸೆಂಬರ್ 13 ರಿಂದ 16 ರ ವರೆಗೆ ನಡೆಯಬೇಕಿದ್ದ ಗುಡ್ಡಾಪುರ ದಾನಮ್ಮದೇವಿ ಜಾತ್ರೆ ರದ್ದು ಮಾಡಲಾಗಿದೆ ಎಂದು ಶ್ರೀದಾನಮ್ಮದೇವಿ ದೇವಸ್ಥಾನ ಟ್ರಸ್ಟ್ ಸಮಿತಿ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದೆ.