Advertisement

ಸೌದಿಯಲ್ಲಿನ್ನು ಹಜ್‌ ಯಾತ್ರೆಗೆ ಪುರುಷ ಒಡನಾಡಿಯ ಅಗತ್ಯವಿಲ್ಲ!

12:13 PM Oct 14, 2022 | Team Udayavani |

ನವದೆಹಲಿ: ಹಜ್‌ ಯಾತ್ರೆ ಕೈಗೊಳ್ಳಬೇಕೆಂಬ ಕನಸಿರುವ ಮಹಿಳೆಯರಿಗೆ ಸೌದಿ ಅರೇಬಿಯಾ ಸರ್ಕಾರ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಸೌದಿ ಅರೇಬಿಯಾದಲ್ಲಿ ಮಹಿಳೆಯರು ಮೆಹ್ರಾಮ್‌(ಪುರುಷ ಒಡನಾಡಿ) ಇಲ್ಲದೆಯೇ ಹಜ್‌ ಅಥವಾ ಉಮ್ರಾ ಯಾತ್ರೆ ಕೈಗೊಳ್ಳಬಹುದು!

Advertisement

ಸೌದಿಯ ಹಜ್‌ ಮತ್ತು ಉಮ್ರಾ ಸೇವೆಗಳ ಸಲಹೆಗಾರ ಅಹ್ಮದ್‌ ಸಲೇಹ್‌ ಹಲಾಬಿ ಅವರು ಈ ಘೋಷಣೆ ಮಾಡಿದ್ದಾರೆ. ಅದರಂತೆ, ಇನ್ನು ಪುರುಷ ಒಡನಾಡಿಯಿಲ್ಲದೆ, ಮಹಿಳೆಯರು ಯಾತ್ರೆ ಕೈಗೊಳ್ಳಬಹುದು. ಯಾತ್ರೆಗೆಂದು ಬರುವ ಎಲ್ಲ ಮಹಿಳೆಯರಿಗೂ ಪೂರ್ಣ ಪ್ರಮಾಣದಲ್ಲಿ ಸುರಕ್ಷತೆ ಒದಗಿಸುವ ಉದ್ದೇಶದಿಂದ ಎಲ್ಲ ಮಾದರಿಯ ಸಾರಿಗೆ ವ್ಯವಸೆœಗಳು, ಬಂದರುಗಳು ಸೇರಿದಂತೆ ಸೌದಿ ಅರೇಬಿಯಾದಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ. ಈ ಮೂಲಕ, ಮಹಿಳೆಯರಿಗೆ ಹಜ್‌ ಯಾತ್ರೆ ಕೈಗೊಳ್ಳಲು ಮೆಹ್ರಾಮ್‌ನ ಅಗತ್ಯವಿದೆಯೇ ಎಂಬ ಚರ್ಚೆಗೆ ಸೌದಿ ಸರ್ಕಾರ ತೆರೆ ಎಳೆದಿದೆ.

ಕೆಲವು ಮಹಿಳೆಯರು ಕಠಿಣವಾದ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯಲ್ಲಿ ಬದುಕುತ್ತಿರುತ್ತಾರೆ. ಜೀವನದಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿರುತ್ತಾರೆ. ಅಂಥವರಿಗೆ ಪುರುಷ ಒಡನಾಡಿಯೊಂದಿಗೆ ಯಾತ್ರೆ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಕೆಲವರಿಗೆ ಮೆಹ್ರಾಮ್‌ನನ್ನು ಹುಡುಕುವುದು ಕಷ್ಟವಾದರೆ, ಇನ್ನು ಕೆಲವರಿಗೆ ಪುರುಷ ಒಡನಾಡಿಯೊಂದಿಗೆ ಯಾತ್ರೆ ಕೈಗೊಳ್ಳುವುದು ದುಬಾರಿಯಾಗುತ್ತದೆ. ಇದೆಲ್ಲವನ್ನು ಮನಗಂಡು ಇಂಥ ನಿರ್ಧಾರ ಕೈಗೊಂಡಿದ್ದೇವೆ ಎಂದೂ ಅಹ್ಮದ್‌ ಹಲಾಬಿ ತಿಳಿಸಿದ್ದಾರೆ. ಭಾರತದಲ್ಲಿ 2019ರಿಂದಲೇ ಮೆಹ್ರಾಮ್‌ ಇಲ್ಲದೇ ಮಹಿಳೆಯರಿಗೆ ಹಜ್‌ ಯಾತ್ರೆ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next