Advertisement

ಬಂಜೆತನ ಪರಿಹಾರ ಭರವಸೆ ನೀಡಿ ಬ್ಲಾಕ್‌ಮೇಲ್‌

06:00 AM Oct 08, 2018 | |

ಕಾಬೂಲ್‌: ಈ ತಾಯಿತ ಕಟ್ಟಿಕೊಳ್ಳಿ… ನಿಮ್ಮ ಬಂಜೆತನ ನಿವಾರಣೆಯಾಗುತ್ತದೆ… ಎಂದು ಲೆಕ್ಕವಿಲ್ಲದಷ್ಟು ಮಹಿಳೆಯರನ್ನು ಮೋಸ ಮಾಡಿ, ಬ್ಲಾಕ್‌ವೆುಲ್‌ ಮಾಡಿದ ರಸೂಲ್‌ ಲಾಂಡೆಗೆ ಈಗ ಅಫ್ಘಾನಿಸ್ತಾನದ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈತ ಮೊದಲು ತಾಯಿತ ಕೊಟ್ಟು, ಸಮಸ್ಯೆ ಪರಿಹಾರವಾಗದಿದ್ದರೆ ತನ್ನೊಂದಿಗೆ ಮಲಗಲು ಹೇಳುತ್ತಿದ್ದ. ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದ ವಿಡಿಯೋವನ್ನು ಚಿತ್ರೀಕರಿಸಿ ನಂತರ ಬ್ಲಾಕ್‌ವೆುàಲ್‌ ಮಾಡುತ್ತಿದ್ದ. ಪ್ರತಿ ತಿಂಗಳೂ ಇಷ್ಟು ಹಣ ಕೊಡಬೇಕೆಂದು ತಾಕೀತು ಮಾಡುತ್ತಿದ್ದ. ಧಾರ್ಮಿಕವಾಗಿ ಅತ್ಯಂತ ಸಂಪ್ರದಾಯಬದ್ಧ ದೇಶ ಅಫ್ಘಾನಿಸ್ತಾನದಲ್ಲಿ ಈತ ಈ ಕೃತ್ಯವನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿದ್ದ. ಅಷ್ಟೇ ಅಲ್ಲ, ಕೆಲವು ವರ್ಷಗಳ ಹಿಂದೆ ಈತನ ಕೃತ್ಯ ಬಹಿರಂಗವಾದಾಗ ಟರ್ಕಿಗೆ ಓಡಿಹೋಗಿದ್ದ. ನಂತರ ಈತ ವಾಪಸ್‌ ಅಫ್ಘಾನಿಸ್ತಾನಕ್ಕೆ ಬಂದು ಸೇನೆಯನ್ನೂ ಸೇರಿಕೊಂಡಿದ್ದ. ಆದರೆ ಸೇನೆಯಲ್ಲಿ ಈತನ ಪೂರ್ವಾಪರ ತಿಳಿಯುತ್ತಿದ್ದಂತೆಯೇ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈಗ ಈತನ ಹುಡುಕಾಟ ನಡೆದಿದೆ.

Advertisement

ಆದರೆ ರಸೂಲ್‌ ಹುಡುಕಾಟ ನಡೆಸುತ್ತಿದ್ದಂತೆ ಸಮಾಜದಲ್ಲಿ ಈತ ನಡೆಸಿದ ಕುಕೃತ್ಯ ಬಯಲಾಗುತ್ತಿದೆ. ಮುಲ್ಲಾ ಲಾಂಡೆ ಎಂದೇ ಕುಖ್ಯಾತನಾಗಿರುವ ಈತನಿಂದ ಚಿಕಿತ್ಸೆ ಪಡೆದಿರುವ ಮಹಿಳೆಯರು ಸಮಾಜಕ್ಕೆ ಹೆದರಿ ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಇದೇ ರೀತಿ ಒಂಭತ್ತಕ್ಕೂ ಹೆಚ್ಚು ಮಹಿಳೆಯರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈತನಿಂದ ಚಿಕಿತ್ಸೆ ಪಡೆದ ಹಲವರಿಗೆ ಮಕ್ಕಳೂ ಆಗಿದ್ದು, ಮರ್ಯಾದಾ ಹತ್ಯೆಯ ಶಂಕೆ ಇನ್ನಷ್ಟು ವ್ಯಾಪಕವಾಗುವ ಸಾಧ್ಯತೆಯಿದೆ. ಸದ್ಯ ಮುಲ್ಲಾ ಲಾಂಡೆ ಇರಾನ್‌ಗೆ ತೆರಳಿದ್ದಾನೆ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next