Advertisement

Pen Drive ಹಂಚಿದವರ ವಿರುದ್ಧ ಯಾಕೆ ಎಸ್ಐಟಿ ಕ್ರಮ ಕೈಗೊಳ್ಳಲಿಲ್ಲ: ಜಿ.ಟಿ ದೇವೇಗೌಡ ಪ್ರಶ್ನೆ

12:10 PM May 07, 2024 | Team Udayavani |

ಮೈಸೂರು: ಚುನಾವಣೆಗೂ ಮುನ್ನ ಪೆನ್ ಡ್ರೈವ್ ಹಂಚಿಕೆ ಮಾಡಿರುವ ವ್ಯಕ್ತಿಗಳ ವಿರುದ್ಧ ಎಸ್ಐಟಿ ಯಾಕೆ ಇದುವರೆಗೂ ಕ್ರಮ ಕೈಗೊಳ್ಳಿಲ್ಲ ಎಂದು ಶಾಸಕ ಜಿ.ಟಿ. ದೇವೇಗೌಡ ಪ್ರಶ್ನೆ ಮಾಡಿದ್ದಾರೆ.

Advertisement

ಮೈಸೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ ಸಂಸದ ಪ್ರಜ್ವಲ್ ರೇವಣ್ಣ ಮೇಲೆ‌ ಬಂದಿರುವ ಆರೋಪದ ಬಗ್ಗೆ ಮೊದಲ ದಿನವೇ ಕುಮಾರಸ್ವಾಮಿ ಅವರು ಹೇಳಿಕೆ ನೀಡಿದ್ದಾರೆ ಯಾರೇ ತಪ್ಪು ಮಾಡಿದ್ದರು ತನಿಖೆಯಾಗಲಿ, ಶಿಕ್ಷಯಾಗಲಿ ಎಸ್ಐಟಿ ತಂಡಕ್ಕೆ ಸ್ವಾಗತಿಸುತ್ತೇವೆ ಎಂದು ಅಲ್ಲದೆ ಕೋರ್ ಕಮಿಟಿ ಸಭೆ ಕರೆದು ಪ್ರಜ್ವಲ್ ರೇವಣ್ಣ ಅವರನ್ನ ಅಮಾನತು ಕೂಡ ಮಾಡಲಾಗಿದೆ.

21 ತಾರೀಖು ಪೆನ್ ಡ್ರೈವ್ ಹಂಚಿಕೆ ಮಾಡಲಾಗಿದೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ಕೊಡಲಾಗಿದೆ. ಕೆ.ಆರ್ ನಗರದ ಒಬ್ಬ ಮಹಿಳೆ ಕಿಡ್ನ್ಯಾಪ್ ಪ್ರಕರಣದಡಿ ರೇವಣ್ಣ ಅವರನ್ನ ಬಂಧಿಸಲಾಗಿದೆ. ತನಿಖಾ ತಂಡ ವಿಡಿಯೋವನ್ನ ಮೊಬೈಲ್‌ನಲ್ಲಿ ಇಟ್ಟುಕೊಳ್ಲಬಾರದು ಎಂದು ತನಿಖಾ ಸಂಸ್ಥೆ ‌ಪ್ರಕಟಣೆ ಹೊರಡಿಸಿದ್ದಾರೆ. ಕಾರ್ತಿಕ್ ಡ್ರೈವರ್ ದೇವರಾಜ್ ಗೌಡರಿಗೆ ವಿಡಿಯೋ‌‌ ಕೊಟ್ಟಿದ್ದಾನೆ. ಡಿಸಿಎಂ ಸೂಚನೆ ಮೇರೆಗೆ ಡ್ರೈವರ್ ಕಾರ್ತಿಕ್ ಅವರನ್ನ ವಿದೇಶಕ್ಕೆ ಕಳುಹಿಸಲಾಗಿದೆ ಎಂದು ಆರೋಪಿಸಿದರು.

ಪ್ರಧಾನಿಗೂ, ದೇವೇಗೌಡರಿಗೆ, ಕುಮಾರಸ್ವಾಮಿ ಅವರಿಗೂ ಈ ಪ್ರಕರಣಕ್ಕೂ ಏನು ಸಂಬಂಧ. ಪ್ರಕರಣಕ್ಕೆ ಸಂಬಂಧಿಸಿ ಪೆನ್ ಡ್ರೈವ್ ಹಂಚಿಕೆ ಮಾಡಿದರವನ್ನ ಬಂಧನ ಮಾಡಿಲ್ಲ. ದೇವರಾಜೇಗೌಡ ಜೊತೆ ಶಿವರಾಮೇಗೌಡ, ಡಿಕೆ ಶಿವಕುಮಾರ್ ಮಾತನಾಡಿರುವ ಆಡಿಯೋ‌ ರಿಲೀಸ್ ಮಾಡಿದ್ದಾರೆ. ಈ ಪ್ರಕರಣವನ್ನ ಸಿಬಿಐಗೆ ವಹಿಸಬೇಕು ಎಂದು ವಕೀಲ ದೇವರಾಜೇಗೌಡ ಹೇಳಿದ್ದಾರೆ. ಹೀಗಾಗಿ ಪ್ರಕರಣವನ್ನ ನ್ಯಾಯಾಂಗ ತನಿಖೆಗೆ ವಹಿಸಿ. ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಲಿ. ಅಲ್ಲದೆ ಡಿಸಿಎಂ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಜಿಟಿ ದೇವೇಗೌಡ ಆಗ್ರಹಿಸಿದರು.

ದೇವೇಗೌಡರಿಗೆ ಈ ವಿಚಾರ ಗೊತ್ತಿಲ್ಲ. ಈ ವಿಚಾರದಲ್ಲಿ ಕುಮಾರಸ್ವಾಮಿ ಆಗಲಿ, ದೇವೇಗೌಡರನ್ನಾಗಲಿ ತರುವುದು ಸರಿಯಲ್ಲ. ನಾಳೆ ಈ ಪ್ರಕರಣ ಖಂಡಿಸಿ ರಾಜ್ಯಾದ್ಯಂತ ಜೆಡಿಎಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಹೇಳಿದರು.

Advertisement

ಮಾಜಿ ಶಾಸಕ ಸಾ.ರಾ. ಮಹೇಶ್ ಮಾತನಾಡಿ, ರೇವಣ್ಣ ವಿರುದ್ಧ ಕಿಡ್ನ್ಯಾಪ್ ಪ್ರಕರಣದ ಬಗ್ಗ ನ್ಯಾಷನಲ್‌ ಮೀಡಿಯಾದಲ್ಲಿ ಬಂದಿದೆ. ದೂರು ದಾಖಲಾಗುವ ಮುನ್ನವೇ ನ್ಯಾಶನಲ್‌ ಮೀಡಿಯಾದಲ್ಲಿ ಬಂದಿದೆ. ಹಾಗಾದರೇ ಇದರ ರೂವಾರಿ ಯಾರು. ರಾಜಗೋಪಾಲ್ ತೋಟದಲ್ಲಿ ಮಹಿಳೆ ರಕ್ಷಣೆ ಮಾಡಲಾಗಿದೆ ಎನ್ನುತ್ತಾರೆ. ಹಾಗಾದರೆ ಮಹಿಳೆಯ ತೋಟದಲ್ಲಿ ಇರುವ ಬಗ್ಗೆ ಯಾಕೆ ವಿಚಾರ ಇಲ್ಲ, ಹುಣಸೂರಿನ ಕರಿಗೌಡ ಸ್ಟ್ರೀಟ್ ನಲ್ಲಿ ಪವಿತ್ರ ಎಂಬುವರ ಮನೆಯಿಂದ ಮಹಿಳೆಯನ್ನ ಕರೆದುಕೊಂಡು ಬರಲಾಗಿದೆ. ಸಂತ್ರಸ್ತೆಯ ಸಂಭಂದಿಯ ಮನೆಯಿಂದ ಪೊಲೀಸರು ಕರೆದುಕೊಂಡು ಹೋಗಿದ್ದಾರೆ.
ಯಾರು ಯಾರಿಗೆ ಕರೆಮಾಡಿದ್ದಾರೆ, ಕಾಲ್ ಲೋಕೇಶನ್ ಎಲ್ಲಿ ಕೊನೆಗೊಂಡಿದೆ, ಎಸ್ಐಟಿಯಲ್ಲಿರುವ ಕೆಲವು ಅಧಿಕಾರಿಗಳು ಕಾಂಗ್ರೆಸ್ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ.

ಚುನಾವಣೆ ಎರೆಡು‌ ದಿನ‌ ಮುನ್ನ ಪೆನ್ ಡ್ರೈವ್ ಹಂಚಿದು ಯಾರು. ಯಾಕೆ ಅವರ ಮೇಲೆ ಎಸ್ಐಟಿ ಕ್ರಮ ತೆಗೆದುಕೊಳ್ಳುತ್ತಿಲ್ಲ. ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಯಾಗಬೇಕು. ಹಳೇ ಮೈಸೂರು‌ ಭಾಗದಲ್ಲಿ ಜೆಡಿಎಸ್ ಪಕ್ಷವನ್ನ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಕೆಲವು ಅಧಿಕಾರಿಗಳು ಅವರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಗುಡುಗಿದರು.

ಇದನ್ನೂ ಓದಿ: Politics: ಸಿದ್ದರಾಮಯ್ಯ, ಪರಮೇಶ್ವರ ಅವರ ಸಿಡಿಯೂ ಮುಂದೆ ಬರಬಹುದು; ಜಾರಕಿಹೊಳಿ‌

Advertisement

Udayavani is now on Telegram. Click here to join our channel and stay updated with the latest news.

Next