Advertisement

ಜಿಎಸ್‌ಟಿಎನ್‌ ಪೂರ್ಣ ಮಾಲೀಕತ್ವಕ್ಕೆ ಚಿಂತನೆ

07:00 AM Apr 12, 2018 | Team Udayavani |

ಹೊಸದಿಲ್ಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಡಿಯಲ್ಲಿ ಸುಲಭವಾಗಿ ತೆರಿಗೆ ಸಲ್ಲಿಸಲು ಹಾಗೂ ಆ ಕುರಿತಂತೆ ಮಾರ್ಗದರ್ಶನ ಮಾಡಲು ಕೇಂದ್ರ ಸರಕಾರ, ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ರೂಪಿಸಿದ್ದ ಜಿಎಸ್‌ಟಿ ನೆಟ್‌ವರ್ಕ್‌ ಎಂಬ ಸ್ವಯಂಸೇವಾ ಸಂಸ್ಥೆಯನ್ನು ಸಂಪೂರ್ಣ ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಚಿಂತನೆ ನಡೆಸಿದೆ. ಸಂಸ್ಥೆಯಲ್ಲಿ ಖಾಸಗಿ ಕಂಪೆನಿಗಳು ಹೊಂದಿರುವ ಶೇ. 51ರಷ್ಟು ಷೇರುಗಳನ್ನು ಕೊಳ್ಳುವ ಮೂಲಕ ಸಂಸ್ಥೆಯ ಆಡಳಿತವನ್ನು ತನ್ನ ವಶಕ್ಕೆ ಪಡೆಯಲು ಸರಕಾರ ಆಲೋಚಿಸಿದೆ. ಪ್ರಸ್ತುತ, ಕೇಂದ್ರ ಸರಕಾರವು, ಈ ಸಂಸ್ಥೆಯಲ್ಲಿ ಶೇ.24.5ರಷ್ಟು ಷೇರು ಹೊಂದಿದ್ದರೆ, ರಾಜ್ಯ ಸರಕಾರಗಳು ಮತ್ತು ವಿಶೇಷ ಅಧಿಕಾರವುಳ್ಳ ಸಮಿತಿಯ ಪಾಲು ಶೇ. 24.5, ಎಚ್‌ಡಿಎಫ್ಸಿ ಲಿ. ಶೇ. 10, ಎಚ್‌ಡಿಎಫ್ಸಿ ಬ್ಯಾಂಕ್‌ ಶೇ. 10, ಐಸಿಐಸಿಐ ಬ್ಯಾಂಕ್‌ ಶೇ. 10, ಎನ್‌ಎಸ್‌ಇ 

Advertisement

ಸ್ಟ್ರಾಟೆಜಿಕ್‌ ಇನ್ವೆಸ್ಟ್‌ಮೆಂಟ್‌ ಕಾರ್ಪೊರೇಷನ್‌ ಶೇ.10, ಎಲ್‌ಐಸಿ ಹೌಸಿಂಗ್‌ ಫೈನಾನ್ಸ್‌ ಲಿಮಿಟೆಡ್‌ ಶೇ.11 ಇದೆ.

Advertisement

Udayavani is now on Telegram. Click here to join our channel and stay updated with the latest news.

Next