Advertisement

ಜಿಎಸ್‌ಟಿ ಸರಳ ತೆರಿಗೆ ಪದ್ಧತಿ; ಸುಲಭ ಮಾಹಿತಿ ಲಭ್ಯ

11:50 AM Jul 29, 2017 | |

ಯಲಹಂಕ: “ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸರಳ ತೆರಿಗೆ ಪದ್ಧತಿಯಾಗಿದ್ದು, ಅದರ ಕಾನೂನು, ವಿವರಗಳು ಸುಲಭವಾಗಿ ಲಭ್ಯವಿವೆ. ಜಿಎಸ್‌ಟಿಯಿಂದ ಉದ್ಯೋಗಾವಕಾಶಗಳೂ ಹೆಚ್ಚುವ ಸಾಧ್ಯತೆಗಳಿವೆ’ ಎಂದು ಕೇಂದ್ರ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತ ಶ್ರೀರಾಮ್‌ ಹೇಳಿದರು.

Advertisement

ಕೇಂದ್ರ ಸರ್ಕಾರ, ಯಲಹಂಕದ “ಶೇಷಾದ್ರಿಪುರಂ ಇನ್ಸ್‌ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌’ ಮತ್ತು ಶೇಷಾದ್ರಿಪುರಂ ಕಾಲೇಜು ಸ್ನಾತಕೋತ್ತರ ಅಧ್ಯಯನ ಕೇಂದ್ರ ವತಿಯಿಂದ ಶುಕ್ರವಾರ ಆಯೋಜಿಸಿದ್ದ “ಜಿಎಸ್‌ಟಿ – ಸವಾಲುಗಳು ಹಾಗೂ ಯಶಸ್ವಿ ನಿರ್ವಹಣೆ’ ಕುರಿತ ರಾಷ್ಟ್ರ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, “ಜಿಎಸ್‌ಟಿ ಅನುಷ್ಠಾನಗೊಳ್ಳುವುದು ವಿಳಂಬವಾದರೂ ಅದು ಅತ್ಯುತ್ತಮವಾದ ತೆರಿಗೆ ಪದ್ಧತಿ. ವಸ್ತುಗಳ ರಫ್ತು ಮಾಡುವಿಕೆ ಸುಲಭವಾಗುತ್ತದೆ,’ ಎಂದರು. 

“ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಎಲ್ಲಾ ನಿರ್ಣಯಗಳನ್ನು ಸರ್ವಸಮ್ಮತವಾಗಿ ಅಂಗೀಕರಿಸಲಾಗಿದೆ. ಕಾನೂನು ಮತ್ತು ಜಿಎಸ್‌ಟಿಯ ಬಗ್ಗೆ ತಿಳಿಸಲು ಜಿಎಸ್‌ಟಿ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹಳೆಯ ತೆರಿಗೆ ಪದ್ಧತಿ ಕ್ಲಿಷ್ಟವಾಗಿತ್ತು. ಇದರಿಂದಾಗಿ ಕಾನೂನು ಹೋರಾಟಗಳು ನಡೆಯುತ್ತಿದ್ದವು. ಅದರ ಪರಿಣಾಮ ಹಣದ ಕ್ರೂಢಿಕರಣ ಕುಂಠಿತವಾಗುತ್ತಿತ್ತು,’ ಎಂದು ತಿಳಿಸಿದರು. 

ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಡಾ.ಬಿ.ವಿ.ಮುರುಳೀದರ್‌ ಮಾತನಾಡಿ, “ಜನ ಜಿಎಸ್‌ಟಿಯನ್ನು ಸರಿಯಾಗಿ ಅರಿತುಕೊಂಡಲ್ಲಿ ರಾಜ್ಯಕ್ಕೆ ಒಳಿತಾಗುತ್ತದೆ,’ ಎಂದು ಹೇಳಿದರು. ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌರವ ಪ್ರಧಾನ ಕಾರ್ಯದರ್ಶಿ ಡಾ. ವೂಡೇ.ಪಿ.ಕೃಷ್ಣ,  ಎಫ್ಕೆಸಿಐ ಅಧ್ಯಕ್ಷ ಕೆ.ರವಿ, ಸರಕು ಮತ್ತು ಸೇವಾ ತೆರಿಗೆ ಜಾಲದ ಕಾರ್ಯನಿರ್ವಾಹಕ ಉಪಾಧ್ಯಕ್ಷ (ತಂತ್ರಜಾnನ) ನಿತಿನ್‌ಮಿಶ್ರ, ಎಮ್‌ಎಸ್‌ಎಂಇ ಅಭಿವೃದ್ದಿ ಸಂಸ್ಥೆಯ ನಿರ್ದೇಶಕ ಎಸ್‌.ಎನ್‌.ರಂಗಪ್ರಸಾದ್‌, ಶೇಷಾದ್ರಿಪುರಂ ಶಿಕ್ಷಣ ದತ್ತಿ ಗೌರವ ಅಧ್ಯಕ್ಷ ಎನ್‌.ಆರ್‌. ಪಂಡಿತಾರಾಧ್ಯ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next