Advertisement

ದೇಶದ ಭವಿಷ್ಯದ ದೃಷ್ಟಿಯಿಂದ ಜಿಎಸ್‌ಟಿ ಅಗತ್ಯ: ಡಾ|ಸುಬ್ರಹ್ಮಣ್ಯಂ

02:10 AM Jul 13, 2017 | Team Udayavani |

ಬಂದರು: ದೇಶದ ಭವಿಷ್ಯದ ದೃಷ್ಟಿಯಿಂದ ಜಿಎಸ್‌ಟಿಯಂತಹ ತೆರಿಗೆ ಪದ್ಧತಿಗಳು ಅಗತ್ಯವಾಗಿದ್ದು, ಹೊಸ ತೆರಿಗೆ ಪದ್ಧತಿಗಳು ಬಂದಾಗ ಆತಂಕಗಳಾಗುವುದು ಸಹಜ. ಎಲ್ಲರೂ ಕೈಜೋಡಿಸಿಕೊಂಡು ಇದರ ಯಶಸ್ಸಿಗೆ ಶ್ರಮಿಸಬೇಕು ಎಂದು ಸೆಂಟ್ರಲ್‌ ಎಕ್ಸೈಸ್‌ನ ಆಯುಕ್ತ ಡಾ| ಎಂ. ಸುಬ್ರಹ್ಮಣ್ಯಂ ಹೇಳಿದರು. ಅವರು ಬುಧವಾರ ನಗರದ ಬಂದರಿನಲ್ಲಿರುವ ಕೆಸಿಸಿಐ ಸಭಾಂಗಣದಲ್ಲಿ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಆಯೋಜಿಸಿದ್ದ ಜಿಎಸ್‌ಟಿ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಈ ಹಿಂದೆ ವ್ಯಾಟ್‌ ಬಂದಾಗಲೂ ವರ್ತಕರು ಸಹಿತ ಎಲ್ಲರಿಗೂ ಆತಂಕ ಎದುರಾಗಿತ್ತು. ಆದರೆ ಸಮಯ ಕಳೆದಂತೆ ಅದು ಸರಿಯಾಗಿದೆ. ಹೂಡಿಕೆದಾರರು ಈ ಹಿಂದಿನ ಎಲ್ಲ ಗೊಂದಲಗಳನ್ನು ಬಿಟ್ಟು ಹೊಸ ಪದ್ಧತಿಗೆ ಹೊಂದಿಕೊಳ್ಳುವುದು ಅನಿವಾರ್ಯವಾಗಿದೆ. ಈ ಕುರಿತು ಯಾವುದೇ ಅನುಮಾನಗಳಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆಯಬಹುದು ಎಂದರು. ಜಿಎಸ್‌ಟಿಯಲ್ಲಿ ಸಿಜಿಎಸ್‌ಟಿ, ಎಸ್‌ಜಿಎಸ್‌ಟಿ ಹಾಗೂ ಐಜಿಎಸ್‌ಟಿಗಳೆಂಬ ವಿಭಾಗಗಳಿಗೆ ಇವುಗಳ ಕುರಿತು ತಿಳಿವಳಿಕೆ ಇದ್ದಾಗ ನಮಗೆ ಜಿಎಸ್‌ಟಿ ಅಳವಡಿಸಿಕೊಳ್ಳುವುದು ಸುಲಭವಾಗುತ್ತದೆ. ಜಿಎಸ್‌ಟಿ  ವ್ಯಾಪ್ತಿಗೆ ಒಗ್ಗಿಕೊಳ್ಳಲು ಅಕ್ಟೋಬರ್‌ವರೆಗೆ ಅವಕಾಶ ಇರುವುದರಿಂದ ವರ್ತಕರು ಆತಂಕ ಪಡಬೇಕಾಗಿಲ್ಲ ಎಂದರು. 

ಬಳಿಕ ತೆರಿಗೆ ಇಲಾಖಾ ಅಧಿಕಾರಿ ಗಳೊಂದಿಗೆ ಸಂವಾದ ನಡೆಯಿತು. ವೇದಿಕೆಯಲ್ಲಿ ಕೆಸಿಸಿಐ ಗೌರವ ಕೋಶಾಧ್ಯಕ್ಷ ಎಂ. ಗಣೇಶ್‌ ಭಟ್‌, ಗೌರವ ಕಾರ್ಯದರ್ಶಿ ಪಿ.ಬಿ. ಅಬ್ದುಲ್‌ ಹಮೀದ್‌ ಉಪಸ್ಥಿತರಿದ್ದರು. ಕೆಸಿಸಿಐ ಅಧ್ಯಕ್ಷ ಜೀವನ್‌ ಸಲ್ದಾನಾ ಸ್ವಾಗತಿಸಿದರು. ಉಪಾಧ್ಯಕ್ಷೆ ವಾತಿಕಾ ಪೈ ಅತಿಥಿಯವರನ್ನು ಪರಿಚಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next