Advertisement

ಜಿಎಸ್‌ಟಿ ಮಹತ್ವದ ತೆರಿಗೆ ಪದ್ಧತಿ: ದೇಶಪಾಂಡೆ

11:41 AM Oct 30, 2017 | Team Udayavani |

ಹೈದರಾಬಾದ್‌: ಜಿಎಸ್‌ಟಿ ಒಂದು ಮಹತ್ವದ ತೆರಿಗೆ ಪದ್ಧತಿಯಾ ಗಿದ್ದು ಸಂಪೂರ್ಣ ಯಶಸ್ಸು ಕಾಣಬೇಕಾದಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಮಾಡಿ, ಸರಳಗೊಳಿಸಬೇಕು ಎಂದು ರಾಜ್ಯ ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ ಆಗ್ರಹಿಸಿದ್ದಾರೆ. “ಜಿಎಸ್‌ಟಿಯಿಂದ ಸರ್ಕಾರಕ್ಕೆ ಲಾಭವಾಗಿದ್ದರೂ, ಮಧ್ಯಮ ಹಾಗೂ ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ತೊಂದರೆಗೊಳಗಾಗಿವೆ.

Advertisement

ಹಾಗಾಗಿ, ಮಾರ್ಪಾಟುಗಳನ್ನು ಮಾಡುವುದು ಅನಿವಾರ್ಯ ವಾಗಿದೆ” ಎಂದು ಆಗ್ರಹಿಸಿದ್ದಾರೆ. “ಒಂದು ರಾಷ್ಟ್ರ, ಒಂದು ತೆರಿಗೆ ಪರಿಕಲ್ಪನೆಯ ಜಿಎಸ್‌ಟಿ ಜಾರಿಗೊಳಿಸಲು ಹಿಂದಿದ್ದ ಯುಪಿಎ ಸರ್ಕಾರ ಯತ್ನಿಸಿ ದ್ದಾಗ, ಬಿಜೆಪಿಯೇ ವಿರೋಧಿಸಿತ್ತು. ಇದೀಗ ಬಿಜೆಪಿಯೇ ಜಾರಿಗೊಳಿಸಿದೆ” ಎಂದು ದೇಶಪಾಂಡೆ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next