Advertisement
ರಾಜ್ಯದಲ್ಲಿ ಈ ಹಿಂದೆ ವ್ಯಾಟ್‌ನಡಿ ವ್ಯವಹರಿಸುತ್ತಿದ್ದ ಬಹುತೇಕರು ಜಿಎಸ್‌ಟಿಗೆ ವರ್ಗಾವಣೆಗೊಂಡಿದ್ದಾರೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಹೇಳುತ್ತದೆ. ಆದರೆ ಬಹಳಷ್ಟು ಸರಕುಗಳನ್ನು ಯಾವ ಪ್ರವರ್ಗದಡಿ ಗುರುತಿಸಬೇಕು, ಅದಕ್ಕೆ ವಿಧಿಸಬೇಕಾದ ತೆರಿಗೆಪ್ರಮಾಣದ ಬಗ್ಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಲ್ಲೇ ಸ್ಪಷ್ಟತೆ ಇಲ್ಲದಿರುವುದು ಗೊಂದಲ ಹೆಚ್ಚಳಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಗ್ರಾಹಕರು ಪ್ರತಿ ಖರೀದಿಗೆ ರಸೀದಿ ಕೇಳಿ ಪಡೆಯುವ, ತೆರಿಗೆ ವಿವರ ಪರಿಶೀಲಿಸುವ, ಲೋಪವಿದ್ದರೆ ಪ್ರಶ್ನಿಸುವ/ ದೂರು ಕೊಡುವ ಗೋಜಿಗೆ ಹೋಗದ ಕಾರಣ ಬೆಲೆ ಇಳಿಕೆಯಾಗದಂತಾಗಿದೆ. ಆ ಮೂಲಕ ಜಿಎಸ್‌ಟಿಯ ಲಾಭ ಗ್ರಾಹಕರಿಗೆ ನಿರೀಕ್ಷಿತ ಪ್ರಮಾಣದಲ್ಲಿ ತಲುಪುತ್ತಿಲ್ಲ ಎಂಬ ವಾದವೂ ಇದೆ.
Related Articles
Advertisement
ಜವಳಿಗೆ ಶೇ.5ರಷ್ಟು ತೆರಿಗೆ ವಿಧಿಸುವ ಜತೆಗೆ ಸಿದ್ಧ ಉಡುಪಿನ ಬೆಲೆಗೆ ಅನುಗುಣವಾಗಿ ತೆರಿಗೆ ವಿಧಿಸಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಇದರಿಂದ ಬೆಂಗಳೂರಿನಲ್ಲಿ ಬಹಳಷ್ಟು ಜವಳಿ, ಸಿದ್ದ ಉಡುಪು ಮಳಿಗೆದಾರರು ಜಿಎಸ್‌ಟಿ ಅಳವಡಿಕೆಗೆ ಆಸಕ್ತಿ ತೋರಿಲ್ಲ. ಕೆಲ ಮಳಿಗೆಗಳಲ್ಲಿ ರಸೀದಿ ಬೇಕಾದರೆ ಇಂತಿಷ್ಟು ಜಿಎಸ್‌ಟಿ ತೆರಿಗೆ, ರಸೀದಿ ಬೇಡವಾದರೆ ತೆರಿಗೆ ಇಲ್ಲ ಎಂದು ಹೇಳುವುದು ಕಂಡುಬಂದಿದೆ.
ರಸೀದಿ ಕೇಳದ ಗ್ರಾಹಕರು: 200ರೂ.ವರೆಗಿನ ಖರೀದಿಗೆ ವರ್ತಕರು ಕಡ್ಡಾಯವಾಗಿ ರಸೀದಿ ನೀಡುವಂತಿಲ್ಲ. ಆದರೆ ಗ್ರಾಹಕರು ಕೇಳಿದರೆ ನಿರಾಕರಿಸುವಂತಿಲ್ಲ. 200 ರೂ. ಮೇಲ್ಪಟ್ಟ ಪ್ರತಿ ಖರೀದಿಗೆ ರಸೀದಿನೀಡುವುದು ಕಡ್ಡಾಯ. ರಸೀದಿ ಪಡೆದು ತೆರಿಗೆ ಪ್ರಮಾಣ ಪರಿಶೀಲಿಸಿದರೆ ಗ್ರಾಹಕರಿಗೆ ಜಿಎಸ್‌ಟಿಯ ಲಾಭ ಗೊತ್ತಾಗುತ್ತದೆ. ಆದರೆ ಬಹುತೇಕ ಗ್ರಾಹಕರು ರಸೀದಿ ಕೇಳದಿರುವುರಿಂದ ದರ ಪರಿಷ್ಕರಣೆ ಬಗ್ಗೆ ಸ್ಪಷ್ಟತೆ ಸಿಗದಂತಾಗಿದೆ.
ಜಿಎಸ್‌ಟಿ ವ್ಯಾಪ್ತಿಗೆ ಒಳಪಡುವ ಎಲ್ಲರೂ ಸ್ವಯಂಪ್ರೇರಣೆಯಿಂದ ನೋಂದಾಯಿಸಿಕೊಳ್ಳಬೇಕು. ಸರಕು-ಸೇವೆಗಳ ಎಚ್‌ಎಸ್‌ಎನ್ ಕೋಡ್, ನೋಂದಣಿ ಪ್ರಕ್ರಿಯೆ, ಸರಕು- ಸೇವೆಗಳ ಸಾಗಣೆ ವೆಚ್ಚದ ಮರುಪಾವತಿ ಹೇಗೆ ಎಂಬ ಬಗ್ಗೆ ಇನ್ನಷ್ಟು ಸ್ಪಷ್ಟತೆ ಅಗತ್ಯವಿದೆ.– ಬಿ.ಟಿ.ಮನೋಹರ್, ರಾಜ್ಯ ಸರ್ಕಾರದ
ಜಿಎಸ್‌ಟಿ ಸಲಹಾ ಸಮಿತಿ ಸದಸ್ಯ ಜಿಎಸ್‌ಟಿ ಜಾರಿಯಾದ ಜು.1ರ ನಂತರ ಉತ್ಪಾದನೆಯಾದ ಆಯ್ದ ಸರಕುಗಳ ಬೆಲೆ ಇಳಿಕೆಯಾಗಿದೆ. ಮುಖ್ಯವಾಗಿ ಕ್ಷಿಪ್ರ ಮಾರಾಟವಾಗುವ ಬಹುತೇಕ ಸರಕುಗಳ (ಎಫ್ಎಂಜಿ) ಬೆಲೆಯೂ ಇಳಿಕೆಯಾಗಿದೆ. ಆದರೆ ಹೋಟೆಲ್ ತಿಂಡಿ- ತಿನಿಸಿನ ಬೆಲೆಗಳಲ್ಲಿ ಇಳಿಕೆಯಾಗದಿರುವುದು ಅಚ್ಚರಿ ಮೂಡಿಸಿದೆ. ಬ್ರಾಂಡೆಡ್ ವಸ್ತುಗಳ ಬೆಲೆ ನಿಗದಿ, ಸರಕುಗಳ ವರ್ಗೀಕರಣದಲ್ಲಿ ಗೊಂದಲಗಳಿದ್ದು, ಅಧಿಕಾರಿಗಳ ಸ್ಪಷ್ಟತೆ ನೀಡಬೇಕಿದೆ.
– ಆರ್.ಜಿ.ಮುರಳೀಧರ್, ಆರ್ಥಿಕ ತಜ್ಞ ಜಿಎಸ್‌ಟಿ ವ್ಯವಸ್ಥೆಯಡಿ ವ್ಯವಹಾರಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದರೂ ಬಹಳಷ್ಟು ಸರಕುಗಳ ವರ್ಗೀಕರಣ, ತೆರಿಗೆ ವಿವರದ ಬಗ್ಗೆ ಸ್ಪಷ್ಟತೆ ಇಲ್ಲ. ಕೆಲ ಸರಕುಗಳನ್ನು ಯಾವ ವರ್ಗೀಕರಣದಡಿ ಪರಿಗಣಿಸಬೇಕೆಂಬ ಬಗ್ಗೆ ಇಲಾಖೆಗೂ ಸ್ಪಷ್ಟತೆ ಇದ್ದಂತಿಲ್ಲ.
– ಕೆ.ರವಿ, ಎಫ್ಕೆಸಿಸಿಐ ಅಧ್ಯಕ್ಷ ಜಿಎಸ್‌ಟಿ ವ್ಯವಸ್ಥೆ ಉತ್ತಮವಾಗಿದ್ದರೂ ವ್ಯಾಪಾರ, ವ್ಯವಹಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಗೆ ಈ ಬಗ್ಗೆ ಮಾಹಿತಿ ಕೊರತೆ ಇದೆ. ಜವಳಿಗೆ ಶೇ.5ರಷ್ಟು ತೆರಿಗೆಯಿದ್ದರೆ ಸಿದ್ಧ ಉಡುಪುಗಳ ಜಾಬ್ ವರ್ಕ್‌ಗೆ ಶೇ.18ರಷ್ಟು ತೆರಿಗೆ ಇದೆ. ಜವಳಿ ಮತ್ತು ಸಿದ್ಧ
ಉಡುಪು ಕ್ಷೇತ್ರದ ತೆರಿಗೆ ಕುರಿತೂ ಗೊಂದಲಗಳಿವೆ.
– ಹನುಮಂತೇಗೌಡ, ಕಾಸಿಯಾ ಅಧ್ಯಕ್ಷ ಜಿಎಸ್‌ಟಿಯನ್ನು ಸ್ವಾಗತಿಸುತ್ತೇವೆ. ಆದರೆ ಸಿದ್ಧ ಉಡುಪುಗಳ ಬೆಲೆಗೆ ಅನುಗುಣವಾಗಿ ಶೇ.5ರಿಂದ ಶೇ.18ರವರೆಗೆ ತೆರಿಗೆ ಇದೆ. ಅಲ್ಲದೇ ಇನ್‌ಪುಟ್ ಸಬ್ಸಿಡಿ ಮೊತ್ತವನ್ನು ಮಾಸಿಕ, ತ್ತೈಮಾಸಿಕ ಇಲ್ಲವೇ ವಾರ್ಷಿಕವಾಗಿ ನೀಡಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.
– ದಿಲೀಪ್ ಜೈನ್, ಕರ್ನಾಟಕ ಹೊಸೈರಿ ಮತ್ತು
ಗಾರ್ಮೆಂಟ್ಸ್ ಸಂಘದ ಅಧ್ಯಕ್ಷ – ಎಂ.ಕೀರ್ತಿಪ್ರಸಾದ್