ಹೊಸದಿಲ್ಲಿ: ದೇಶದ ಆರ್ಥಿಕ ಸ್ಥಿತಿಯ ಹಿಂಜರಿತದ ಪರಿಣಾಮ ರಾಷ್ಟ್ರದ ಒಟ್ಟಾರೆ ಜಿಡಿಪಿ ಸಂಗ್ರಹದಲ್ಲಿ ಇಳಿಕೆ ಕಂಡು ಬಂದಿದೆ. ಅಗಸ್ಟ್ ತಿಂಗಳಿನಲ್ಲಿ 1.02 ಲಕ್ಷ ಕೋಟಿಯಿಂದ 98,202 ಕೋಟಿಗೆ ಇಳಿಕೆಯಾಗಿದೆ ಎಂದು ಕೇಂದ್ರದ ಹಣಕಾಸು ಇಲಾಖೆ ಹೇಳಿದೆ.
ಆದರೆ ಕಳೆದ ವರ್ಷ ಇದೇ ಅವಧಿಗೆ ಸಂಗ್ರಹವಾದ ಜಿಡಿಪಿ ಪ್ರಮಾಣಕ್ಕೆ ಹೋಲಿಸಿದರೆ ಶೇ. 4.5 ಪ್ರಗತಿ ಕಂಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 93,960 ಕೋಟಿ. ರೂ. ಸಂಗ್ರಹಿಸಲಾಗಿತ್ತು. ಈ ವರ್ಷ ಅದು 98,202ಕ್ಕೆ ಏರಿಕೆಯಾಗಿದೆ.
ದೇಶದ ಆರ್ಥಿಕ ಹಿಂಜರಿತದ ಪರಿಣಾಮ ದೇಶದ ಜಿಡಿಪಿ ಪ್ರಮಾಣ ಕುಸಿತವಾಗಿತ್ತು. ಮುಖ್ಯವಾಗಿ ಅಟೋ ಮೊಬೈಲ್ ಸೇರಿದಂತೆ ಇತರ ಉತ್ಪಾದನಾ ಕ್ಷೇತ್ರದಲ್ಲಿ ಇಳಿಕೆ ದಾಖಲಾಗಿತ್ತು. ಇದರ ಪರಿಣಾಮ ಜಿಎಸ್‌ಟಿ ಸಂಗ್ರಹದಲ್ಲೂ ಇಳಿಕೆಯಾಗಿದೆ ಎಂದು ಹೇಳಲಾಗುತ್ತದೆ. 2019-20ರ ಸುಮಾರಿಗೆ ಕೇಂದ್ರ ಸರಕಾರ ಸುಮಾರು 6.10 ಲಕ್ಷ ಕೋಟಿ ಸಿಜಿಎಸ್‌ಟಿ ಮತ್ತು ಕಾಂಪನ್ಸೇಶನ್ ಸೆಸ್ ರೂಪದಲ್ಲಿ 1.01 ಲಕ್ಷ ಕೋಟಿ ಸಂಗ್ರಹಿಸುವ ಇರಾದೆ ವ್ಯಕ್ತಪಡಿಸಿತ್ತು.