ಮುಂಬಯಿ: ದಾದರ್ ಪೂರ್ವದ ಜಿಎಸ್‌ಬಿಎಸ್ ಮೆಡಿಕಲ್ ಟ್ರಸ್ಟ್ ವತಿಯಿಂದ ವೈದ್ಯಕೀಯ ತಪಾಸಣಾ ಶಿಬಿರವು ಇತ್ತೀಚೆಗೆ ಸಂಸ್ಥೆಯ ಮೆಡಿಕಲ್ ಸೆಂಟರ್‌ನಲ್ಲಿ ನಡೆಯಿತು. ಸಮಾಜದ ಆರ್ಥಿಕವಾಗಿ ಹಿಂದುಳಿದವರಿಗೆ ಹಾಗೂ ತುಳು-ಕನ್ನಡಿಗರಿಗಾಗಿ ಈ ಶಿಬಿರವನ್ನು ಆಯೋಜಿಸಲಾಗಿತ್ತು.
ಶಿಬಿರದಲ್ಲಿ ರಕ್ತದೊತ್ತಡ, ಸಕ್ಕರೆ ಕಾಯಿಲೆ ತಪಾಸಣೆ, ನೇತ್ರ ಮತ್ತು ಹಲ್ಲಿನ ತಪಾಸಣೆ ಹಾಗೂ ಚರ್ಮ ರೋಗಗಳ ತಪಾಸಣೆ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಸಮಾಜದ ಹಾಗೂ ಸ್ಥಳೀಯ ತುಳು-ಕನ್ನಡಿಗರು ಹಾಗೂ ಇನ್ನಿತರ ಭಾಷಿಕ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗವನ್ನು ಪಡೆದರು.
ಸುಮಾರು 200 ಶಿಬಿರಾರ್ಥಿಗಳು ಪಾಲ್ಗೊಂಡು ವಿವಿಧ ಕಾಯಿಲೆಗಳ ಬಗ್ಗೆ ತಪಾಸಣೆಗೊಳಪಟ್ಟು ಕಾಯಿಲೆಗಳ ಬಗ್ಗೆ ಮಾಹಿತಿ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿವರ ಪಡೆದರು. ಜಿಎಸ್‌ಬಿಎಸ್ ಮೆಡಿಕಲ್ ಟ್ರಸ್ಟ್ ಇದರ ಪ್ರಸಿದ್ಧ ವೈದ್ಯಾಧಿಕಾರಿಗಳು, ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಪಾಲ್ಗೊಂಡು ಶಿಬಿರದ ಯಶಸ್ಸಿಗೆ ಸಹಕರಿಸಿದರು.
ಶಿಬಿರದಲ್ಲಿ ವಿವಿಧ ಕಾಯಿಲೆಗಳ ತಜ್ಞ ವೈದ್ಯರು ಪಾಲ್ಗೊಂಡಿದ್ದರು. ಜಿಎಸ್‌ಬಿಎಸ್ ಮೆಡಿಕಲ್ ಟ್ರಸ್ಟ್ ದಾದರ್ ಪೂರ್ವ, ಮುಂಬಯಿ ಮರಾಠಿ ಗ್ರಂಥ ಸಂಗ್ರಹಾ
ಲಯ, ದಸ್ತುರ್‌ವಾಡಿ, ಶಿಲ್ಪಾ ಅಪಾರ್ಟ್‌ಮೆಂಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯು ವರ್ಷಪೂರ್ತಿ ಉಚಿತ ಆರೋಗ್ಯ ತಪಾಸಣೆ ಸೇರಿದಂತೆ, ವೈದ್ಯಕೀಯ, ಶೈಕ್ಷಣಿಕ, ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದೆ.