Advertisement

ಜಿಎಸ್‌ಬಿ ಸೇವಾ ಮಂಡಲ ಮುಂಬಯಿ: 5ನೇ ಉಚಿತ ಕೋವಿಡ್‌ ಲಸಿಕೆ ಶಿಬಿರ

02:02 PM Aug 20, 2021 | Team Udayavani |

ಮಾಹೀಮ್‌: ಕಾಶಿ ಮಠಾಧೀಶ ಶ್ರೀಮದ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿ ಯವರ ಶುಭಾಶೀರ್ವಾದ ಗಳೊಂದಿಗೆ ಜಿಎಸ್‌ಬಿ ಸೇವಾ ಮಂಡಲ ಮುಂಬಯಿ ಮತ್ತು ವಾಲ್ಕೇಶ್ವರ ಶ್ರೀ ಕಾಶಿ ಮಠ ಹಾಗೂ ಮುಂಬಯಿ ಜಿಎಸ್‌ಬಿ ಟೆಂಪಲ್‌ ಟ್ರಸ್ಟ್‌ನವರ ಸಂಯುಕ್ತ ಆಯೋಜನೆಯಲ್ಲಿ ಉಚಿತ ಕೋವಿಡ್‌ ಲಸಿಕೆ ಶಿಬಿರ ಆ. 16ರಂದು ಆಯೋಜಿಸಲಾಯಿತು.

Advertisement

ಮಾಹೀಮ್‌ನ ತೆಂಡುಲ್ಕರ್‌ ಸಭಾ ಗೃಹದಲ್ಲಿ ನಡೆದ ಶಿಬಿರದಲ್ಲಿ 733 ಮಂದಿಗೆ ಲಸಿಕೆ ನೀಡಲಾಯಿತು. ಜಿಎಸ್‌ಬಿ ಸೇವಾ ಮಂಡಳಿಯು ಮುಂಬಯಿಯಲ್ಲಿ ಆಯೋ ಜಿಸಿದ 5ನೇ ಲಸಿಕೆ ಶಿಬಿರ ಇದಾಗಿತ್ತು.

ಜಿಎಸ್‌ಬಿ ಸೇವಾ ಮಂಡಲ ಮುಂಬಯಿ ಮತ್ತು ವಾಲ್ಕೇಶ್ವರ ಶ್ರೀ ಕಾಶಿ ಮಠ ಹಾಗೂ ಮುಂಬಯಿ ಜಿಎಸ್‌ಬಿ ಟೆಂಪಲ್‌ ಟ್ರಸ್ಟ್‌ ಇದರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಗಳ ಸದಸ್ಯರು, ಯುವ ವಿಭಾಗದವರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕರಿಸಿದರು.

ಇದನ್ನೂ ಓದಿ:ಜೀ ವಾಹಿನಿಗೆ ‘ಕೆಜಿಎಫ್-2’ ಸ್ಯಾಟಲೈಟ್ ರೈಟ್ಸ್ : ಮಾರಾಟವಾಗಿದ್ದು ಎಷ್ಟು ಕೋಟಿಗೆ ?

ಸಂಸ್ಥೆಯು ಕೋವಿಡ್‌ ಪ್ರಾರಂಭದ ದಿನಗಳಿಂದಲೂ ಸಮಾಜ ಬಾಂಧವರು ಮಾತ್ರವಲ್ಲದೆ ಆರ್ಥಿಕವಾಗಿ ಹಿಂದುಳಿ ದವರಿಗೂ ನಿರಂತರವಾಗಿ ಆಹಾರದ ಕಿಟ್‌ಗಳನ್ನು ವಿತರಿಸುತ್ತಿರುವುದಲ್ಲದೆ, ಆರ್ಥಿಕ, ವೈದ್ಯಕೀಯ, ಶೈಕ್ಷಣಿಕ ನೆರವು ನೀಡಿ ಮಾನವೀಯತೆ ಮೆರೆಯುತ್ತಿದೆ.

Advertisement

ಸಂಸ್ಥೆಯ ಪದಾಧಿಕಾರಿಗಳ ಪ್ರಾಮಾಣಿಕ, ನಿಸ್ವಾರ್ಥ ಪರಿಶ್ರಮ, ಸ್ವಯಂಸೇವಕರ ಸಹಕಾರ ದೊಂದಿಗೆ ಸಮಾಜಪರ ಕಾರ್ಯಕ್ರಮಗಳೊಂದಿಗೆ ಉಚಿತ ವೈದ್ಯಕೀಯ, ರಕ್ತದಾನ ಶಿಬಿರ, ಉಚಿತ ಕೋವಿಡ್‌ ಲಸಿಕೆ ಶಿಬಿರ ಇನ್ನಿತರ ಕಾರ್ಯಕ್ರಮಗಳು ಮುಂಬಯಿ ಸಹಿತ ಇನ್ನಿತರ ಉಪನಗರಗಳಲ್ಲಿ ನಿರಂತ ರವಾಗಿ ನಡೆಯುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next