Advertisement
ಕುಲಗುರು ದೈವಕ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಗಳ ಕೃಪೆ ಮತ್ತು ಶ್ರೀ ಸಂಸ್ಥಾನ ಕಾಶೀ ಮಠ ವಾರಣಾಸಿ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ಅನುಗ್ರಹದೊಂದಿಗೆ ದಹಿಸರ್ ಪೂರ್ವದ ಎನ್.ಎಲ್. ಕಾಂಪ್ಲೆಕ್ಸ್ ನ ಸಾರಸ್ವತ ಕಲ್ಚರಲ್ ಆ್ಯಂಡ್ ರಿಕ್ರಿಯೇಷನ್ ಸೆಂಟರ್ ಮೈದಾನದಲ್ಲಿ ಸಜ್ಜುಗೊಳಿಸಲಾಗಿರುವ ಮಾಧವೇಂದ್ರ ಸಭಾಗೃಹದಲ್ಲಿನ ಭವ್ಯ ಅಲಂಕೃತ ಮಂಟಪದಲ್ಲಿ ಪುಷ್ಪಾಲಂಕೃತ, ರಜತ ಪ್ರಭಾವಳಿ, ಸ್ವರ್ಣ ಮುಕುಟ, ವಜ್ರ, ಚಿನ್ನಾಭರಣದಿಂದ ಕಂಗೊಳಿಸುವ ಶ್ರೀ ಸರಸ್ವತಿ ದೇವಿಯನ್ನು ಬೆಳಗ್ಗೆ ಪ್ರತಿಷ್ಠಾನಗೊಳಿಸಿ ಅನಂತರ ಕನ್ಯಾಲಗ್ನದಲ್ಲಿ ಪ್ರಾಣಪ್ರತಿಷ್ಠೆ ನಡೆಸುವ ಮುಖೇನ ದಶ ವಾರ್ಷಿಕ “ದಹಿಸರ್ ದಸರಾ’ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.Related Articles
Advertisement
ನವರಾತ್ರಿ ದಿನಂಪ್ರತಿ ರಾತ್ರಿ 7ರಿಂದ 10ರಿಂದ ಗರ್ಭ, ದಾಂಡಿಯಾ ರಾಸ್ ನಡೆಯಲಿದೆ. ದಿನಂಪ್ರತಿ ಸುಮಾರು ನಾಲ್ಕೈದು ಸಾವಿರ ಭಕ್ತರಿಗೆ ಪ್ರಸಾದ ರೂಪವಾಗಿ ಅನ್ನಸಂತರ್ಪಣೆ ನಡೆಯಲಿದೆ. ಸೆ. 28ರಂದು ಮಹಾಕಾಳಿ ದೇವಿಯ ಆರಾಧನೆಯ ದಿನ ಸಂಜೆ 6ರಿಂದ ದೀಪೋತ್ಸವ ನಡೆಯಲಿದೆ. ದಶವಾರ್ಷಿಕ ದಹಿಸರ್ ದಸರೋತ್ಸವ ಆಚರಣೆಯಲ್ಲಿ ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಇತರ ಮಂತ್ರಿಗಳು, ನಟನಟಿಯರು, ಶಿವಸೇನಾ ವರಿಷ್ಠ ಉದ್ಧಾವ್ ಠಾಕ್ರೆ, ಸಂಸದರು, ಗಣ್ಯಾಥಿ-ಗಣ್ಯರು ಆಗಮಿಸುವ ನಿರೀಕ್ಷೆಯಿದ್ದು, ಜತೆಗೆ ಲಕ್ಷಾಂತರ ಭಕ್ತರನ್ನು ಸೆಳೆಯಲಿದೆ.
ಸೆ. 30ರಂದು ವಿಜಯದಶಮಿಯ ಶಾರದಾ ದೇವಿಗೆ ಪೂಜೆ ನೆರವೇರಿಸಿ ಬೆಳಗ್ಗೆ 9ರಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ನಂತರ ಭಜನೆ. ಸಂಜೆ 4ರಿಂದ ಭಕ್ತರಿಂದ ಶ್ರೀ ದೇವಿಗೆ ಬಂದ ಸೀರೆಗಳ ಲಕ್ಕಿಡ್ರಾ ಕಾರ್ಯಕ್ರಮ ನಡೆಯಲಿದೆ. ಸಂಜೆ 5ರಿಂದ ವಿಸರ್ಜನ ಮೆರವಣಿಗೆ ನೆರವೇರಲಿದೆ ಎಂದು ನವರಾತ್ರಿ ಉತ್ಸವದ ಪ್ರಧಾನ ಸಂಘಟಕ, ಜಿ. ಎಸ್. ಬಿ. ಸಭಾದ ಜತೆ ಕಾರ್ಯದರ್ಶಿ ಸಾಣೂರು ಮನೋಹರ್ ಕಾಮತ್ ನುಡಿದರು.
ಚಿತ್ರ- ವರದಿ : ರೋನ್ಸ್ ಬಂಟ್ವಾಳ್