Advertisement

ಜಿಎಸ್‌ಬಿ ಸಭಾ ಅಂಧೇರಿ: ಸಾಮೂಹಿಕ ಚೂಡಿಪೂಜೆ

03:19 PM Aug 16, 2018 | |

ಮುಂಬಯಿ: ಜಿಎಸ್‌ಬಿ ಸಭಾ ಅಂಧೇರಿ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಸಾಮೂಹಿಕ ಚೂಡಿಪೂಜೆಯು ಆ. 12 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜೋಗೇಶ್ವರಿ ಪೂರ್ವದ ಶ್ರೀ ರಾಮೇಶ್ವರ ಮಂದಿರದಲ್ಲಿ  ನಡೆಯಿತು.

Advertisement

ಜಿಎಸ್‌ಬಿ ಸಭಾ ಅಂಧೇರಿ ಇದರ ಮಹಿಳಾ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯೆಯರು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜಿಎಸ್‌ಬಿ ಸಭಾ ಅಂಧೇರಿ ಗೌರವ ಪ್ರಧಾನ ಕಾರ್ಯದರ್ಶಿ ಯು. ಪಿ. ಭಟ್‌ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿ ಶುಭಹಾರೈಸಿದರು.

ಮಹಿಳಾ ವಿಭಾಗದ    ಪ್ರಮುಖ ರಾದ ಪುಷ್ಪಲತಾ ಕಾಮತ್‌ ಹಾಗೂ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ| ಅಕ್ಷತಾ ಮಲ್ಯ ಅವರು ದೀಪಪ್ರಜ್ವಲಿಸಿ ಭಜನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪುಷ್ಪಲತಾ ಕಾಮತ್‌ ಅವರು ಚೂಡಿಪೂಜೆಯ ಮಹತ್ವ ಮತ್ತು ಉದದೇಶವನ್ನು ವಿವರಿಸಿದರು. ಡಾ| ಅಕ್ಷತಾ ಮಲ್ಯ ಅವರು ಆರೋಗ್ಯ ಭಾಗ್ಯದ ಬಗ್ಗೆ ಮಾಹಿತಿ ನೀಡಿ, ಮಹಿಳೆಯರು ಸಮಾಜ ಸೇವೆಯೊಂದಿಗೆ ತಮ್ಮ ಆರೋಗ್ಯದೆಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ತಿಳಿಸಿದರು. ಕಾರ್ಯದರ್ಶಿ ಯು. ಪಿ. ಭಟ್‌ ವಂದಿಸಿದರು.

ಅತಿಥಿಗಳನ್ನು ಸಭಾದ ವತಿಯಿಂದ ಗೌರವಿಸಲಾಯಿತು.ಸಭಾದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಯುವ ವಿಭಾಗದವರು ಪಾಲ್ಗೊಂಡಿದ್ದರು. ಕೊನೆಯಲ್ಲಿ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next