Advertisement

ಜಿಸ್ಯಾಟ್‌-17 ಉಪಗ್ರಹ ಯಶಸ್ವಿ ಉಡ್ಡಯನ

03:50 AM Jun 30, 2017 | Team Udayavani |

ಬೆಂಗಳೂರು: ದೇಶದ ಅತ್ಯಾಧುನಿಕ ಸಂವಹನ ಉಪಗ್ರಹ, ಜಿಸ್ಯಾಟ್‌-17 ಉಡ್ಡಯನ ಯಶಸ್ವಿಯಾಗಿ ನೆರವೇರಿದೆ. ಬೆಳಗಿನ ಜಾವ 2.29ಕ್ಕೆ ಏರಿಯಾನ್‌ ಸ್ಪೇಸ್‌ ಫ್ಲೈಟ್‌ ವಿಎ 238 ಹೆಸರಿನ ಹೆಚ್ಚಿನ ಸಾಮರ್ಥ್ಯದ ರಾಕೆಟ್‌ ಮೂಲಕ ದಕ್ಷಿಣ ಅಮೆರಿಕದ ಈಶಾನ್ಯ ಕರಾವಳಿಯಲ್ಲಿರುವ ಫ್ರೆಂಚ್‌ ಗಯಾನಾದ ಕೌರೋನಿಂದ ಈ ಉಪಗ್ರಹವನ್ನು ನಭಕ್ಕೆ ಹಾರಿಬಿಡಲಾಗಿದೆ. 

Advertisement

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಭೂಸಮನ್ವಯ ಕಕ್ಷೆಯಲ್ಲಿ ತಿರುಗುವ ಈ ಉಪಗ್ರಹವನ್ನು ಅಭಿವೃದ್ಧಿಪಡಿಸಿದ್ದು, ಪ್ರಸರಣ ಸೇವೆಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ಉದ್ದೇಶವನ್ನು ಹೊಂದಿದೆ. ಸಂವಹನ ಉಪಗ್ರಹಗಳಲ್ಲಿ 17ನೇ ಉಪಗ್ರಹವಾಗಿರುವ ಜಿಸ್ಯಾಟ್‌ 3,477 ಕೇಜಿ ಭಾರವನ್ನು ಹೊಂದಿದ್ದು, ಉಡ್ಡಯನದ 39 ನಿಮಿಷದ ಬಳಿಕ ಕಕ್ಷೆಯನ್ನು ಸೇರಿದೆ. ಮುಂದಿನ 15 ವರ್ಷಗಳ ಕಾಲ ಇದು ಕಾರ್ಯಾಚರಿಸಲಿದೆ. ಜಿಸ್ಯಾಟ್‌-17 ನಿಯಂತ್ರಣವನ್ನು ಹಾಸನದ ಇಸ್ರೋ ನಿಯಂತ್ರಣ ಕೇಂದ್ರದಿಂದ ಮಾಡಲಾಗುತ್ತದೆ. ಕಳೆದ ಒಂದು ತಿಂಗಳಿನಲ್ಲಿ ಇಸ್ರೋ ಉಡ್ಡಯನ ಮಾಡಿದ ಮೂರನೇ ಉಪಗ್ರಹ ಇದಾಗಿದೆ. ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿ ಸೇರಿದಂತೆ ಅನೇಕ ಗಣ್ಯರು ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next