Advertisement
ಗ್ರಾಮ್‌ಒನ್‌ಗಳಲ್ಲಿ ಗೃಹಲಕ್ಷ್ಮೀ ನೋಂದಣಿ ಮಾಡಿಸುವ ಮಹಿಳೆಯರಿಗೆ ಉಚಿತವಾಗಿ ನೋಂದಣಿ ಮಾಡಬೇಕು ಎಂದು ಸರ್ಕಾರ ಫರ್ಮಾನು ಹೊರಡಿಸಿದೆ. ಇನ್ನು ಗೃಹಲಕ್ಷ್ಮೀ ಯೋಜನೆಯನ್ನು ನೋಂದಣಿ ಮಾಡಿಕೊಡಲು ಹಣ ಕೇಳಿದ ಗ್ರಾಮ್ ಒನ್ ಕೇಂದ್ರದ ಪ್ರಾಂಚೈಸಿಯನ್ನು ರದ್ದುಪಡಿಸಿರುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ತಿಳಿಸಿದ್ದು, ಉಚಿತವಾಗಿ ನೋಂದಣಿ ಮಾಡಿದರೆ ನಾವೇನು ಮಾಡುವುದು ಎಂಬ ಆತಂಕ ಗ್ರಾಮ್‌ಒನ್ ಸಿಬ್ಬಂದಿಯದ್ದಾಗಿದೆ. ಮತ್ತೂಂದೆಡೆ ಗೃಹಲಕ್ಷ್ಮೀ ಯೋಜನೆಯ ನೋಂದಣಿಗೆ ಕೆಲ ಗ್ರಾಮ್ ಒನ್‌ಗಳಲ್ಲಿ ಹಣಪಡೆಯುತ್ತಿದ್ದಾರೆ ಎಂಬ ಆರೋಪ ಸಹ ಕೇಳಿ ಬರುತ್ತಿದ್ದು, ಸಾರ್ವಜನಿಕರು ಈ ಬಗ್ಗೆ ದೂರುತ್ತಿದ್ದಾರೆ.
Related Articles
Advertisement
ಗ್ಯಾರಂಟಿ ಏನು?: ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿದ ಅರ್ಜಿಗಳಿಗೆ ಸರ್ಕಾರವೇ ಶುಲ್ಕ ಬರಿಸುತ್ತದೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಯಾವುದೇ ಅಧಿಕೃತ ಪತ್ರ ಹೊರಡಿಸಿಲ್ಲ. ಕೇವಲ ಅಧಿಕಾರಿಗಳು ಭರವಸೆ ನೀಡುತ್ತಿದ್ದಾರೆ. ಈ ಹಿಂದೆ ಗ್ರಾಮ್ ಒನ್‌ಗಳಲ್ಲಿ ಆಯುಷ್‌ಮಾನ್ ಆರೋಗ್ಯ ಕರ್ನಾಟಕ ಕಾರ್ಡ್‌ಗಳನ್ನು ಉಚಿತವಾಗಿ ನೋಂದಣಿ ಮಾಡಿಕೊಡಲಾಯಿತು. ಪ್ರತಿ ಕಾರ್ಡ್‌ಗೆ 10 ರೂ.ನಂತೆ ಹಣ ನೀಡುವುದಾಗಿ ಹೇಳಿದ್ದ ಸರ್ಕಾರ 6 ತಿಂಗಳು ಕಳೆದರೂ ಇನ್ನೂ ನೀಡಿಲ್ಲ. ಇದೀಗ ಗೃಹಲಕ್ಷ್ಮೀಗೆ ಹಣ ನೀಡುತ್ತಾರೆ ಎಂಬುದು ಯಾವ ಗ್ಯಾರಂಟಿ ಎಂದು ಗ್ರಾಮ್‌ಒನ್ ಪ್ರಾಂಚೈಸಿಗಳು ಪ್ರಶ್ನಿಸುತ್ತಿದ್ದಾರೆ. ಉಚಿತವಾಗಿ ನೀಡಿ: ಇನ್ನು ಸಾರ್ವಜನಿಕರು ಗ್ರಾಮ್ ಒನ್ ಪ್ರಾಂಚೈಸಿಗಳ ಮಾತನ್ನು ಕೇಳಲು ಸಿದ್ದವಿಲ್ಲದಿದ್ದು, ಸರ್ಕಾರ ಉಚಿತವಾಗಿ ನೋಂದಣಿ ಮಾಡಿಸುವುದಾಗಿ ತಿಳಿಸಿದೆ.
ನಮಗೆ ಉಚಿತವಾಗಿ ನೋಂದಣಿ ಮಾಡಿಕೊಡಲಿ. ಕೆಲ ಗ್ರಾಮ್‌ಒನ್‌ಗಳಲ್ಲಿ 50 ರೂ.ನಿಂದ 100 ರೂ.ವರೆಗೆ ಹಣ ಕೇಳುತ್ತಿದ್ದಾರೆ. ನಾವು ಹಣ ಕೊಡುವುದಿಲ್ಲ ಉಚಿತವಾಗಿ ನೋಂದಣಿ ಮಾಡಿಕೊಡಲು ಕ್ರಮ ಕೈಗೊಳ್ಳಿ ಎಂದು ಜನತೆ ಆಗ್ರಹಿಸುತ್ತಿದ್ದಾರೆ.
ಜಿಲ್ಲೆಯಲ್ಲಿ 43 ಗ್ರಾಮ್‌ಒನ್‌ಗಳು ಸ್ತಬ್ಧ : ಜಿಲ್ಲೆಯಲ್ಲಿ ಗ್ರಾಮ್‌ಒನ್ ಪ್ರಾಂಚೈಸಿಗಳು ಮತ್ತು ಸಾರ್ವಜನಿಕರ ನಡುವೆ ಶುಲ್ಕದ ವಿಚಾರಕ್ಕೆ ಹಗ್ಗ ಜಗ್ಗಾಟ ನಡೆಯುತ್ತಿದ್ದರೆ ಮತ್ತೂಂದೆಡೆ ಜಿಲ್ಲೆಯ 153 ಗ್ರಾಮ್‌ಒನ್ ಕೇಂದ್ರಗಳ ಪೈಕಿ 110 ಕೇಂದ್ರಗಳು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು, ಉಳದಿ 43 ಕೇಂದ್ರಗಳು ಗೃಹಲಕ್ಷ್ಮೀ ನೋಂದಣಿ ಕಾರ್ಯವನ್ನು ಮಾಡುತ್ತಿಲ್ಲ. ಗೃಹಲಕ್ಷ್ಮೀ ನೋಂದಣಿ ಪ್ರಕ್ರಿಯೆ ಆರಂಭಕ್ಕೂ ಮುನ್ನಾ ಎಲ್ಲಾ ಗ್ರಾಮ್‌ಒನ್‌ಕೇಂದ್ರಗಳಿಂದ ಜಿಲ್ಲಾ ಸಂಯೋಜಕರು ಮುಚ್ಚಳಿಕೆ ಬರೆಸಿ ಕೊಂಡು ಸಾರ್ವಜನಿಕರಿಗೆ ಸಮಸ್ಯೆಯಾಗದ ರೀತಿ ಸೇವೆ ನೀಡುವುದಾಗಿ ಲಿಖೀತ ಹೇಳಿಕೆ ಪಡೆದುಕೊಂಡಿದ್ದರು. ಹೀಗೆ ಲಿಖೀತವಾಗಿ ಭರವಸೆ ನೀಡಿದ 110 ಗ್ರಾಮ್‌ಒನ್‌ಗಳಿಗೆ ಮಾತ್ರ ನೋಂದಣಿಗೆ ಲಾಗಿನ್‌ಆಗಲು ಅನುಮತಿ ನೀಡಿದ್ದು, ಉಳಿದ ಕೇಂದ್ರಗಳಿಗೆ ನೀಡಿಲ್ಲ. ಇದೀಗ ಹೆಚ್ಚುವರಿಯಾಗಿ 5 ಕೇಂದ್ರಗಳು ನೋಂದಣಿಗೆ ಮುಂದಾಗಿದ್ದು, ಉಳಿದ ಕೇಂದ್ರಗಳು ಈ ಗೋಜಿಗೆ ಹೋಗುವುದೇ ಬೇಡ ಎಂದು ಸುಮ್ಮನಿದ್ದಂತೆ ಕಾಣುತ್ತಿದೆ. ಬಾಗಿಲು ತೆರೆಯದ ಗ್ರಾಮ್‌ಒನ್ ಕೇಂದ್ರಗಳ ಪರಿಶೀಲನೆಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದು, ಈ ಪ್ರಾಂಚೈಸಿಗಳು ಗ್ರಾಮ್‌ಒನ್ ಕೇಂದ್ರವನ್ನು ತೆರೆಯದಿದ್ದರೆ ಕೂಡಲೇ ಪ್ರಾಂಚೈಸಿ ರದ್ದುಪಡಿಸಿ ಹೊಸಬರಿಗೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾಗಿ ಕಂದಾಯ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ಗೃಹಲಕ್ಷ್ಮೀ ಯೋಜನೆಯನ್ನು ಉಚಿತ ವಾಗಿ ನೋಂದಣಿ ಮಾಡುವಂತೆ ಎಲ್ಲಾ ಗ್ರಾಮ್‌ಒನ್ ಕೇಂದ್ರಗಳಿಗೆ ಸೂಚಿಸಲಾಗಿದೆ. ಹಣ ಪಡೆದ ಮಾಹಿತಿ ಇದ್ದಲ್ಲಿ ನಿರ್ಧಾಕ್ಷಿಣ್ಯ ವಾಗಿ ಕ್ರಮ ಕೈಗೊಳ್ಳಲಾಗುವುದು. ಗ್ರಾಮ್ ಒನ್ ಕೇಂದ್ರಗಳು ನೋಂದಣಿ ಮಾಡಿದ ಅರ್ಜಿಗಳ ಸಂಖ್ಯೆಗೆ ಅನುಗುಣವಾಗಿ ಅವರಿಗೆ ಸರ್ಕಾರದಿಂದಲೇ ಶುಲ್ಕ ಪಾವತಿಸಲಾಗುವುದು. ● ವೇಣು, ಗ್ರಾಮ್‌ಒನ್ ಜಿಲ್ಲಾ ಸಂಯೋಜಕ, ರಾಮನಗರ
ಜಿಲ್ಲೆ ಗ್ರಾಮ್‌ಒನ್ ಕೇಂದ್ರವನ್ನು ಆರಂಭಿಸಲು ನಾವು ಲಕ್ಷಾಂತರ ರೂ. ಹಣ ಖರ್ಚು ಮಾಡಿದ್ದೇವೆ. ಇನ್ನು ಪ್ರತಿ ತಿಂಗಳು ಗ್ರಾಮ್ ಒನ್ ಕೇಂದ್ರ ನಿರ್ವಹಿಸಲು 10ರಿಂದ 15 ಸಾವಿರ ರೂ. ವರೆಗೆ ಖರ್ಚು ಬರುತ್ತದೆ. ಆರೋಗ್ಯ ಕರ್ನಾಟಕ ಕಾರ್ಡ್ ಮಾಡಿ ಹಲವು ತಿಂಗಳು ಕಳೆದರೂ ಇನ್ನೂ ಹಣ ನೀಡಿಲ್ಲ. ಇದರಲ್ಲೂ ಅದೇ ರೀತಿ ಆದರೆ ಏನು ಮಾಡುವುದು, ಪ್ರತಿ ಅರ್ಜಿಗೆ ಸರ್ಕಾರ 100 ರೂ. ಹಣವನ್ನು ಗ್ರಾಮ್‌ಓನ್ ಪ್ರಾಂಚೈಸಿಗಳಿಗೆ ನೀಡಲಿ. ● ಹೆಸರೇಳಿಚ್ಚಿಸದ ಗ್ರಾಮ್‌ಒನ್ ಪ್ರಾಂಚೈಸಿ
ಸರ್ಕಾರ ಉಚಿತವಾಗಿ ನೋಂದಣಿ ಮಾಡಿಸುವಂತೆ ತಿಳಿಸಿದೆ. ನಾವು ಹಣ ಕೊಡುವುದಿಲ್ಲ. ನಮಗೆ ಉಚಿತವಾಗಿ ನೋಂದಣಿ ಮಾಡಿಕೊಡಲಿ. ಗ್ರಾಮ್‌ಒನ್‌ನಲ್ಲಿ ಹಣ ಕೇಳುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ● ಶಿಲ್ಪಶ್ರೀ, ಗೃಹಿಣಿ
-ಸು.ನಾ.ನಂದಕುಮಾರ್