Advertisement

ಬೆಳೆಯುತ್ತಿದೆ ಬೆಳ್ಳಾರೆ: ಪಾರ್ಕಿಂಗ್‌ ಜಾಗವೆಲ್ಲಿದೆ?

05:04 PM Oct 12, 2017 | |

ಬೆಳ್ಳಾರೆ: ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿರುವ ಬೆಳ್ಳಾರೆ ಪಟ್ಟಣದಲ್ಲಿ ಪಾರ್ಕಿಂಗ್‌ ಸಮಸ್ಯೆಯೂ ಹೆಚ್ಚುತ್ತಿದೆ. 
ಇಲ್ಲಿಗೆ ಬರುವ ಜನರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಇದರಿಂದ ಪಟ್ಟಣದಲ್ಲಿ ಜನ ಹಾಗೂ ವಾಹನ ದಟ್ಟಣೆ ತೀವ್ರವಾಗುತ್ತಿದೆ. ಆದರೆ, ಪಟ್ಟಣದ ಯಾವ ಪ್ರದೇಶದಲ್ಲೂ ಸಮರ್ಪಕ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ. ವಾಹನ ಚಾಲಕರು-ಮಾಲಕರು ಬೆಳ್ಳಾರೆ ಪೇಟೆಯ ಮುಖ್ಯರಸ್ತೆಯ ಎರಡೂ ಬದಿಗಳಲ್ಲಿ ಅಸ್ತವ್ಯಸ್ತವಾಗಿ ಪಾರ್ಕಿಂಗ್‌ ಮಾಡುತ್ತಿದ್ದಾರೆ.

Advertisement

ಕೆಲವು ಖಾಸಗಿ ವಾಹನಗಳನ್ನು ಬಸ್‌ ನಿಲ್ದಾಣದಲ್ಲಿ ತಂದು ನಿಲ್ಲಿಸುವುದು ಮಾಮೂಲಾಗಿದೆ. ಇದರಿಂದ ಬಸ್‌ಗಳ ತಿರುಗಾಟಕ್ಕೆ ಅಡ್ಡಿಯಾಗುತ್ತಿದೆ.

ಈಡೇರದ ನಿರ್ಧಾರ 
ಒಂದೂವರೆ ವರ್ಷದ ಹಿಂದೆ ವರ್ತಕರ ಸಂಘ ಹಾಗೂ ರೋಟರಿ ಬೆಳ್ಳಾರೆ ಟೌನ್‌ ನೇತೃತ್ವದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್‌ ಅಧಿಕಾರಿಗಳು ಪೊಲೀಸ್‌ ಇಲಾಖೆ ಸಹಯೋಗದಲ್ಲಿ ವೈಜ್ಞಾನಿಕ ಪಾರ್ಕಿಂಗ್‌ ವ್ಯವಸ್ಥೆಯ ಬಗ್ಗೆ ಚರ್ಚಿಸಿದ್ದರು. ಬೆಳ್ಳಾರೆ ಮಸೀದಿ ಬಳಿ, ಅಂಬೆಡ್ಕರ್‌ ಭವನದ ಬಳಿ, ಲಕ್ಷ್ಮೀ ವೆಂಕಟ್ರಮಣ ದೇವಾಲಯದ ಬಳಿ ಪಾರ್ಕಿಂಗ್‌ ವ್ಯವಸ್ಥೆ ಮಾಡುವುದೆಂದು ಯೋಚಿಸಲಾಗಿತ್ತು. ಆ ಸಮಯಕ್ಕೆ ಲೋಕೊಪಯೋಗಿ ಇಲಾಖೆಯವರು ಸದ್ಯದಲ್ಲಿ ಚರಂಡಿ ಕೆಲಸ ಪ್ರಾರಂಭ ಮಾಡುವ ಕಾರಣ ಪಾರ್ಕಿಂಗ್‌ ವ್ಯವಸ್ಥೆಯನ್ನು ಈಗ ಸಮರ್ಪಕವಾಗಿ ಜಾರಿಗೊಳಿಸುವುದು ಬೇಡ. ಚರಂಡಿ ಕಾಮಗಾರಿ ಮುಗಿಯಲಿ ಎಂದು ತಿಳಿಸಿದ್ದರು.

ಆದರೆ ಈಗ ಬೆಳ್ಳಾರೆ ಅರ್ಧ ಪೇಟೆಯಲ್ಲಿ ಚರಂಡಿ ಕಾಮಗಾರಿ ಪೂರ್ಣಗೊಂಡಿದೆ. ಮತ್ತೆ ಸಮರ್ಪಕವಾದ ಪಾರ್ಕಿಂಗ್‌
ವ್ಯವಸ್ಥೆ ಯಾವಾಗ ಜಾರಿ ಬರುತ್ತದೆ ಎಂದು ಜನರು ಕಾದು ನೋಡುವಂತಾಗಿದೆ.

ಪಾರ್ಕಿಂಗ್‌ ಸಮಸ್ಯೆಯ ಬಗ್ಗೆ ಗ್ರಾಮ ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರುವುದಾಗಿ
ಬೆಳ್ಳಾರೆ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಶಕುಂತಲಾ ನಾಗರಾಜ್‌ ತಿಳಿಸಿದ್ದಾರೆ. 

Advertisement

ಚಲಿಸದ ಚಲಿಸುವ ಗಾಡಿ
ಬೆಳ್ಳಾರೆ ಪೇಟೆಯಲ್ಲಿ ವ್ಯಾಪಾರಕ್ಕಾಗಿ ಚಲಿಸುವ ಗಾಡಿ ಎಂದು ಸ್ಥಳೀಯ ಗ್ರಾಮ ಪಂಚಾಯತ್‌ನಿಂದ ಪರವಾನಿಗೆ ಪಡೆದುಕೊಂಡು ಹಲವರು ಅಂಗಡಿಗಳನ್ನು ನಡೆಸುತ್ತಿದ್ದಾರೆ. ವಾಸ್ತವದಲ್ಲಿ ಈ ಅಂಗಡಿಗಳು ಚಲಿಸುವುದಿಲ್ಲ. ಅಲ್ಲಲ್ಲಿ ಶಾಶ್ವತವಾಗಿ ನೆಲೆಯೂರಿವೆ. ರಸ್ತೆ ಬದಿಯಲ್ಲೇ ಗಾಡಿ ನಿಲ್ಲಿಸಿಕೊಂಡು ಕೆಲವರುವ್ಯಾಪಾರ ಮಾಡುತ್ತಿರುವುದರಿಂದ ಸಂಚಾರ ಹಾಗೂ ಪಾರ್ಕಿಂಗ್‌ ಸಮಸ್ಯೆ ಉಲ್ಬಣಿಸಿದೆ

ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next