Advertisement
ಅಡಿಕೆ ಧಾರಣೆಯು ಏರಿಕೆಯ ನಾಗಲೋಟದ ನಡುವೆ ಕೆಲವು ದಿನಗಳಿಂದ ಧಾರಣೆ ಏಕಾಏಕಿ ಕುಸಿತ ಕಂಡಿದೆ. ಹೊಸ ಅಡಿಕೆಗೆ ಹೋಲಿಸಿದರೆ ಸಿಂಗಲ್ ಚೋಲ್ ಧಾರಣೆಯಲ್ಲಿ ಹೆಚ್ಚಿನ ಇಳಿಕೆ ಕಂಡಿದ್ದು ಇದರ ಹಿಂದೆ ಧಾರಣೆ ಕುಗ್ಗಿಸುವ ಲಾಬಿ ಇರುವ ಸಾಧ್ಯತೆ ಕಂಡು ಬಂದಿದೆ. ಬರ್ಮಾದಿಂದ ಕಳಪೆ ದರ್ಜೆಯ ಅಡಿಕೆ ಪೂರೈಕೆ ಆಗಿರುವ ಅನುಮಾನ ಬೆಳೆಗಾರರಿಂದ ವ್ಯಕ್ತವಾಗಿದ್ದು, ಧಾರಣೆ ಇಳಿಕೆಯ ಹಿಂದಿನ ಅಸಲಿ ಕಥೆ ಇನ್ನಷ್ಟೇ ಬೆಳಕಿಗೆ ಬರಬೇಕಿದೆ.
ಪ್ರತೀ ಬಾರಿ ಮಾರುಕಟ್ಟೆಯಲ್ಲಿ ಸಹಕಾರ ಸಂಘಗಳ ಧಾರಣೆಗಿಂತ ಹೊರ ಮಾರುಕಟ್ಟೆಯ ಧಾರಣೆ ಹೆಚ್ಚಿರುತಿತ್ತು. ಆದರೆ ಈ ಬಾರಿ ಅದಲು ಬದಲಾಗಿದೆ. ಅ. 14ರಂದು ಪುತ್ತೂರು ಹೊರ ಮಾರುಕಟ್ಟೆಯಲ್ಲಿ ಸಿಂಗಲ್ ಚೋಲ್ ಕೆ.ಜಿ.ಗೆ 421 ರೂ. ಇದ್ದರೆ, ಕ್ಯಾಂಪ್ಕೋದಲ್ಲಿ 425 ರೂ. ಧಾರಣೆ ಇತ್ತು. ಡಬ್ಬಲ್ ಚೋಲ್‌ಗೆ 450ರಿಂದ 470 ರೂ. ತನಕ ಇದ್ದರೆ, ಕ್ಯಾಂಪ್ಕೋದಲ್ಲಿ 460-485 ರೂ. ತನಕ ಇತ್ತು.