Advertisement

ಭೂಮಿ ಫಲವತತ್ತೆಗಾಗಿ ಹಸಿರು ಎಲೆಗೊಬ್ಬರ ಬೆಳೆಸಿ

05:41 PM Jun 24, 2020 | Suhan S |

ಗಂಗಾವತಿ: ಭೂಮಿಯ ಫಲವತತ್ತೆಗಾಗಿ ಭತ್ತ ಕಟಾವಿನ ನಂತರ ರೈತರು ತಮ್ಮ ಹೊಲದಲ್ಲಿ ಹಸಿರೆಲೆಗೊಬ್ಬರ ಬೆಳೆಸಬೇಕೆಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಹಾಗೂ ಕೃಷಿ ವಿಜ್ಞಾನಿ ಡಾ|ಎಂ.ವಿ.ರವಿ ಹೇಳಿದರು.

Advertisement

ತಾಲೂಕಿನ ಹಣವಾಳ, ಚಳ್ಳೂರು, ಸೋಮನಾಳ ತೊಂಡಿಹಾಳ ಗ್ರಾಮಗಳ ರೈತರ ಭೂಮಿಗೆ ಭೇಟಿ ನೀಡಿ ಹಸಿರೆಲೆಗೊಬ್ಬರ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದರು. ಬೇಸಿಗೆಯಲ್ಲಿ ಭತ್ತದ ಕಟಾವಿನ ನಂತರ ಹೊಲದ ಫಲವತ್ತತೆ ಕಾಪಾಡಿಕೊಳ್ಳಲು ಹಸಿರು ಎಲೆಗೊಬ್ಬರವನ್ನು ಬೆಳೆಯಬೇಕು. ಈಗಾಗಲೇ ಶೇ.30ರಷ್ಟು ಪ್ರದೇಶದಲ್ಲಿ ಪಿಳ್ಳಿಪೆಸರು ಹಸಿರು ಎಲೆಗೊಬ್ಬರವನ್ನು ಬೆಳೆಯುತ್ತಿದ್ದಾರೆ. ಈ ಭಾಗದಲ್ಲಿ ಭತ್ತ ಪ್ರಮುಖ ಬೆಳೆಯಾಗಿದ್ದು, ಭತ್ತ ಕಟಾವಾದ ಮೇಲೆ ಅಥವಾ 15 ದಿನ ಮುಂಚೆ ಮಣ್ಣಿನಲ್ಲಿ ತೇವಾಂಶ ಇರುವಾಗಲೇ ಪಿಳ್ಳಿಪೆಸರು ಎಂಬ ಹಸಿರುಎಲೆ ಗೊಬ್ಬರವನ್ನು ಬೆಳೆಯುತ್ತಿದ್ದಾರೆ. ಹೀಗೆ ಬೆಳೆಯುವುದರಿಂದ, ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ಅದರ ಜತೆಗೆ ಬೀಜಕ್ಕಾಗಿ ಬೆಳೆದ ಬೆಳೆಯು ಹೆಚ್ಚಿನ ಆದಾಯ ತರಬಲ್ಲದು ಎಂದರು.

ನಿವೃತ್ತ ವಿಸ್ತರಣಾ ನಿರ್ದೇಶಕ ಡಾ|ಬಸಪ್ಪ ಎಚ್‌.ವಿಜ್ಞಾನಿಗಳಾದ ಡಾ|ರಾಘವೇಂದ್ರ ಎಲಿಗಾರ, ನಾರಪ್ಪ ಜಿ, ರೈತರಾದ ವೀರೇಶಪ್ಪ, ವಾಸು, ಶಂಕರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next