Advertisement

ಉ.ಪ್ರದೇಶದ ಬೀದಿಯಲ್ಲೇ ನಡೀತು ಲೈಂಗಿಕ ದೌರ್ಜನ್ಯ

12:28 PM May 29, 2017 | Team Udayavani |

ಲಕ್ನೋ: ಉತ್ತರಪ್ರದೇಶದಲ್ಲಿ 14 ಜನರ ಗುಂಪು ಇಬ್ಬರು ಯುವತಿಯರನ್ನು ಬೀದಿಯಲ್ಲಿ ತಳ್ಳಾಡಿ, ಮನಬಂದಂತೆ ಎಳೆದಾಡಿ, ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಅದನ್ನು ಮೊಬೈಲ್‌ ಕೆಮರಾದಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿರುವ ಘಟನೆ ನಡೆದಿದೆ. ರೋಮಿಯೋ ನಿಗ್ರಹ ಪಡೆ ಕಾರ್ಯಾಚರಿಸುತ್ತಿರುವ ನಡುವೆಯೇ ಮಹಿಳೆಯರ ಮೇಲೆ ದಬ್ಟಾಳಿಕೆ, ದೌರ್ಜನ್ಯ ಮುಂದುವರಿದಿರುವುದು ಅಚ್ಚರಿಗೆ ಕಾರಣವಾಗಿದೆ. ರಾಂಪುರ್‌ ಜಿಲ್ಲೆಯ ಹಳ್ಳಿಯೊಂದರಲ್ಲಿ ಈ ಘಟನೆ ವರದಿಯಾಗಿದೆ. ‘ದಯವಿಟ್ಟು ನಮಗೇನೂ ಮಾಡಬೇಡಿ’ ಎಂದು ಬೇಡಿಕೊಂಡರೂ ಕೇಳದ ಪುಂಡರ ಗುಂಪು ಕೀಚಕರಂತೆ ವರ್ತಿಸಿದೆ. ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.

Advertisement

ಲೂಸ್‌ಟಾಕ್‌: ಈ ಬಗ್ಗೆ ಮಾತನಾಡಿದ ಎಸ್ಪಿ ನಾಯಕ ಅಜಂ ಖಾನ್‌, ಮಹಿಳೆಯರು ಅಂಥ ಕೆಟ್ಟ ಕೆಲಸ ನಡೆಯುವಲ್ಲಿಗೆ ಹೋಗಲೇಬಾರದು ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಯೋಗಿ ಸರಕಾರ ಬಂದ ಬಳಿಕ ಇಂಥ ಘಟನೆಗಳು ಹೆಚ್ಚಾಗಿವೆ. ಪುರುಷರು ತಮ್ಮ ಮಹಿಳೆಯರನ್ನು ಮನೆಯೊಳಗೇ ಇರುವಂತೆ ನೋಡಿಕೊಳ್ಳಬೇಕಾದ ಸ್ಥಿತಿಯಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next