ಚಾಮರಾಜನಗರ: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಅಟಲ್ ಭೂ ಜಲ ಯೋಜನೆ ಹಾಗೂ ಜಿಪಂ ವತಿಯಿಂದ ಜಿಲ್ಲೆಯಲ್ಲಿ ಅಟಲ್ ಭೂ ಜಲ ಯೋಜನೆಯ ಕಾಮಗಾರಿ ಅನುಷ್ಠಾನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಜಿಲ್ಲೆ ಸೇರಿ ರಾಜ್ಯದ ಒಟ್ಟು 8 ಜಿಲ್ಲೆಗಳಲ್ಲಿ ಅನುಷ್ಠಾನ ಮಾಡಲಾಗುತ್ತಿರುವ ಅಟಲ್ ಭೂ ಜಲ ಯೋಜನೆಗೆ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ತುಮ ಕೂರಿ ನಿಂದ ವಿಡಿಯೋ ಕಾನ್ಫರೆನ್ಸ್ (ವರ್ಚುವಲ್) ಮೂಲಕ ಚಾಲನೆ ನೀಡಿದರು.
ಗುಂಡ್ಲುಪೇಟೆಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸ್ಥಳೀಯವಾಗಿ ಅಟಲ್ ಭೂ ಜಲ ಯೋಜನೆ ಕಾಮಗಾರಿ ಅನುಷ್ಠಾನ ಸಮಾರಂಭ ನಡೆಯಿತು. ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಉದ್ಘಾಟಿಸಿದರು. ಸಣ್ಣ ನೀರಾವರಿಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಹೊರತಂದಿರುವ ಅಂತರ್ಜಲ ಕುರಿತ ಕೈಪಿಡಿಯನ್ನು ಶಾಸಕರು ಬಿಡುಗಡೆಮಾಡಿದರು. ಇದೇ ವೇಳೆ ಯೋಜನೆ ಅನುಷ್ಠಾನದ ಉದ್ಘಾಟನಾ ಭಾಗ ವಾಗಿ ನಡೆದ ಹಂಗಳ ಹೋಬಳಿಯ ಹುಂಡಿಪುರದಲ್ಲಿ ಅಧ್ಯಯನ ಕೊಳವೆಬಾವಿ ಕೊರೆಯುವ ಪ್ರಕ್ರಿಯೆಯನ್ನು ವರ್ಚುವಲ್ ಮೂಲಕ ವೀಕ್ಷಿಸಲಾಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಸಿ.ಎಸ್. ನಿರಂಜನ್ ಕುಮಾರ್, ಅಂತರ್ಜಲ ಅತೀಬಳಕೆಯಲ್ಲಿ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಸೇರ್ಪಡೆಯಾಗಿದೆ. ಹೀಗಾಗಿ ಎಚ್ಚೆತ್ತುಕೊಂಡು ಅಂತರ್ಜಲ ನಿರ್ವಹಣೆ, ಸಮರ್ಪಕ ನೀರಿನ ಬಳಕೆಗಾಗಿ ಉತ್ತಮ ಕ್ರಮಗಳನ್ನು ಅಳವಡಿಸಿಕೊಳ್ಳಲು ಅಟಲ್ ಭೂ ಜಲ ಯೋಜನೆ ಜಾರಿಯಾಗುತ್ತಿದೆ. ಈ ಯೋಜನೆಯಡಿ ವಿವಿಧ ಗ್ರಾಪಂಗಳಲ್ಲಿ ಅಧ್ಯಯನ ಕೊಳವೆ ಬಾವಿ ಕೊರೆಯಲಾಗುತ್ತದೆ. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯೊಂದಿಗೆ ಇತರೆ ಇಲಾಖೆಗಳೂ ಯೋಜನೆ ಯಶಸ್ವಿಗೊಳಿಸಬೇಕು ಎಂದರು. ಜಿಪಂ ಅಧ್ಯಕ್ಷೆ ಎಂ.ಅಶ್ವಿನಿ ಮಾತನಾಡಿ, ಅಂತರ್ಜಲ ಹೆಚ್ಚಳಕ್ಕೆ ಮುಂದಾಗಬೇಕಿದ್ದು ತಾಲೂಕಿನಯೋಜನೆ ಸದ್ಬಳಕೆ ಆಗಬೇಕೆಂದರು.
ಪರಿಸರ ರಕ್ಷಿಸಿ: ಜಿಪಂ ಉಪಾಧ್ಯಕ್ಷೆ ಶಶಿಕಲಾ ಮಾತನಾಡಿ, ಈ ಹಿಂದೆ ಪ್ರತಿ ಊರಿನಲ್ಲಿ ಕೆರೆ ಇನ್ನಿತರ ನೀರಿನ ಸಂಪನ್ಮೂಲ ಲಭ್ಯ ವಿತ್ತು. ಆದರೆ, ಇಂದು ಪ್ಲಾಸ್ಟಿಕ್ ಬಳಕೆ ಹೆಚ್ಚಿದ್ದು ಅನೇಕ ತೊಂದರೆ ಅನುಭವಿಸುವಂತಾಗಿದೆ. ಅಭಿವೃದ್ಧಿ ಕಾಮಗಾರಿ ನೆಪದಲ್ಲಿ ಮರ ಗಿಡಗಳನ್ನು ಕಡಿಯುವುದು ನಿಲ್ಲಬೇಕಿದೆ ಎಂದು ಅಭಿಪ್ರಾಯಪಟ್ಟರು. ಜಿಪಂ ಸದಸ್ಯ ಬಿ.ಕೆ.ಬೊಮ್ಮಯ್ಯ, ಗುಂಡ್ಲುಪೇಟೆ ತಾಪಂ ಅಧ್ಯಕ್ಷ ಎಸ್.ಎಸ್.ಮಧುಶಂಕರ್, ಪುರಸಭಾ ಅಧ್ಯಕ್ಷ ಗಿರೀಶ್, ಹುಂಡಿಪುರ ಗ್ರಾಪಂ ಅಧ್ಯಕ್ಷೆ ಬಿ.ಕೆ.ಲಕ್ಷಿ ¾, ಮೈಸೂರಿನ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವೃತ್ತದ ಅಧೀಕ್ಷಕ ಎಂಜಿನಿಯರ್ ರಾಜಶೇಖರ್ ಕೆ. ಯಡಹಳ್ಳಿ, ಕಾರ್ಯ ಪಾಲಕ ಎಂಜಿನಿಯರ್ ಕೆ.ಆರ್.ಮೋಹನ್, ಜಿಲ್ಲಾ ಅಟಲ್ ಭೂ ಜಲ ಯೋಜನೆ ನೋಡಲ್ ಅಧಿಕಾರಿ ಎ. ಎಸ್.ಭಾಸ್ಕರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ಡಾ.ಲಕ್ಷ್ಮಮ್ಮ, ಜಿಲ್ಲಾ ಅಂತರ್ಜಲ ಇಲಾಖೆಯ ಹಿರಿಯ ಭೂ ವಿಜ್ಞಾನಿ ಡಾ.ಪ್ರಸನ್ನ ಕುಮಾರ್ ಮತ್ತಿತರರಿದ್ದರು.
ಪ್ರಧಾನ ಮಂತ್ರಿಯವರು ಅಟಲ್ ಭೂ ಜಲ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ಅಂತರ್ಜಲ ಸುಸ್ಥಿರ ನಿರ್ವಹಣೆಯ ಪ್ರಮುಖ ಅಂಶಗಳಾದ ಸಮುದಾಯ ಪಾಲ್ಗೊಳ್ಳುವಿಕೆ, ನೆರವು ಸರಬರಾಜು ನಿರ್ವಹಣೆ ಅತಿಮುಖ್ಯ. ಮಳೆ ನೀರು ಇಂಗಿಸುವ ಕಾರ್ಯ ಆಗಬೇಕಿದೆ. ಅಂತರ್ಜಲ ಸಂಪನ್ಮೂಲ ಅಭಿವೃದ್ಧಿಗೊಳಿಸುವ ಗುರಿ ಹೊಂದಲಾಗಿದ್ದು ಉತ್ತಮ ಫಲಿತಾಂಶದೊಂದಿಗೆ ಯೋಜನೆ ಸಾಕಾರವಾಗಲಿದೆ.
-ನಿರಂಜನ್‌ಕುಮಾರ್, ಶಾಸಕ