Advertisement
ನೂರಾರು ಎಕರೆ ಕೃಷಿ ಭೂಮಿ ಹಾಗೂ ಕುಡಿಯುವ ನೀರಿಗೆ, ಜನ ಜಾನು ವಾರುಗಳಿಗೆ ನೀರೊದಗಿಸುತ್ತಿದ್ದ ಮದಗ ಪ್ರತಿ ವರ್ಷ ಮೇ ತಿಂಗಳಲ್ಲಿ ಬತ್ತುತ್ತಿತ್ತು. ಈಗ ಸ್ಥಳೀಯಾಡಳಿತವು ಮದಗದಲ್ಲಿ ಶೇಖರಣೆಯಾದ ಹೂಳನ್ನು ಉಚಿತವಾಗಿ ನೀಡುವುದಾಗಿ ನಿರ್ಣಯಿಸಿದೆ. ಪರಿಣಾಮ, ಸ್ಥಳೀಯ ರಾದ ಸತೀಶ್ ಶೆಟ್ಟಿ ಎನ್ನುವವರು ಗ್ರಾ.ಪಂ. ನಿರ್ಣಯದಂತೆ ಮದಗ ಹೂಳನ್ನು ಯಂತ್ರಗಳ ಸಹಾಯದಿಂದ ತೆಗೆದು ತಮ್ಮ ಖಾಸಗಿ ಜಾಗಗಳಿಗೆ ಬಳಸಿಕೊಳ್ಳುವ ಜತೆಗೆ ಬರಿದಾದ ಮದಗದಲ್ಲಿ ನೀರು ಜಿನುಗಲು ಜಲ ಸಂರಕ್ಷಣೆಗೆ ಸಾಥ್ ನೀಡಿದ್ದಾರೆ.
ಮದಗದ ಹೂಳೆತ್ತುವುದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗಿ ಗ್ರಾಮದ ನೂರಾರು ಎಕರೆ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಮುಂದಿನ ದಿನಗಳಲ್ಲಿ ಜಲ್‌ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಗ್ರಾ.ಪಂ. ವ್ಯಾಪ್ತಿಯ ಸುಮಾರು 200 ಎಕರೆ ಮೊಗೆಬೆಟ್ಟು ಮದಗದ ಹೂಳೆತ್ತುವ ಮಹತ್ವಾಕಾಂಕ್ಷಿ ಯೋಜನೆ ಕೂಡ ಇದೆ.
-ಕರುಣಾಕರ ಶೆಟ್ಟಿ,
ಅಧ್ಯಕ್ಷರು, ಗ್ರಾ.ಪಂ. ಬೇಳೂರು