Advertisement

ನಡ ನಾಮಫಲಕ ಕಡ್ನಾಯಕ್ಕೆ 15 ದಿನಗಳ ಗಡು

11:30 AM Feb 03, 2018 | Team Udayavani |

ಆಳಂದ: ಹೋಟೆಲ್‌, ಅಂಗಡಿ ಮತ್ತು ಮಳಿಗೆ ಸೇರಿದಂತೆ ಸಾರ್ವಜನಿಕ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳ ಕಟ್ಟಡಗಳಿಗೆ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಸಬೇಕು ಎಂದು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಜಂಟಿಯಾಗಿ ಜಾಗೃತಿ ಪ್ರತಿಭಟನೆ ಕೈಗೊಂಡು ತಾಲೂಕು ಆಡಳಿತವನ್ನು ಒತ್ತಾಯಿಸಿದರು.

Advertisement

ಕನ್ನಡ ನಾಡಿನಲ್ಲಿದ್ದು ಕನ್ನಡ ಫಲಕ ಹಾಕದೆ ಅನ್ಯಭಾಷೆಗಳ ಫಲಕ ಹಾಕುತ್ತಿರುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಕನ್ನಡಕ್ಕೆ ಮೊದಲಾದ್ಯತೆ ನೀಡದವರ ಅಂಗಡಿ ಮುಂಗಟ್ಟು, ಮಳಿಗೆಗಳ ಮೇಲೆ ಫಲಕ ಅಳವಡಿಸುವಂತೆ ಸೂಚಿಸಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು. ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಕನ್ನಡ ನಾಮಫಲಕ ಜಾಗೃತಿ ಘೋಷಣೆ ಕೂಗಿ 15 ದಿನಗಳಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕ ಹಾಕದಿದ್ದಲ್ಲಿ ಕಪ್ಪು ಮಸಿ ಬಳಿಯಲಾಗುವುದು ಎಂದು ಎಚ್ಚರಿಸಿದರು. 

ಜಾಥಾದಲ್ಲಿ ಕರ್ನಾಟಕ ನವ ನಿರ್ಮಾಣ ಸೇನೆ ಅಧ್ಯಕ್ಷ ರಮೇಶ ಜಗತಿ, ಕರವೇ (ಪ್ರವೀಣಶೆಟ್ಟಿ ಬಣ) ಅಧ್ಯಕ್ಷ ಕಿರಣ ಗುತ್ತೇದಾರ, ನಮ್ಮ ಕರುನಾಡು ವೇದಿಕೆ ಜಿಲ್ಲಾ ಅಧ್ಯಕ್ಷ ಗಂಗಾಧರ ಕುಂಬಾರ, ಕರವೇ (ನಾರಾಯಣಗೌಡ ಬಣ) ಅಧ್ಯಕ್ಷ ಲಕ್ಷ್ಮೀಕಾಂತ ಉದನೂರ, ನಮ್ಮ ಕರ್ನಾಟಕ ವೇದಿಕೆ ಅಧ್ಯಕ್ಷ ಶರಣು ಚಿಚಕೋಟಿ ನೇತೃತ್ವದಲ್ಲಿ ಪ್ರತಿಭಟನಾ ಜಾಥಾ ನಡೆಸಿದ ಕಾರ್ಯಕರ್ತರು ತಾಲೂಕು ಆಡಳಿತವು ಸಂಬಂಧಿತರಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿ ನಾಮಫಲಕ ಅಳವಡಿಸಬೇಕು ಎಂದು ತಹಶೀಲ್ದಾರ್‌ ಬಸವರಾಜ ಎಂ. ಬೆಣ್ಣೆಶಿರೂರ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್‌ರು, ಈ ಕುರಿತು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಜಾಗೃತಿ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು. ಕರವೇ ಉಪಾಧ್ಯಕ್ಷ ವೆಂಕಟೇಶ ರಾಠೊಡ, ಸದಾಶಿವ ಆಲೂರೆ ಹಾಗೂ ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next