ಪಟ್ನಾಗಢ, ಒಡಿಶಾ : ಒಡಿಶಾದ ಬೋಲಾಂಗೀರ್ ಜಿಲ್ಲೆಯ ಪಟ್ನಾಗಢದಲ್ಲಿ ತಾವು ಸ್ವೀಕರಿಸಿದ ಪಾರ್ಸೆಲ್ ಬಾಂಬ್ ಸ್ಫೋಟಗೊಂಡು ಮದುಮಗ ಮತ್ತು ಆತನ ಅಜ್ಜಿ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.
ಈ ಘಟನೆಯಲ್ಲಿ ಮದುಮಗಳು ಕೂಡ ಗಂಭೀರವಾಗಿ ಗಾಯಗೊಂಡಿದ್ದಾಳೆ. ತೀವ್ರವಾಗಿ ಗಾಯಗೊಂಡಿದಿದ ಅಜ್ಜಿಯನ್ನು ಬೋಲಾಂಗೀರ್ ಆಸ್ಪತ್ರೆಗೆ ಒಯ್ಯಲಾಯಿತಾದರೂ ಅಲ್ಲಿ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಬ್ರಹ್ಮಪುರ ಪ್ರದೇಶದ ಈ ಕುಟುಂಬವು ತಮಗೆ ಬಂದ ಪಾರ್ಸೆಲ್ ತೆರೆದಾಗ ಬಾಂಬನ್ನು ಒಳಗೊಂಡಿದ್ದ ಅದು ಸ್ಫೋಟಗೊಂಡಿತು.
ಒಡಿವಾ ಟಿವಿ ಡಾಟ್ ಇನ್ ವರದಿ ಪ್ರಕಾರ ಗಾಯಾಳುಗಳನ್ನು ಮೊದಲಾಗಿ ಪಟ್ನಾಗಢ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಗಂಭೀರ ಸ್ಥಿತಿಯಲ್ಲಿದ್ದ ಅಜ್ಜಿ ಮತ್ತು ಮದುಮಗಳನ್ನು ಅನಂತರ ಬೋಲಾಂಗೀರ್ ಆಸ್ಪತ್ರೆಗೆ ಸೇರಿಸಲಾಯಿತು. ಬುರ್ಲಾ ಆಸ್ಪತ್ರೆಗೆ ಸ್ಥಳಾಂತರಗೊಂಡಿದ್ದ ಮದುಮಗ ಅಲ್ಲಿ ಮೃತಪಟ್ಟರು.
ವರದಿಗಳ ಪ್ರಕಾರ ಸೌಮ್ಯಾ ಶೇಖರ್ ಸಾಹು ಮತ್ತು ರೀಮಾ ಸಾಹು ಅವರು 2018ರ ಫೆ.18ರಂದು ಮದುವೆಯಾಗಿದ್ದರು. ಇವರು ಮನೆಯವರ ಜತೆಗೆ ಸೇರಿ ಮದುವೆಗೆ ಬಂದಿದ್ದ ಉಡುಗೊರೆಗಳನ್ನು ತೆರೆಯುತ್ತಿದ್ದಾಗ ಅವುಗಳಲ್ಲಿದ್ದ ಪಾರ್ಸೆಲ್ ಬಾಂಬ್ ಸ್ಫೋಟಗೊಂಡಿತು. ಇದು ಯಾರೋ ಮಾಡಿರುವ ದುಷ್ಕೃತ್ಯ ಎಂದು ಸಂತ್ರಸ್ತ ಕುಟುಂಬ ಹೇಳಿರುವುದನ್ನು ಒಡಿಶಾ ಟಿವಿ ಡಾನ್ ಇನ್ ವರದಿ ಮಾಡಿದೆ.
ಬೋಲಾಂಗೀರ್ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಪಾರ್ಸೆಲ್‌ನಲ್ಲಿ ಅವಿತಿಡಲಾಗಿದ್ದ ಕಚ್ಚಾ ಬಾಂಬ್ ಸ್ಫೋಟಗೊಂಡು ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.