Advertisement

ಹುದುಕುಳ: ದಿವ್ಯಾಂಗರಿಗೆ ದಿನಸಿ ಕಿಟ್

07:30 PM Jun 16, 2021 | Team Udayavani |

ಬಂಗಾರಪೇಟೆ: ಬಡವರ ಕಷ್ಟಕ್ಕೆ ನೆರವಾದರೆ ಮನುಷ್ಯ ತನ್ನ ಜೀವನದಲ್ಲಿನೆಮ್ಮದಿ ಕಾಣಬಹುದು ಎಂದುಚಿಕ್ಕ ಅಂಕಂಡಹಳ್ಳಿ ಗ್ರಾಪಂ ಅಧ್ಯಕ್ಷ ಸಿ.ಎಂ.ಹರೀಶ್‌ ಕುಮಾರ್‌ ಹೇಳಿದರು.

Advertisement

ತಾಲೂಕಿನ ಚಿಕ್ಕಅಂಕಂಡಹಳ್ಳಿ ಗ್ರಾಪಂವ್ಯಾಪ್ತಿಯ ಹುದುಕುಳ ಗ್ರಾಮದಲ್ಲಿ ದಿವ್ಯಾಂಗರಿಗೆ ದಿನಸಿ ಕಿಟ್‌ ವಿತರಿಸಿಮಾತನಾಡಿ, ಕೊರೊನಾ ಲಾಕ್‌ಡೌನ್‌ನಿಂದ ಜನಸಾಮಾನ್ಯರು ಕಷ್ಟದ ಜೀವನಸಾಗಿಸುತ್ತಿದ್ದು, ಅಂಗವಿಕಲರೂ ಇದಕ್ಕಿಂತಬಹಳ ಭಿನ್ನವಾಗಿದ್ದಾರೆ. ಅಂತಹ ಕುಟುಂಬದವರಿಗೆ ಸಹಾಯ ಮಾಡುವುದುದೇವರಿಗೆ ಋಣ ತೀರಿಸಿದಂತಾಗಿದ್ದು,ಇಂತಹ ಸಮುದಾಯಕ್ಕೆ ನೆರವಾಗಲು ಜನಮುಂದೆ ಬರಬೇಕು ಎಂದು ಹೇಳಿದರು.

ಬಹಳಷ್ಟು ಜನರ ಬಳಿ ದುಡ್ಡು ಇರುತ್ತದೆ. ಆದರೆ, ಸಹಾಯ ಮಾಡಲುಮುಂದೆ ಬರುವುದಿಲ್ಲ. ಒಮ್ಮೆ ಸಹಾಯಮಾಡಿದರೆ ಅದರಲ್ಲಿ ಸಿಗುವಂತಹ ತೃಪ್ತಿಬೇರ್ಯಾವುದರಲ್ಲೂ ಸಿಗುವುದಿಲ್ಲ ಎಂದರು.

ಕೊರೊನಾದಿಂದ ಲಕ್ಷಾಂತರ ಜನರಬದುಕು ಅತಂತ್ರವಾಗಿದ್ದು, ಇಂತಹಸಮಯದಲ್ಲಿ ಸಣ್ಣ ಸಹಾಯ ಮಾಡಿದರೂಜೀವನ ಪರ್ಯಂತ ನೆನೆಸಿಕೊಳ್ಳುತ್ತಾರೆಎಂದರು.ಚಿಕ್ಕಅಂಕಂಡಹಳ್ಳಿ ಗ್ರಾಪಂ ಉಪಾಧ್ಯಕ್ಷೆ ನಗೀನ್‌ತಾಜ್‌ ಯಾಸೀನ್‌, ಎಸ್‌ಎನ್‌.ಯುವಸೇನೆ ಉಪಾಧ್ಯಕ್ಷ ಜಬಿವುಲ್ಲಾ,ಸದಸ್ಯರಾದ ಅನಿಲ್‌, ರಾಜೇಶ್‌, ಚರಣ್‌,ಪವನ್‌, ಪ್ರತಾಪ್‌, ಹರ್ಷ, ಅಜಯ್‌,ಗ್ರಾಪಂ ಸದಸ್ಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next