ಮಾಗಡಿ: ಕಾರ್ಮಿಕ ಇಲಾಖೆಗೆ ಸೇರಿದ 4000 ದಿನಸಿ ಕಿಟ್‌ಗಳನ್ನು ಜೆಡಿಎಸ್ ಶಾಸಕ ಎ.ಮಂಜುನಾಥ್ ಮತ್ತು ಜೆಡಿಎಸ್ ಪುರಸಭೆ ಸದಸ್ಯರು ದುರುಪಯೋಪಡಿಸಿಕೊಂಡಿದ್ದಾರೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಬಿ.ಎಂ. ಧನಂಜಯ ಗಂಭೀರ ಆರೋಪ ಮಾಡಿದ್ದಾರೆ.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ, ಕೋವಿಡ್ ಸಂಕಷ್ಟದಲ್ಲಿರುವ ಬಡವರಿಗೆ ಕೂಲಿ, ಕಟ್ಟಡ ಕಾರ್ಮಿಕರಿಗೆ ವಿತರಿಸಬೇಕಾದ ದಿನಸಿ ಕಿಟ್ ವಿತರಿಸದೆ ದುರುಪಯೋಗಪಡಿಸಿಕೊಂಡು ಅರ್ಹರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ.
ಸರ್ಕಾರದ ದಿನಸಿ ಕಿಟ್‌ಗಳನ್ನು ತಾಲೂಕಿನಲ್ಲಿ ಕಳೆದ ವಾರದಿಂದ ಜೆಡಿಎಸ್ ಕಾರ್ಯಕರ್ತರು, ಪುರಸಭೆ ಸದಸ್ಯರು ಅಕ್ರಮ ದಾಸ್ತಾನು ಮಾಡಿಕೊಂಡು ಬೇಕಾಬಿಟ್ಟಿ ವಿತರಿಸುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆ ಯಲ್ಲಿ ಪರಿಶೀಲನೆ ನಡೆಸಿದಾಗ ಜಿಲ್ಲಾಡಳಿತ ವೈಫಲ್ಯ ಕಂಡು ಬಂದಿರುತ್ತದೆ ಎಂದರು.ದಿನಸಿ ಕಿಟ್ ಅಕ್ರಮ ದಾಸ್ತಾನು ಮಾಡಿ ಕೊಂಡಿರುವವರಿಂದ ಕೂಡಲೇ ತಾಲೂಕು ಮತ್ತು ಜಿಲ್ಲಾಡಳಿತ ವಶಪಡಿಸಿಕೊಳ್ಳಬೇಕು. ಇದು ನ್ಯಾಯಯುತವಾಗಿ ಇಲಾಖೆ ಮುಖಾಂತರವೇ ಕಟ್ಟಡ, ಕೂಲಿ ಕಾರ್ಮಿಕರಿಗೆ ದಿನಸಿ ವಿತರಣೆಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕಿದೆ. ಇಲ್ಲದಿದ್ದರೆ ಸಂಬಂಧ ಸಚಿವರನ್ನು ಕರೆಸಿ, ತನಿಖೆ ನಡೆಸಲು ಆಗ್ರಹಿಸುವ ಮೂಲಕ ಶಿಸ್ತಿನ ಕ್ರಮ ಜರುಗಿಸಲು ಒತ್ತಾಯಿಸಲಾಗು ವುದು ಎಂದು ತಿಳಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ್, ನೇಕಾರರ ಸಂಘದ ಉಪಾ ಧ್ಯಕ್ಷ ಎಂ.ಆರ್.ರಾಘವೇಂದ್ರ, ಶಂಕರ್,ಪುರಸಭೆ ಸದಸ್ಯೆ ಭಾಗ್ಯಮ್ಮ ನಾರಾ ಯ ಣಪ್ಪ, ಟಿ.ಆರ್.ದಯಾನಂದ್, ಒಬಿಸಿ ಅಧ್ಯಕ್ಷ ಮಾರಪ್ಪ, ಬಾಲಾಜಿ, ಟಿ ಎಪಿ ಸಿಎಂ ಎಸ್ ಸದಸ್ಯ ಸತೀಶ್, ಶಶಿಧರ್ ಇದ್ದರು