ನೆಲಮಂಗಲ: ಚುನಾವಣೆಯಲ್ಲಿ ಗೆದ್ದ ನಂತರ ಸುಮ್ಮನಾಗುವ ರಾಜಕಾರಣಿಗಳ ನಡುವೆ ಹಸ್ಕೂರು ಗ್ರಾಪಂ ಉಪಾಧ್ಯಕ್ಷ ಬಿ.ರಮೇಶ್ 5 ಸಾವಿರ ದಿನಸಿ ಕಿಟ್ಗಳನ್ನು ಪ್ರತಿ ಮನೆಗೂ ವಿತರಿಸುವ ಮೂಲಕ ಮಾದರಿಯಾಗಿದ್ದಾರೆ.
ಲಾಕ್ಡೌನ್ನಲ್ಲಿ ಕೆಲಸಗಳಿಲ್ಲದೆ, ಮನೆ ಯಲ್ಲಿ ಇದ್ದ ಪಂಚಾಯಿತಿ ವ್ಯಾಪ್ತಿಯ ಪ್ರತಿ ಮನೆಗೂ ವಿವಿಧ ಸಾಮಗ್ರಿಗಳಿರುವ ದಿನಸಿ ಕಿಟ್ಗಳನ್ನು ತನ್ನ ಸ್ವಂತ ಹಣದಲ್ಲಿ ಬಿ.ರಮೇಶ್ ನೀಡಿದ್ದಾರೆ. ಯಲಹಂಕ ಕ್ಷೇತ್ರದ ಶಾಸಕ ಎಸ್. ಆರ್.ವಿಶ್ವನಾಥ್ ಗ್ರಾಪಂ ಉಪಾಧ್ಯಕ್ಷರ ಮಾನವೀಯತೆ ಗುಣಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಜನರ ಸೇವೆ ಸಂತೋಷದ ವಿಚಾರ: ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಮಾತ ನಾಡಿ, ಕೊರೊನಾ ಸಂಕಷ್ಟದಲ್ಲಿ ಮನೆಯಿಂದ ಹೊರಬರದವರೇ ಹೆಚ್ಚು ಇರುವಾಗ ಗ್ರಾಪಂ ಉಪಾಧ್ಯಕ್ಷ ಬಿ.ರಮೇಶ್ ತನ್ನ ಸ್ವಂತ ಹಣ ಖರ್ಚು ಮಾಡಿ, ಎಲ್ಲಾ ಮನೆಗಳಿಗೆ ದಿನಸಿ ಕಿಟ್ ವಿತರಣೆ ಕ್ಷೇತ್ರದಲ್ಲಿ ಮಾದರಿ ಕೆಲಸವಾಗಿದೆ.
ಜನರ ಸಂಕಷ್ಟದಲ್ಲಿ ಅವರ ಜತೆ ನಿಲ್ಲಬೇಕಾಗಿರುವುದು ಪ್ರತಿಯೊಬ್ಬ ಜನಪ್ರತಿನಿಧಿಯ ಕರ್ತವ್ಯ. ಅದಕ್ಕೆ ಬಂದವಾಗಿ ಕ್ಷೇತ್ರದಲ್ಲಿ ಬಹಳಷ್ಟು ಜನರು ಸೇವೆ ಮಾಡುತ್ತಿರುವುದು ಸಂತೋಷದ ವಿಷಯ. ಪ್ರತಿ ಗ್ರಾಪಂ ಸದಸ್ಯರು ಕೂಡ ಸಂಕಷ್ಟದಲ್ಲಿ ಜನರ ಸೇವೆಗೆ ನಿಲ್ಲ ಬೇಕು ಎಂದರು.
ಜನರಿಗೆ ಸೇವೆ ನಮ್ಮ ಹೊಣೆ: ಹುಸ್ಕೂರು ಗ್ರಾ ಪಂ ಉಪಾಧ್ಯಕ್ಷ ಬಿ.ರಮೇಶ್ ಮಾತನಾಡಿ, ಗ್ರಾಪಂ ಸದಸ್ಯನಾಗಿ ಜನರು ನನ್ನನ್ನು ಅವಿರೋ ಧ ಆಯ್ಕೆ ಮಾಡಿದರೇ, ಸದಸ್ಯರು ಉಪಾಧ್ಯಕ್ಷ ನಾಗಿ ಆಯ್ಕೆ ಮಾಡಿದ್ದಾರೆ. ಅವರಿಗೆ ಸೇವೆ ಮಾಡುವ ಹೊಣೆ ನನ್ನದು. ಕೊರೊನಾ ಸಂಕಷ್ಟ ದಲ್ಲಿ ಕೆಲಸವಿಲ್ಲದೆ ಜನರು ಊಟಕ್ಕಾಗಿ ಪರದಾಡುವುದನ್ನು ಕಂಡು ಪ್ರತಿ ಮನೆಗೆ ದಿನಸಿ, ಮೆಡಿಕಲ್ ಕಿಟ್ ವಿತರಣೆ ಮಾಡಿದ್ದೇನೆ. ಇದು ನನ್ನ ಜನರಿಗೆ ಸಣ್ಣ ಸೇವೆ ಎಂದರು.
5 ಸಾವಿರ ಕಿಟ್ ವಿತರಣೆ: ಹುಸ್ಕೂರು ಗ್ರಾ ಪಂ 15ಕ್ಕೂ ಹೆಚ್ಚು ಗ್ರಾಮಗಳ ಪ್ರತಿ ಮನೆಗಳಿಗೂ ಅಕ್ಕಿ, ಬೇಳೆ, ಎಣ್ಣೆ, ಉಪ್ಪು, ರೆವೆ, ಗೋಧಿಹಿಟ್ಟು ಸೇರಿದಂತೆ ಅನೇಕ ಸಾಮಗ್ರಿಗಳ 5 ಸಾವಿರ ದಿನಸಿ ಕಿಟ್ ಅನ್ನು ರಮೇಶ್ ವಿತರಣೆ ಮಾಡಿದರು. ಮುಖಂಡರಾದ ಮುನಿರಾಜು, ಮಹೇಶ್, ಪಿಳ್ಳಹಳ್ಳಿ ಲೋಕಿ, ರಾಕೇಶ್, ನಾಗರಾಜು ಹಾಗೂ ರಮೇಶ್ ಅಭಿಮಾನಿ ಬಳಗದ ಯುವಕರು ಉಪಸ್ಥಿತರಿದ್ದರು.