Advertisement

ದಿವ್ಯಾಂಗ ಕಲಾವಿದರಿಗೆ ದಿನಸಿ, ಸಹಾಯಧನ

04:49 AM Jun 11, 2020 | Team Udayavani |

ಚಾಮರಾಜನಗರ: ಕೋವಿಡ್‌-19ನಿಂದ ಆರ್ಥಿಕ ಸಂಕಷ್ಟದಲ್ಲಿರುವ ಅನಾರೋಗ್ಯಪೀಡಿತ ಹಾಗೂ ದಿವ್ಯಾಂಗ ಕಲಾವಿದರಿಗೆ ಜಿಲ್ಲಾಡಳಿತ, ಕರ್ನಾಟಕ ಜಾನಪದ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಆದಿಚುಂಚನಗಿರಿ  ಮಹಾಸಂಸ್ಥಾನದ ಸಹ ಯೋಗದಲ್ಲಿ ಆಹಾರ ಪದಾರ್ಥಗಳ ಕಿಟ್‌ ಮತ್ತು ಧನಸಹಾಯದ ಚೆಕ್‌ಗಳನ್ನು ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ ವಿತರಿಸಿದರು.

Advertisement

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ.ರವಿ, ಜಾನ ಪದ ಕಲಾಪ್ರಕಾರಗಳಾದ  ತಂಬೂರಿ ಹಾಗೂ ಸೋಬಾನೆ ಪದಗಳನ್ನು ಚಿಕ್ಕಂದಿನಿಂದ ಕಲಿತ ಬಗೆ, ಕಲಿಸಿದ ಗುರು ಗಳು, ಅದನ್ನು ಮುಂದುವರೆಸಿಕೊಂಡು ಬರುತ್ತಿರುವ ಮತ್ತು ಇಂತಹ ಕಲೆಗಳನ್ನು ಮುಂದಿನ ಪೀಳಿಗೆಗೂ ಉಳಿಸುವ ಬಗ್ಗೆ ಸ್ವತಃ ಕಲಾವಿದರಿಂದಲೇ  ಮಾಹಿತಿ ಪಡೆದರು.

ಜಾನಪದ ಅಕಾಡಮಿ ಜಿಲ್ಲಾಧ್ಯಕ್ಷ ನರಸಿಂಹ ಮೂರ್ತಿ ಮಾತನಾಡಿ, ಕೋವಿಡ್‌-19 ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದ್ದರಿಂದ ಜಿಲ್ಲೆಯ ಕಲಾವಿ ದರು ಅರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರಿಗೆ ನೆರ ವಾಗುವ  ಸಲುವಾಗಿ ಜಿಲ್ಲಾಡಳಿತದಿಂದ 200 ಮಂದಿ ಕಲಾ ವಿದರಿಗೆ ಆಹಾರ ಪದಾರ್ಥಗಳ ದಿನಸಿ ಕಿಟ್‌ ವಿತರಿಸಲಾಗುತ್ತಿದೆ.

ಅಲ್ಲದೆ ಕರ್ನಾಟಕ ಜಾನಪದ ಅಕಾಡೆಮಿ 50 ಸಾವಿರ ರೂ.ಗಳ ಧನಸಹಾಯ ನೀಡಿದ್ದು, ಅರ್ಥಿಕ ಸಂಕಷ್ಟದಲ್ಲಿರುವ  ದಿವ್ಯಾಂಗರಿಗೆ ತಲಾ 1 ಸಾವಿರ ರೂ. ಚೆಕ್‌ ವಿತರಿಸಲಾಗುತ್ತಿದೆ ಎಂದರು. ಈ ವೇಳೆ ಎಸ್ಪಿ ಆನಂದ್‌ ಕುಮಾರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಗಿರೀಶ್‌, ಕರ್ನಾಟಕ ಜಾನಪದ ಪರಿಷತ್‌ ತಾಲೂಕು ಅಧ್ಯಕ್ಷ ಕಲೆ  ನಟರಾಜು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next