Advertisement

ಯುವತಿ ಹತ್ಯೆ ಪ್ರಕರಣ: 70 ದಿನಗಳಲ್ಲೇ ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಕೋರ್ಟ್

10:04 PM May 05, 2022 | Team Udayavani |

ಸೂರತ್‌: ಕಳೆದ ಫೆಬ್ರವರಿಯಲ್ಲಿ 21 ವರ್ಷದ ಕಾಲೇಜು ವಿದ್ಯಾರ್ಥಿನಿ ಗ್ರೀಷ್ಮಾ ವೆಕಾರಿಯಾಳನ್ನು ಕುಟುಂಬ ಸದಸ್ಯರೆದುರೇ ಕತ್ತು ಸೀಳಿ ಕೊಲೆಗೈದಿದ್ದ ಫೆನಿಲ್‌ ಗೊಯಾನಿಗೆ ಸೂರತ್‌ನ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಇದನ್ನು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ಪರಿಗಣಿಸಿರುವ ನ್ಯಾಯಾಲಯ, ಘಟನೆ ನಡೆದ ಕೇವಲ 70 ದಿನಗಳಲ್ಲಿ ಅಪರಾಧಿಗೆ ಶಿಕ್ಷೆ ಘೋಷಿಸಿದೆ.

Advertisement

ತೀರ್ಪು ನೀಡುವ ವೇಳೆ, ನಿರ್ಭಯಾ ಪ್ರಕರಣವನ್ನು ಉಲ್ಲೇಖೀಸಿದ ಸೂರತ್‌ನ ಪ್ರಿನ್ಸಿಪಲ್‌ ಸೆಷನ್ಸ್‌ ಮತ್ತು ಜಿಲ್ಲಾ ನ್ಯಾಯಾಧೀಶ ಕೆ.ಕೆ.ವ್ಯಾಸ್‌,  ಮಹಿಳೆಯರ ವಿರುದ್ಧದ ಇಂಥ ಘೋರ ಅಪರಾಧಗಳನ್ನು ತಡೆಯಬೇಕೆಂದರೆ ಕಠಿನ ಶಿಕ್ಷೆ ವಿಧಿಸಬೇಕಾದ ಅಗತ್ಯವಿದೆ’ ಎಂದಿದ್ದಾರೆ.

ತನ್ನನ್ನು ಪ್ರೀತಿಸುವಂತೆ ಗ್ರೀಷ್ಮಾಳಿಗೆ ಪೀಡಿಸುತ್ತಿದ್ದ ಫೆನಿಲ್‌, ಆಕೆ ಒಪ್ಪದ ಕಾರಣ  ಫೆ.16ರ ಹಾಡಹಗಲೇ  ರಸ್ತೆ ಮಧ್ಯೆ  ಕತ್ತುಸೀಳಿ ಕೊಲೆಗೈದಿದ್ದ. ರಕ್ಷಿಸಲು ಬಂದ ಆಕೆಯ ಅಣ್ಣ ಮತ್ತು ಚಿಕ್ಕಪ್ಪನಿಗೂ  ಇರಿದಿದ್ದ ಆತ ಸ್ವಯಂ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಒಂದೇ ವಾರದಲ್ಲಿ 2,500 ಪುಟಗಳ ಆರೋಪಪಟ್ಟಿ ಸಲ್ಲಿಸಿದ ಪೊಲೀಸರು, 25 ಪ್ರತ್ಯಕ್ಷ ಸಾಕ್ಷ್ಯಗಳು, 120 ದಾಖಲೆಗಳನ್ನು ಪುರಾವೆಯಾಗಿ ಒದಗಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next