Advertisement

ಬ್ರಿಸ್ಬೇನ್‌ ಟೆನಿಸ್‌ ಡಿಮಿಟ್ರೋವ್‌ ಗೆಲುವು

12:30 AM Jan 01, 2019 | |

ಬ್ರಿಸ್ಬೇನ್‌: ಬಲ್ಗೇರಿಯದ ಟೆನಿಸಿಗ ಗ್ರಿಗರ್‌ ಡಿಮಿಟ್ರೋವ್‌ “ಬ್ರಿಸ್ಬೇನ್‌ ಇಂಟರ್‌ನ್ಯಾಶನಲ್‌’ ಟೆನಿಸ್‌ ಕೂಟದ ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಸೋಮವಾರದ ಪಂದ್ಯದಲ್ಲಿ ಡಿಮಿಟ್ರೋವ್‌ ಜಪಾನಿನ ಯೊಶಿಹಿಟೊ ನಿಶಿಯೋಕ ಅವರನ್ನು 6-3, 6-4 ನೇರ ಸೆಟ್‌ಗಳಿಂದ ಸೋಲಿಸಿದರು. ಡಿಮಿಟ್ರೋವ್‌ ಕಳೆದ ಋತುವಿನಲ್ಲಿ ಪಾದದ ನೋವಿನಿಂದ ಬಳಲುತ್ತಿದ್ದರು. ಮುಂದಿನ ಪಂದ್ಯದಲ್ಲಿ ಅವರು 2017 ಚಾಂಪಿಯನ್‌ ಆಸ್ಟ್ರೇಲಿಯದ ಜಾನ್‌ ಮಿಲ್ಮನ್‌ ಅಥವಾ ಅಮೆರಿಕದ ಟೆನ್ನಿಸ್‌ ಸ್ಯಾಂಡ್‌ಗೆÅàನ್‌ ಅವರನ್ನು ಎದುರಿಸಲಿದ್ದಾರೆ.

Advertisement

ದಿನದ ಇನ್ನೊಂದು ಪಂದ್ಯದಲ್ಲಿ ಕೆನಡಾದ ಮಿಲೊಸ್‌ ರಾನಿಕ್‌ ಸ್ಲೊವೇನಿಯಾದ ಅಲ್ಜಾಜ್‌ ಬೆಡೆನ್‌ ವಿರುದ್ಧ 6-0, 6-3 ನೇರ ಸೆಟ್‌ಗಳ ಜಯ ಸಾಧಿಸಿದರು.

ಪಿಲಿಸ್ಕೋವಾ ವಿಜಯ
ವನಿತಾ ವಿಭಾಗದಲ್ಲಿ 2017ರ ಪ್ರಶಸ್ತಿ ವಿಜೇತೆ ಜೆಕ್‌ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ ರಶ್ಯದ ಯುಲಿಯಾ ಪುತಿನ್‌ತ್ಸೇವಾ ಅವರನ್ನು 4-6, 6-3, 6-4 ಸೆಟ್‌ಗಳಿಂದ ಸೋಲಿಸಿದರು.

ಆಸ್ಟ್ರೇಲಿಯದ ಡೆಸ್ಟಾನಿ ಐವಾ ಫ್ರಾನ್ಸ್‌ನ ಕ್ರಿಸ್ಟಿನಾ ಲಡೆನೊವಿಕ್‌ ಅವರನ್ನು 6-3, 7-6 (7-2) ಸೆಟ್‌ಗಳಿಂದ ಸೋಲಿಸಿ ಯುಎಸ್‌ ಓಪನ್‌ ಚಾಂಪಿಯನ್‌ ನವೊಮಿ ಒಸಾಕಾ ಅವರನ್ನು ಎದುರಿಸಲು ಸಿದ್ದರಾಗಿದ್ದಾರೆ.

ಶರಪೋವಾಗೆ ಕಠಿನ ಜಯ
ಶೆಂಜೆನ್‌:
ಇಲ್ಲಿ ನಡೆಯುತ್ತಿರುವ ಶೆಂಜೆನ್‌ ಓಪನ್‌ ಟೆನಿಸ್‌ ಪಂದ್ಯಾವಳಿಯಲ್ಲಿ ರಶ್ಯದ ಮರಿಯಾ ಶರಪೋವಾ ಮೊದಲ ಸುತ್ತನ್ನು ಬಹಳ ಕಷ್ಟದಿಂದ ದಾಟಿದ್ದಾರೆ. ಸ್ವಿಸ್‌ ಆಟಗಾರ್ತಿ ಟೈಮಿ ಬಕ್ಸಿನ್‌ಸ್ಕಿ ವಿರುದ್ಧ ಅವರು 6-2, 7-6 (7-3) ಅಂತರದಿಂದ ಗೆಲುವು ಸಾಧಿಸಿದರು. ಶರಪೋವಾ ಅವರ ಮುಂದಿನ ಎದುರಾಳಿ ಚೀನದ 17ರ ಹರೆಯದ ವಾಂಗ್‌ ಕ್ಸಿನ್ಯು.

Advertisement
Advertisement

Udayavani is now on Telegram. Click here to join our channel and stay updated with the latest news.

Next