Advertisement
ಸುಮಾರು ಎಂಟು ವರ್ಷಗಳ ಅನಂತರ ದಂಪತಿ ಊರಿಗೆ ಮರಳಿದರು.
Related Articles
Advertisement
ಸಂಬಂಧಿಕರ ವಿರೋಧಕಾಡು ಬೆಳೆಸುವ ತನ್ನ ನಿರ್ಧಾರ ಸುಲಭದ್ದೇನೂ ಆಗಿರಲಿಲ್ಲ ಎನ್ನುತ್ತಾರೆ ಜಯಶ್ರೀ. ‘ಪತಿ ವಿಶ್ವಂಭರ ಜತೆ ಕತಾರ್‌ನಿಂದ ಕುನ್ನಂಗೆ ಹಿಂದಿರುಗಿದ ಸಮಯ. ಇಲ್ಲಿ ನೀರಿಗೆ ಕೊರತೆಯಿತ್ತು. ಹೀಗಾಗಿ ನಾನು ಖಾಲಿ ಜಾಗದಲ್ಲಿ ಗಿಡಗಳನ್ನು ನೆಡಲು ನಿರ್ಧರಿಸಿದೆ. ಆಗ ನೆರೆ ಹೊರೆಯವರು, ಸಂಬಂಧಿಕರೆಲ್ಲ ನನ್ನನ್ನು ಗೇಲಿ ಮಾಡಿದರು. ಕಾಡು ಗಿಡಗಳನ್ನು ನೆಡುವ ಬದಲು ಮರಗೆಣಸು ಮುಂತಾದ ಆದಾಯ ತರುವ ಸಸಿಗಳನ್ನು ಬೆಳಸಬಹುದಲ್ಲ ಎಂದು ಪ್ರಶ್ನಿಸಿದರು. ಆದರೆ ನನಗೆ ಅದು ಇಷ್ಟವಿರಲಿಲ್ಲ. ಕಾಡು ಬೆಳೆಸಬೇಕೆನ್ನುವ ನಿರ್ಧಾರದಲ್ಲಿ ಗಟ್ಟಿಯಾಗಿದ್ದೆ. ಹೀಗಾಗಿ 28 ವರ್ಷಗಳ ಹಿಂದೆ ತೇಗ, ಮಹಾಗನಿ, ಮಾವು, ಆಲ ಮುಂತಾದ ಗಿಡಗಳನ್ನು ನೆಟ್ಟೆ. ಇದೀಗ ನಮ್ಮೂರಿನಲ್ಲಿ ಕಾಡುತ್ತಿದ್ದ ನೀರಿನ ಸಮಸ್ಯೆ ಬಗೆಹರಿದಿದೆ. ಅಂದು ಟೀಕಿಸುತ್ತಿದ್ದವರೆಲ್ಲ ಶ್ಲಾ ಸುತ್ತಿದ್ದಾರೆ’ ಎಂದು ವಿವರಿಸುತ್ತಾರೆ ಜಯಶ್ರೀ.
‘ಹಿರಿಯ ಪುತ್ರ ಆಟಿಸಂ ತೊಂದರೆ ಕಾಣಿಸಿಕೊಂಡಿತ್ತು. ಅನೇಕ ಚಿಕಿತ್ಸೆ ನೀಡಿದರೂ ಗುಣಮುಖನಾಗಿರಲಿಲ್ಲ. ಸಂವಹನ ನಡೆಸಲು ಆತನಿಗೆ ಕಷ್ಟವಾಗುತ್ತಿತ್ತು. ಈ ಸಮಯದಲ್ಲಿ ಎಲ್ಲ ಭರವಸೆಯನ್ನು ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ್ದೆ. ಆಗ ಕೈ ಹಿಡಿದದ್ದು ಗಿಡಗಳ ಒಡನಾಟ. ಅವುಗಳನ್ನು ಆರೈಕೆ ಮಾಡುತ್ತಾ ದುಃಖ ಮರೆತೆ’ ಎಂದು ಹೇಳುತ್ತಾರೆ ಜಯಶ್ರೀ. 2008ರಲ್ಲಿ ವಿಶ್ವಂಭರಂ ಕಾಯಿಲೆಯಿಂದ ನಿಧನ ಹೊಂದಿದರು. ಆಗ ಮಕ್ಕಳಿನ್ನು ಚಿಕ್ಕವರು. ಜಯಶ್ರೀ ಹೃದಯ ಚೂರಾಗಿತ್ತು.’ಆಗ ನಾನು ಸಂಪೂರ್ಣವಾಗಿ ಗಿಡಗಳ ಜತೆಗೆ ಸಮಯ ಕಳೆದೆ. ಇದರಿಂದ ನನಗೆ ಜೀವನೋತ್ಸಾಹ ಲಭಿಸಿತು’ ಎಂದು ಸ್ಮರಿಸಿಕೊಳ್ಳುತ್ತಾರೆ ಅವರು.
ಇದೀಗ ಮಕ್ಕಳು ದೊಡ್ಡವರಾಗಿದ್ದು, ಸಮಯ ಸಿಕ್ಕಾಗಲೆಲ್ಲ ತಾಯಿ ಜತೆ ಕೈ ಜೋಡಿಸುತ್ತಾರೆ. ದೊಡ್ಡ ಮಗ ವಿಷ್ಣು ಪಿಎಸ್‌ಸಿ ಪರೀಕ್ಷೆ ತಯಾರಾಗುತ್ತಿದ್ದರೆ ಕಿರಿಯ ಮಗ ವಿಶಾಖ್ ಪಿಎಚ್‌ಡಿ ಪಡೆದಿದ್ದಾನೆ. ಸುಮಾರು 50 ವಿಧದ ಮರ ಬೆಳೆದಿರುವ ಜಯಶ್ರೀ ಕೆಲವು ಔಷಧೀಯ ಗಿಡಗಳನ್ನೂ ಆರೈಕೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಗಿಡಗಳ ಸಹವಾಸದಿಂದ ದುಃಖ ಮರೆತ ಜಯಶ್ರೀ ಊರಿನ ನೀರಿನ ಸಮಸ್ಯೆಯನ್ನೂ ಬಗೆಹರಿಸಿ ಮಾದರಿಯಾಗಿದ್ದಾರೆ. ರಮೇಶ್ ಬಳ್ಳಮೂಲೆ, ಕಾಸರಗೋಡು