ಉಡುಪಿ: ಜಿಲ್ಲೆಯ ಕೊರಗ ಸಮುದಾಯದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ವಿಶೇಷ ಆದ್ಯತೆ ನೀಡಿ ಕೊರಗ ಪ್ಯಾಕೇಜ್ ಯೋಜನೆಯಡಿ 10ಕೋ ರೂ. ಅನುದಾನ ನೀಡಿದೆ. ಆ ಯೋಜನೆಯಡಿ ಅಲೆವೂರು ಸಿದ್ದಾರ್ಥ ನಗರದ ಕೊರಗ ಸಮುದಾಯದವರಿಗೆ ಸಭೆ ಸಮಾರಂಭ ಹಮ್ಮಿಕೊಳ್ಳಲು 20 ಲ. ರೂ. ವೆಚ್ಚದಲ್ಲಿ ಕೊರಗ ಭವನ ನಿರ್ಮಿಸಲಾಗುವುದು ಎಂದು ಶಾಸಕ ವಿನಯ್ ಕುಮಾರ್ ಸೊರಕೆ ತಿಳಿಸಿದರು.
ಅವರು ಅಲೆವೂರು ಸಿದ್ಧಾರ್ಥ ನಗರಕ್ಕೆ ಭೇಟಿ ನೀಡಿ ಕೊರಗ ಸಮುದಾಯದ ಜನರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭ ಕಾಂಗ್ರೆಸ್ ಮುಖಂಡ ಅಲೆವೂರು ಹರೀಶ್ ಕಿಣಿ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರವೀಣ್ ಶೆಟ್ಟಿ, ಗ್ರಾ. ಪಂ. ಅಧ್ಯಕ್ಷ ಶ್ರೀಕಾಂತ್ ನಾಯಕ್, ಗ್ರಾ. ಪಂ. ಸದಸ್ಯರಾದ ಸುಧಾಕರ್ ಪೂಜಾರಿ, ಆನಂದ ಕೊರಂಗ್ರಪಾಡಿ, ಸುಂದರ್ ನಾಯಕ್, ಪ್ರಭಾವತಿ ಮೆನನ್, ಸ್ವಾತಿ ಪ್ರಭು, ಪುಷ್ಪಾ$ಅಂಚನ್, ಅಮೃತಾ ಉಮೇಶ್ ಕೋಟ್ಯಾನ್, ಜಿಲ್ಲಾ ಕೊರಗ ಅಭಿವೃದ್ಧಿ ಸಂಘದ ಅಧ್ಯಕ್ಷ ರವಿ, ಸಿದ್ದಾರ್ಥ ಕ್ರಿಕೆಟರ್ಸ್‌ನ ಸುರೇಶ್, ಮಾಜಿ ಗ್ರಾ. ಪಂ. ಸದಸ್ಯ ಸುರೇಶ್ ನಾಯ್ಕ, ಗೋಪಾಲ್ ಸೇರಿಗಾರ್, ಐಟಿಡಿಪಿ ಅಧಿಕಾರಿ ಗಾಂವ್ಕರ್, ಪಂ. ಅಭಿವೃದ್ಧಿ ಅಧಿಕಾರಿ ಬೂದ ಪೂಜಾರಿ, ಅಸಿಸ್ಟೆಂಟ್ ಎಂಜಿನಿಯರ್ ಉಮಾಶಂಕರ್, ರೆವೆನ್ಯೂ ಅಧಿಕಾರಿ ಸುಧಾಕರ್ ಶೆಟ್ಟಿ ಉಪಸ್ಥಿತರಿದ್ದರು.